ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಪರಿಶಿಷ್ಟ ಜಾತಿ ಮತ್ತು ಮಹಿಳೆಯರ ಬಗ್ಗೆ ಬಿಜೆಪಿ ಶಾಸಕ ಮುನಿರತ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೂಟ ಪಟ್ಟಣದ ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ದಲಿತ ಮುಖಂಡರಾದ ಸಾಗ್ಯ ಕೆಂಪಣ್ಣ ಮಾತನಾಡಿ, ಶಾಸಕ ಮುನಿರತ್ನ ದಲಿತರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿ, ಮಹಿಳೆಯರಿಗೆ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡಿಸಿದರು.
ಇದು ನಾಗರೀಕ ಸಮಾಜ ತಲೆತಗ್ಗಿಸುವಂತಹ ಪ್ರಕರಣ. ಕಸ ವಿಲೇವಾರಿ ವಿಷಯದಲ್ಲಿ ಕಮೀಷನ್ ನೀಡುವಂತೆ ಬೇಡಿಕೆ ಇಡುವ ಜೊತೆಗೆ ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತಾನಾಡಿದ್ದು ಕೊಳಕು ಮನಸ್ಥಿತಿ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆ ಪ್ರಕರಣ ಹಾಗೂ ದಲಿತರ ಮಾನಹಾನಿ, ಚೆಲುವರಾಜ್ ಅವರನ್ನು ಕೊಲೆ ಬೆದರಿಕೆ ಹಾಕಿರುವ ಶಾಸಕರ ಮೇಲೆ ಕಠಿಣ ಕ್ರಮ ಹಾಗೂ ಮಹಿಳೆಯರ ಬಗ್ಗೆ ನಿಂದಿಸಿರುವ ಮುನಿರತ್ನ ಅವರನ್ನು ಬಿಜೆಪಿ ಪಕ್ಷ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಿಂದ ಗಡಿಪಾರು ಮಾಡಬೇಕು. ಪೊಲೀಸ್ ಇಲಾಖೆ ಅವರ ಮೇಲೆ ಇರುವ ಅಕ್ರಮಗಳನ್ನು ಪತ್ತೆ ಹಚ್ಚಿ ಅವರನ್ನು ಶಾಶ್ವತವಾಗಿ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿ ನಾಡ ಕಚೇರಿ ಸಿಬ್ಬಂದಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸ ಅಧಿಕಾರಿ ಎಎಸ್ಐ ಶಿವಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಬಾ.ಗೋ. ಕುಮಾರ್, ಎಚ್.ಬಸಾಪುರ ಉಪಾಧ್ಯಕ್ಷ ಬಿ.ಡಿ.ರಾಜೇಂದ್ರ, ದಲಿತ ಮುಖಂಡರಾದ ಕಟಕಯ್ಯ, ನಂಜುಂಡಸ್ವಾಮಿ, ವೆಂಕಟೇಶ್ ಸೊಲಬ, ಸಿದ್ದಯ್ಯ, ನಾಗೇಂದ್ರ, ನಾಗಯ್ಯ, ನಾಗೇಂದ್ರ, ಸಿದ್ದಲಿಂಗಮೂರ್ತಿ ಕೆ.ಜಿ, ಮಹೇಶ್ ಮೌರ್ಯ, ಹಗಾದೂರು ರಾಜ, ಶಿವಣ್ಣ, ಅಮರ ಕುಮಾರ್, ಶಿವಮಾಧು, ಅರುಣ್ ಕುಮಾರ್, ದೇವರಾಜ್, ಸುರೇಶ್, ಕುಮಾರಸ್ವಾಮಿ, ಶ್ರೇಯಸ್, ಬೈರಾ, ಗಿರೀಶ್, ಯಶವಂತ್, ವೆಂಕಟೇಶ್, ಶಿವಪ್ರಸಾದ್, ಶಿವ ಕುಮಾರ್, ರಮೇಶ್, ಸುನೀಲ್, ಸಿದ್ದಯ್ಯ ಹಲಗೂರು, ಪುಟ್ಟಸ್ವಾಮಿ, ಬಲಮಹಾದೇವ, ಆನಂದ್, ಜಯಶಂಕರ್ ಸೇರಿದಂತೆ ಇತರರು ಹಾಜರಿದ್ದರು.ಮುನಿರತ್ನ ಶಾಸಕ ಸ್ಥಾನ ರದ್ದುಪಡಿಸುವಂತೆ ಪ್ರತಿಭಟನೆ
ಮದ್ದೂರು:ಪರಿಶಿಷ್ಟ ಜಾತಿ ಮತ್ತು ಜನಾಂಗದ ಮಹಿಳೆ ಬಗ್ಗೆ ಅವಹೇಳನಕಾರಿ ನಿಂದಿಸಿರುವ ಆರ್.ಮುನಿರತ್ನ ಅವರ ಶಾಸಕತ್ವವನ್ನು ರದ್ದುಪಡಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ಸಂಘಟನೆ ಮುಖಂಡ ಸೋಮನಹಳ್ಳಿ ಅಂದಾನಿ ನೇತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಶಾಸಕ ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗಿದರು.ದಲಿತ ಕೋಮಿನ ಮಹಿಳೆಯರ ಬಗ್ಗೆ ಅವ್ಯಾಚ ಶಬ್ದಗಳಿಂದ ನಿಂದಿಸಿರುವ ಶಾಸಕ ಮುನಿರತ್ನ ಅವರ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ವಿಧಾನ ಸಭಾ ಅಧ್ಯಕ್ಷರು ಈ ಕೂಡಲೇ ಮುನಿರತ್ನ ಅವರ ಶಾಸಕತ್ವವನ್ನು ರದ್ದುಪಡಿಸಿ, ಕಠಿಣ ಶಿಕ್ಷೆಯಾಗುವಂತೆ ನ್ಯಾಯಾಲಯಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಎಂ.ಸತ್ಯ, ಶಂಕರ್, ಅಂಬರೀಷ್, ಶಿವು, ಸಣ್ಣಪ್ಪ, ಸಿದ್ದರಾಜು, ರವಿ, ರಾಜೇಶ, ಸಿದ್ದರಾಮು ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.