ಸಾರಾಂಶ
-ಮಾನವ ಸರಪಳಿ ನಿರ್ಮಿಸಿ ಬಿಜೆಪಿಯ ಉದ್ಧಟತನದ ನಿರ್ಧಾರಕ್ಕೆ ವಿರೋಧ
----ಕನ್ನಡಪ್ರಭ ವಾರ್ತೆ ಕೊಡೇಕಲ್
ಶಾಸಕ ಬಸನಗೌಡ ಪಾಟೀಲ್ ಅವರನ್ನು 6 ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದ್ದನ್ನು ಖಂಡಿಸಿ ಯತ್ನಾಳ್ ಅಭಿಮಾನಿ ಬಳಗದ ವತಿಯಿಂದ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಗ್ರಾಮದ ಗದ್ದೆಮ್ಮ ಕಟ್ಟಿಯಿಂದ ಆರಂಭವಾದ ಪ್ರತಿಭಟನೆ ಬಸವೇಶ್ವರ ವೃತ್ತದಲ್ಲಿ ಧಿಕ್ಕಾರ ಕೂಗುತ್ತ, ರಾಜ್ಯ ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ಗದ್ದೆಮ್ಮಕಟ್ಟಿಯ ಬಳಿ ಮಾನವ ಸರಪಳಿ ನಿರ್ಮಿಸಿ ಬಿಜೆಪಿಯ ಉದ್ಧಟತನದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ಸಮಾಜದ ಮುಖಂಡ ಸಂಗಮೇಶ ಬಿರಾದಾರ್ ಮಾತನಾಡಿ, ರಾಜ್ಯ ಬಿಜೆಪಿಯಲ್ಲಿನ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ ವಿರೋಧಿಸುತ್ತ ಬಂದಿದ್ದಕ್ಕೆ ರಾಜ್ಯದ ಕೆಲವು ನಾಯಕರ ಮಾತಿಗೆ ಕಿವಿಗೊಟ್ಟು ಕೇಂದ್ರ ಬಿಜೆಪಿಯ ಶಿಸ್ತು ಸಮಿತಿಯು ಯತ್ನಾಳ ಅವರನ್ನು ಉಚ್ಛಾಟಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನೇ ಉಚ್ಛಾಟಿಸುವಂತಹ ಕೆಲಸವನ್ನು ಮಾಡಿದ್ದಾರೆ, ರಾಜ್ಯದಲ್ಲಿ ಹಿಂದುತ್ವದ ಪರ ಕೆಲಸ ಮಾಡುವ ಪ್ರತಾಪಸಿಂಹ, ಈಶ್ವರಪ್ಪ, ಅನಂತಕುಮಾರ ಹೆಗಡೆ ಅಂತಹವರನ್ನು ಕಡೆಗಣಿಸಿದಂತೆಯೇ, ಇದೀಗ ಯತ್ನಾಳ ಅವರಿಗೂ ಅವಮಾನಿಸಿ ಬೆಜೆಪಿಯು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ, ಕೂಡಲೇ ಈ ಕುರಿತು ಮರುಪರಿಶೀಲಿಸಿ ಪಕ್ಷದಲ್ಲಿ ಯತ್ನಾಳ ಅವರಿಗೆ ಸೂಕ್ತ ಸ್ಥಾನಮಾನ ನಿಡಬೇಕೆಂದು ಹೇಳಿದರು.ಬಸನಗೌಡ ಪಾಟೀಲ್ ಅಣಿಮಾನಿ ಮಲ್ಲನಗೌಡ ಹಾರಲಗಡ್ಡಿ ಮಾತನಾಡಿದರು. ಮುಖಂಡರಾದ ಗುಂಡಣ್ಣ ನಗನೂರು, ಶಿವಣ್ಣ ಕಡಕಲ್ಲ, ಸುಭಾಷ ಪಟಶೆಟ್ಟಿ, ಸಂತೋಷ ದೇವೂರ, ಶರಣಬಸವ ಧನ್ನೂರ, ಇರಸಂಗಪ್ಪ ಅಂಬ್ಲಿಹಾಳ, ಸಂಗಣ್ಣ ಪೋಲಿಸ್ ಪಾಟೀಲ, ಬಸವರಾಜ ಜೇವರ್ಗಿ, ಬಸಣ್ಣ ಧನ್ನೂರ, ಬಸನಗೌಡ ಪೋಲಿಸ್ ಪಾಟೀಲ, ಶರಣು ತಾಳಿಕೋಟಿ, ಭೀಮನಗೌಡ ಇದ್ದರು.
-----28ವೈಡಿಆರ್5: ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿರುವುದನ್ನು ವಿರೋಧಿಸಿ ಕೊಡೇಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಲಾಯಿತು.