ಸಾರಾಂಶ
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ ವಿರೋಧಿಸಿ, ಕೂಡಲೇ ಸೌಲಭ್ಯ ವಿತರಣೆ ಮಾಡುವಂತೆ ಆಗ್ರಹಿಸಿ ಎಸ್ಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಹೊರವಲಯದ ಆರ್‌ಟಿಒ ಕಚೇರಿ ಬಳಿಯ ಸಮಾಜ ಕಲ್ಯಾಣ ಇಲಾಖೆಯ ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಎದುರು ವಿದ್ಯಾರ್ಥಿಗಳು ಧರಣಿ ನಡೆಸಿದರು.
ಹಾವೇರಿ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ ವಿರೋಧಿಸಿ, ಕೂಡಲೇ ಸೌಲಭ್ಯ ವಿತರಣೆ ಮಾಡುವಂತೆ ಆಗ್ರಹಿಸಿ ಎಸ್ಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಹೊರವಲಯದ ಆರ್‌ಟಿಒ ಕಚೇರಿ ಬಳಿಯ ಸಮಾಜ ಕಲ್ಯಾಣ ಇಲಾಖೆಯ ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಎದುರು ವಿದ್ಯಾರ್ಥಿಗಳು ಧರಣಿ ನಡೆಸಿದರು.
ವಸತಿ ನಿಲಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ, ಇದರಲ್ಲಿ ಬಹುತೇಕ ವಿದ್ಯಾರ್ಥಿಗಳ ಕಡು ಬಡತನದ ದಲಿತ ವಿದ್ಯಾರ್ಥಿಗಳೇ ಇದ್ದಾರೆ. ವಸತಿ ನಿಲಯದಲ್ಲಿ ಸ್ವಚ್ಛತೆ ಸಮಸ್ಯೆ ವಿಪರೀತವಾಗಿದ್ದು, ವಿದ್ಯಾರ್ಥಿಗಳು ತಿನ್ನುವ ಗೋಧಿಯನ್ನು ಚರಂಡಿ ಪಕ್ಕದಲ್ಲಿ ಒಣಗಿಸಲಾಗಿದೆ. ಕಂಪ್ಯೂಟರ್ ಲ್ಯಾಬನ್ನು ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡದೆ ಅಲ್ಲಿನ ವಸ್ತುಗಳು, ಪುಸ್ತಕಗಳನ್ನು ಹಾಳು ಮಾಡುತ್ತಾರೆ ಎಂಬ ನೆಪದಲ್ಲಿ ಅನೇಕ ತಿಂಗಳಿಂದ ಬೀಗ ಹಾಕಿದ್ದಾರೆ. ಮೂರು ತಿಂಗಳಿಂದ ಬಂದ ಬೆಡ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡದೆ ಸತಾಯಿಸಿದ್ದಾರೆ ಎಂದು ವಿದ್ಯಾರ್ಥಿಗಳು ಸಮಸ್ಯೆ ತೆರೆದಿಟ್ಟರು. ಶೌಚಾಲಯ ಅವ್ಯವಸ್ಥೆ, ಮೂಲಸೌಲಭ್ಯಗಳ ಕೊರತೆ ನೋಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಆಸಕ್ತಿ ಕುಂದುಹೋಗಿದೆ. ವಸತಿ ನಿಲಯದ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳಾದ ಪುಸ್ತಕ, ನೀರಿನ ಬಕೆಟ್, ತಟ್ಟೆ, ಲೋಟ, ಶುಚಿ ಕಿಟ್, ಪ್ರಥಮ ಚಿಕಿತ್ಸಾ ಕಿಟ್, ಆಟದ ಸಾಮಗ್ರಿಗಳು, ಬೆಡ್ ಶೀಟ್‌ಗಳನ್ನು ಕೊಡಿ ಎಂದು ವಿದ್ಯಾರ್ಥಿಗಳು ವಾರ್ಡನ್ ಹಾಗೂ ತಾಲೂಕಾಧಿಕಾರಿ ಆಂಜನೇಯ ಹುಲ್ಲಾಳ ಅವರಿಗೆ ಅನೇಕ ಸಲ ಹೇಳಿಕೊಂಡಿದ್ದಾರೆ. ಮನವಿಗೆ ಸ್ಪಂದಿಸದೆ ಅಧಿಕಾರಿಗಳು ವಿದ್ಯಾರ್ಥಿಗಳನ್ನೆ ಆರೋಪಿ ಸ್ಥಾನದಲ್ಲಿ ಇಡಲು ಪೋಲಿಸ್ ಅಧಿಕಾರಿಗಳ ಬಳಕೆ ಮಾಡಿಕೊಂಡು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆ ಉದ್ದೇಶಿಸಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಬಡ, ದಲಿತ ವಿದ್ಯಾರ್ಥಿಗಳನ್ನು ಸರ್ಕಾರದ ಸೌಲಭ್ಯ ವಂಚನೆ ಮಾಡಲು ತಾಲೂಕಾಧಿಕಾರಿ ಆಂಜನೇಯ ಹುಲ್ಲಾಳ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಎಸ್ಎಫ್ಐ ಸಂಘಟನೆಯ ನಿರಂತರ ಹೋರಾಟದಿಂದ ಉಳಿಸಿಕೊಂಡು ಬಂದ ಕಂಪ್ಯೂಟರ್ ಲ್ಯಾಬ್ ಹಾಗೂ ಗ್ರಂಥಾಲಯದಲ್ಲಿ ಕುರ್ಚಿ, ಮೇಜು ಕಾಣುತ್ತಿಲ್ಲ. ಸಿಸಿಟಿವಿ ಕ್ಯಾಮರಾಗಳು ಎಲ್ಲಿ ಹೋದವು ಗೊತ್ತಿಲ್ಲ ಎಂದು ಪ್ರಶ್ನಿಸಿದರು. ಎಸ್ಎಫ್ಐ ಹಾಸ್ಟೆಲ್ ಉಪಸಮಿತಿಯ ರಾಜ್ಯ ಸಂಚಾಲಕ ಅರುಣ್ ನಾಗವತ್ ಮಾತನಾಡಿ, ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಇಲಾಖೆ ಕಟ್ಟುನಿಟ್ಟಾದ ಕ್ರಮತೆಗೆದುಕೊಳ್ಳಬೇಕು. ಹಾಸ್ಟೆಲ್‌ನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಲಕ್ಷಾಂತರ ರುಪಾಯಿ ಹಗರಣವಾಗಿದೆ ಎಂಬ ಅನುಮಾನ ಮೂಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ದೂರು ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು . ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿ ಫಕ್ಕಿರೇಶ್ ಮ್ಯಾಗಳಮನಿ ಮಾತನಾಡಿದರು. ಹಾಸ್ಟೆಲ್ ಘಟಕ ಅಧ್ಯಕ್ಷ ಸಂಜೀವ ಕೆ., ವಿನಾಯಕ ಶಿವೂರು, ಆಂಜನೇಯ ಸಜ್ಜಿ, ಹಾಸ್ಟೆಲ್ ಘಟಕ ಕಾರ್ಯದರ್ಶಿ ಮನೋಜ್ ಬಣಕಾರ್, ಉಪಾಧ್ಯಕ್ಷ ಕಿರಣ್ ಕೆ, ವಿನಾಯಕ್ ಶಿವುರು, ನಿಂಗಪ್ಪ ತಳವಾರ್, ಪ್ರತಾಪ್ ಎಸ್., ಹನುಮಂತ ಬಿ., ಗಣೇಶ್, ಪ್ರಶಾಂತ್ ಲಮಾಣಿ, ಸಕ್ರಪ್ಪ ಲಮಾಣಿ, ಆಕಾಶ್ ವಡ್ಡರ ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))