ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿರೋಧಿಸಿ ಪ್ರತಿಭಟನೆ

| Published : Dec 31 2024, 01:01 AM IST

ಸಾರಾಂಶ

Protest against the statement of the deceitful Narayanaswamy

-ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೊರಚರ ಮಹಾಸಂಘದಿಂದ ಆಕ್ರೋಶ

-----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪರಿಶಿಷ್ಟ ಜಾತಿ ಅಲೆಮಾರಿ ಪಟ್ಟಿಯಲ್ಲಿರುವ ಅಧಿಕೃತ ಪಟ್ಟಿಯಿಂದ ಕೊರಚ-ಕೊರಮ ಸಮುದಾಯ ಹೊರಗಿಡುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕೊರಚರ ಮಹಾಸಂಘದಿಂದ ಪ್ರತಿಭಟನೆ ನಡೆಯಿತು.

ಬೆಳಗಾವಿ ಅಧಿವೇಶನದ ವೇಳೆ ಸುವರ್ಣಸೌಧದ ಹೊರಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿದ ಕೆಲವು ಪುಡಿ ನಾಯಕರು ಅಲೆಮಾರಿ ಸಮುದಾಯಗಳಲ್ಲಿ ಒಡಕು ತರುವಂತಹ ಪ್ರಯತ್ನ ನಡೆಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.

ಪ.ಜಾ 51 ಜಾತಿ ಗಳನ್ನುಒಳಗೊಂಡಂತೆ ಅಲೆಮಾರಿ ನಿಗಮ ಸ್ಥಾಪಿಸಿರುವುದು ಬಿಜೆಪಿ ಸರ್ಕಾರ. ಅಲೆಮಾರಿಗಳು ಅಮಾಯಕರು, ಅವಿದ್ಯಾವಂತರು ಎಂದು ತಿಳಿದು ಸಣ್ಣಸಣ್ಣ ಸೂಕ್ಷ್ಮ ಸಮುದಾಯಗಳನ್ನು ಎತ್ತಿಕಟ್ಟಿ ಜಗಳ ತಂದಿಡುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಚೆಲುವಾದಿ ನಾರಾಯಣಸ್ವಾಮಿ ಅವರ ಹೇಳಿಕೆಯಲ್ಲಿ ಕೊರಚ ಸಮಾಜದಿಂದ ಖಂಡಿಸುತ್ತೇವೆ. ರಾಜ್ಯ ಸರ್ಕಾರ ಈ ಜನಾಂಗವನ್ನು ಅಲೆಮಾರಿ ಪಟ್ಟಿಯಲ್ಲಿ ಉಳಿಸಿ ಈಗಿರುವ ಯಥಾ ಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪತ್ರಿಭಟನೆಯಲ್ಲಿ ರಾಜ್ಯ ಕೊರಚ ಮಹಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್. ಪ್ರಭು, ಜಿಲ್ಲಾಧ್ಯಕ್ಷ ಶ್ರೀನಿವಾಸ್ ಜೆ. ಪ್ರಮುಖರಾದ ಬಿ.ಎನ್.ಸುರೇಶ್, ಪ್ರಕಾಶ್ ಲಿಗಾಡಿ, ಎನ್. ಸುರೇಶ್, ಸಿದ್ಧೇಶ್ ಮಾದಾಪುರ, ಕೆ.ಧರ್ಮಪ್ಪ, ಅಶೋಕ್, ಪರಮೇಶಿ, ಶಿವಕುಮಾರ್ ಇದ್ದರು.

------------------------------

ಪೊಟೋ: ಶಿವಮೊಗ್ಗದಲ್ಲಿ ಪ.ಜಾ ಅಲೆಮಾರಿ ಪಟ್ಟಿಯಲ್ಲಿರುವ ಅಧಿಕೃತ ಪಟ್ಟಿಯಿಂದ ಕೊರಚ-ಕೊರಮ ಸಮುದಾಯ ಹೊರಗಿಡುವಂತೆ ವಿ.ಪ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿರೋಧಿಸಿ ಜಿಲ್ಲಾ ಕೊರಚರ ಮಹಾಸಂಘದಿಂದ ಪ್ರತಿಭಟನೆ ನಡೆಯಿತು.

30ಎಸ್‌ಎಂಜಿಕೆಪಿ03