ಷೇರುದಾರರನ್ನು ಅನುಮತಿ ಇಲ್ಲದೆ ಬೇರೆ ಸಹಕಾರ ಸಂಘಕ್ಕೆ ವರ್ಗಾವಣೆಗೆ ವಿರೋಧಿಸಿ ಪ್ರತಿಭಟನೆ

| Published : Mar 29 2024, 12:50 AM IST

ಷೇರುದಾರರನ್ನು ಅನುಮತಿ ಇಲ್ಲದೆ ಬೇರೆ ಸಹಕಾರ ಸಂಘಕ್ಕೆ ವರ್ಗಾವಣೆಗೆ ವಿರೋಧಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಾಲೇನಹಳ್ಳಿ, ಹೊಸೂರು ಮತ್ತು ಹಾಲೇನಹಳ್ಳಿ ಗೊಲ್ಲರಹಟ್ಟಿಯ ಷೇರುದಾರರನ್ನು ಅನುಮತಿ ಇಲ್ಲದೆ ವಿಭಜಿಸಿರುವ ಧೋರಣೆ ಖಂಡಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ತಾಲೂಕು ಸಮಿತಿಯು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್‌ಗೆ ಮನವಿ ಪತ್ರ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ತಿಪಟೂರುತಾಲೂಕಿನ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಾಲೇನಹಳ್ಳಿ, ಹೊಸೂರು ಮತ್ತು ಹಾಲೇನಹಳ್ಳಿ ಗೊಲ್ಲರಹಟ್ಟಿಯ ಷೇರುದಾರರನ್ನು ಅನುಮತಿ ಇಲ್ಲದೆ ವಿಭಜಿಸಿರುವ ಧೋರಣೆ ಖಂಡಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ತಾಲೂಕು ಸಮಿತಿಯು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್‌ಗೆ ಮನವಿ ಪತ್ರ ಸಲ್ಲಿಸಿತು.

ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಎನ್. ಸ್ವಾಮಿ ಮಾತನಾಡಿ, ಮಣಕಿಕೆರೆ ಪಂಚಾಯಿತಿಯ ಗ್ರಾಮಗಳನ್ನು ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಿಂದ ಬಿಡುಗಡೆಗೊಳಿಸಬೇಕೆಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಾರ್ಪಾಡು ಆದೇಶ ನೀಡಿದ್ದಾರೆ. ಇದರಿಂದಾಗಿ ಮಣಕಿಕೆರೆ ಗ್ರಾಮ ಪಂಚಾಯಿತಿಯಡಿ ಬರುವ ಹಲವಾರು ಗ್ರಾಮಗಳ ಷೇರುದಾರರಿಗೆ, ರೈತರಿಗೆ ಬಹಳಷ್ಟು ಅನಾನುಕೂಲವಾಗುತ್ತಿದೆ. ಹಲವಾರು ದಶಕಗಳಿಂದ ಮಣಕಿಕೆರೆ ಗ್ರಾಮ ಪಂಚಾಯಿತಿಯ ಗ್ರಾಮಗಳ ನೂರಾರು ರೈತರು ಹಾಲ್ಕುರಿಕೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಷೇರುದಾರರಾಗಿ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಈಗ ಏಕಾಏಕಿ, ಷೇರುದಾರರ ಗಮನಕ್ಕೂ ತಾರದೆ ವಿಭಜಿಸಿ, ಮಣಕೀಕೆರೆ ವ್ಯಾಪ್ತಿಯ ಹೊಸ ಸಂಘಕ್ಕೆ ಬಲವಂತವಾಗಿ ಸೇರಿಸುತ್ತಿರುವುದು ಸರಿಯಲ್ಲ ಎಂದರು.

ಆದರೆ ಹಾಲ್ಕುರಿಕೆ ಸಂಘದ ವಿಶೇಷ ಸರ್ವ ಸದಸ್ಯರ ಸಭೆಯನ್ನು ಕರೆದು ಷೇರುದಾರರನ್ನು ಇಲ್ಲೇ ಉಳಿಸಿಕೊಳ್ಳಲು ತೀರ್ಮಾ ನಿಸಬೇಕೆಂದು ಸಹಾಯಕ ನಿಬಂಧಕರು ತಿಳಿಸಿದ್ದರೂ ಸಭೆ ನಡೆದಿಲ್ಲ. ಸಹಕಾರ ಸಂಘಗಳ ಮುಖ್ಯ ಆಶಯವೇ ಸಹಕಾರಿ ತತ್ವದಲ್ಲಿ ಸ್ಥಳೀಯ ಆಡಳಿತವಿರಬೇಕು. ಸ್ಥಳೀಯ ಸಮಿತಿಗಳು ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರಬೇಕೆಂ ಬುದು. ಹಾಗಾಗಿ ಹಾಲ್ಕುರಿಕೆ ಷೇರುದಾರರನ್ನು ವರ್ಗಾಯಿಸುವ ಆದೇಶವನ್ನು ಮತ್ತೆ ನೀಡಿರುವುದು ಖಂಡನೀಯವಾಗಿದ್ದು, ತಾವು ಕೂಡಲೇ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿ ಷೇರುದಾರರಿಗೆ ಆಗುವ ಅನಾನುಕೂಲಗಳನ್ನು ತಪ್ಪಿಸಬೇಕೆಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಆಗ್ರಹಿಸಿದರು. ಜಂಟಿ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾತನಾಡಿ, ಮಣಕಿಕೆರೆ ಗ್ರಾಮ ಪಂಚಾಯಿತಿಯಡಿ ಬರುವ ಹಾಲೇನಹಳ್ಳಿ, ಹಾಲೇನಹಳ್ಳಿ ಗೊಲ್ಲರಹಟ್ಟಿ, ಹೊಸೂರು ಮುಂತಾದ ಗ್ರಾಮಗಳಿಗೆ ಹಾಲ್ಕುರಿಕೆಯಲ್ಲೇ ವ್ಯಾಪಾರ, ವ್ಯವಹಾರಗಳಿರುವುದು. ಅಲ್ಲಿ ಬ್ಯಾಂಕು, ತುಮಕೂರು ಒನ್, ಇನ್ನಿತರ ಸೌಲಭ್ಯಗಳಿವೆ. ಅಲ್ಲಿಗೆ ಸಂಚಾರ ವ್ಯವಸ್ಥೆಯೂ ಇದೆ. ಅಲ್ಲದೆ ಈ ಭಾಗದ ನೂರಕ್ಕೂ ಹೆಚ್ಚು ಷೇರುದಾರರು ಸಾಲದ ಸೌಲಭ್ಯವನ್ನು ಹಾಲ್ಕುರಿಕೆ ಸಂಘದಲ್ಲಿ ಪಡೆದುಕೊಂಡಿರುತ್ತಾರೆ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರಿಗೆ ಸಾಲ ಮರುಪಾವತಿ ಮಾಡುವುದು ಅಸಾಧ್ಯವಾಗಿದ್ದು, ಹೊಸ ಸಂಘಕ್ಕೆ ಸೇರಿಸಿದರೆ ರೈತರು ವಿಪರೀತ ಕಷ್ಟಕ್ಕೊಳಗಾಗುತ್ತಾರೆ. ಹಾಗಾಗಿ ಹೊಸ ಸಂಘಕ್ಕೆ ಮಣಕೀಕೆರೆ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸದಂತೆ ಮಾರ್ಪಾಡು ಆದೇಶವನ್ನು ಹೊರಡಿಸಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ತಾಲೂಕು ಸಹಾಯಕ ನಿಬಂಧಕರಾದ ಹರೀಶ್‌ಕುಮಾರ್ ಆಗಮಿಸಿ ಇನ್ನೆರಡು ದಿನಗಳಲ್ಲಿ ರೈತರಿಗೆ ಸಾಲ ನೀಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕು ಉಪಾಧ್ಯಕ್ಷ ರಂಗಧಾಮಯ್ಯ, ಭೈರನಾಯ್ಕನಹಳ್ಳಿ ಲೋಕೇಶ್, ಷೇರುದಾರರಾದ ಸಾವಿತ್ರಮ್ಮ, ಲತಾ, ಪವಿತ್ರ, ಮಲ್ಲಿಕಾರ್ಜುನ್, ಆನಂದ್, ರಾಜಣ್ಣ ಮತ್ತಿತರರಿದ್ದರು.