ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಪ್ರತಿಭಟನೆ

| Published : Aug 25 2025, 01:00 AM IST

ಸಾರಾಂಶ

ಧರ್ಮಸ್ಥಳದಲ್ಲಿ ನಡೆದಿರುವ ಧರ್ಮವಿರೋಧಿ ಚಟುವಟಿಕೆ ಮತ್ತು ವೀರೇಂದ್ರ ಹೆಗಡೆ ವಿರುದ್ಧ ನಡೆದಿರುವ ಅಪಪ್ರಚಾರದ ವಿರುದ್ಧ ಪಿತೂರಿ ನಡೆಸುತ್ತಿರುವ ಎಡಪಂಥೀಯ ಮತ್ತು ಧರ್ಮ ವಿರೋಧಿ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು

ಗಂಗಾವತಿ: ಧರ್ಮಸ್ಥಳದಲ್ಲಿ ನಡೆದಿರುವ ಧರ್ಮ ವಿರೋಧಿ ಚಟುವಟಿಕೆ ಮತ್ತು ವೀರೇಂದ್ರ ಹೆಗಡೆ ವಿರುದ್ಧದ ಅಪಪ್ರಚಾರ ಖಂಡಿಸಿ ದೈವಜ್ಞ ಬ್ರಾಹ್ಮಣ ಸಮಾಜ ಮತ್ತು ಸದ್ಬಾವನಾ ಸೇವಾ ಸಂಸ್ಥೆಯಿಂದ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಇರುವ ಬಸವೇಶ್ವರ ಮೂರ್ತಿ ಮುಂದೆ ಪ್ರತಿಭಟನೆ ನಡೆಸಿದರು.

ಧರ್ಮಸ್ಥಳದಲ್ಲಿ ನಡೆದಿರುವ ಧರ್ಮವಿರೋಧಿ ಚಟುವಟಿಕೆ ಮತ್ತು ವೀರೇಂದ್ರ ಹೆಗಡೆ ವಿರುದ್ಧ ನಡೆದಿರುವ ಅಪಪ್ರಚಾರದ ವಿರುದ್ಧ ಪಿತೂರಿ ನಡೆಸುತ್ತಿರುವ ಎಡಪಂಥೀಯ ಮತ್ತು ಧರ್ಮ ವಿರೋಧಿ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂಬಂಧಿಸಿದ ವ್ಯಕ್ತಿಗಳ ಮೇಲೆ ಎಫ್ ಐ ಆರ್ ದಾಖಲಿಸಬೇಕೆಂದು ಸರ್ಕಾರಕ್ಕೆ ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಧರ್ಮಸ್ಥಳ ಮಂಜುನಾಥ ಗುಂಪಿನ ನೀಲಕಂಠಪ್ಪ, ವಿಶ್ವ ಹಿಂದೂ ಪರಿಷತ್ತಿನ ವಿಠ್ಠಲ್ ನಾವಡೆ, ಮನೋಹರ ಗೌಡ ಸದ್ಭಾವನ ಸಂಸ್ಥೆಯ ಸುಬ್ರಮಣ್ಯ ಭಟ್, ಶ್ರವಣಕುಮಾರ್ ರಾಯ್ಕರ್, ಆರ್ಯವೈಶ್ಯ ಸಮಾಜದ ಸಿರಿಗೇರಿ ಕಾಶಿನಾಥ್, ನಾಗೇಶ್, ಅಶೋಕ್ ಕುಮಾರ್ ರಾಯ್ಕರ್, ರಾಜು ದಿವಾಕರ, ಬಾಲಾಜಿ ಪಾಲಂಕರ್ , ಚಂದ್ರಕಾಂತ್ ದರೋಜಿ, ಡಾ. ಸತೀಶ ರಾಯ್ಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.