ಮಾಜಿ ಸಚಿವ ಜಮೀರ್‌ ಅಹ್ಮದ್ ಖಾನ್ ಅವರು ಜಾತಿ, ಪಕ್ಷ ಭೇದವನ್ನು ಮರೆತು ಕೆಲಸ ಮಾಡುವ ಏಕೈಕ ನಾಯಕ. ಶಕ್ತಿ ಮೀರಿ ರಾತ್ರಿ ಹಗಲು ನೋಡದೆ ಕಾಂಗ್ರೆಸ್ ಗೆ ದುಡಿದಿರುವ ಅಂತಹ ವ್ಯಕ್ತಿಯನ್ನು ಇವತ್ತು ಸಚಿವ ಸಂಪುಟದಲ್ಲಿ ಕಡೆಗಣಿಸುತ್ತಿರುವ ರಾಜ್ಯದ ಅಲ್ಪಸಂಖ್ಯಾತ ಸಮುದಾಯದವರು ಬಹಳಷ್ಟು ಬೇಸರದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಭೇರ್ಯ

ಗ್ರಾಮದ ಜಾಮೀಯ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ನಂತರ ಮೆರವಣಿಗೆ ಮೂಲಕ ಹಾಸನ-ಮೈಸೂರು ರಸ್ತೆಯ ಗಾಂಧಿ ವೃತ್ತದಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಜೀಜ಼ುಲ್ಲಾ ಅಜ್ಜು ಮಾತನಾಡಿ, ಮಾಜಿ ಸಚಿವ ಜಮೀರ್‌ ಅಹ್ಮದ್ ಖಾನ್ ಅವರು ಜಾತಿ, ಪಕ್ಷ ಭೇದವನ್ನು ಮರೆತು ಕೆಲಸ ಮಾಡುವ ಏಕೈಕ ನಾಯಕ ಎಂದು ಹೇಳಿದರು.

ಶಕ್ತಿ ಮೀರಿ ರಾತ್ರಿ ಹಗಲು ನೋಡದೆ ಕಾಂಗ್ರೆಸ್ ಗೆ ದುಡಿದಿರುವ ಅಂತಹ ವ್ಯಕ್ತಿಯನ್ನು ಇವತ್ತು ಸಚಿವ ಸಂಪುಟದಲ್ಲಿ ಕಡೆಗಣಿಸುತ್ತಿರುವ ರಾಜ್ಯದ ಅಲ್ಪಸಂಖ್ಯಾತ ಸಮುದಾಯದವರು ಬಹಳಷ್ಟು ಬೇಸರದಲ್ಲಿದ್ದಾರೆ ಎಂದರು.

ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ, ರಾಜ್ಯ ಹಜ್ ಸಮಿತಿ ಸದಸ್ಯ ಸಮಿ ಅಜ್ಜು, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಅಜ್ಗರ್ ಹುಣಸೂರು, ಭೇರ್ಯ ಜಾಮೀಯ ಮಸೀದಿ ಕಮಿಟಿ ಅಧ್ಯಕ್ಷ ಪರ್ವಿಜ಼್ ಖಾನ್, ಕಲೀಂ ಷರೀಫ್, ಗ್ರಾಪಂ ಮಾಜಿ ಸದಸ್ಯ ಇನಾಯತ್ ಮಾತನಾಡಿದರು.

ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ನಜ಼ೀರುದ್ದೀನ್ ಬಾಬು, ಹಜ್ ಕಮಿಟಿ ಸದಸ್ಯ ಹಾಜಿ ಹಿಮಯಾನ್ ಶರೀಫ್, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಅಮ್ಜದ್ ಪಾಷ, ಉಪಾಧ್ಯಕ್ಷ ರಜ಼ೀಕ್ ಬೇಗ್, ಕಾರ್ಯದರ್ಶಿ ಮಹಮ್ಮದ್ ಮನ್ಸೂರ್, ಹಾಜಿ ಪೀರ್ ಖಾನ್ ಸಾಬ್, ಸಮೀರ್, ಹಾಜಿ ಸಮಿಉಲ್ಲಾ ಖಾನ್, ಜನಾಬ್ ಸಬ್ದರ್ ಸಾಬ್, ಖಲೀಫತ್ ಸಾಬ್, ಮುಜ಼ಕ್ಕೀರ್ ಪಾಷ, ನೇಮತ್, ಸರ್ದಾರ್ ಷರೀಫ್, ಶಾಗೀಲ್ ಬೇಗ್, ಮುಸರತ್ ಖಾನ್, ವಸೀಂ ಬೇಗ್, ನಾಜ಼ೀಂ ಬೇಗ್, ಜ಼ಬೀಉಲ್ಲಾ ಬೇಗ್, ಖಾಲೀದ್, ಅಯಾನ್, ದಾನೀಷ್, ಕೌನೈನ್, ರಫೀ, ಅಕ್ರಮ ಖಾನ್, ಷಫೀಉಲ್ಲಾ ಖಾನ್, ಶಯಿಬ್, ಸಿರಾಜ್, ಮುಜ಼ಮಿಲ್, ಮಸ್ಕೂದ್, ಭೇರ್ಯ ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.