ಸಾರಾಂಶ
ಸಂಘದ ತಾಲೂಕು ಸದಸ್ಯರಾದ ಎಂ.ಶ್ರೀಧರ, ಡಿ.ಚಂದ್ರಪ್ಪ ಮೂಗುರು, ಪಾರ್ವತಿ, ಎಚ್.ಬಿ.ಮೂರ್ತಿ, ಡಿ. ರಾಮಚಂದ್ರ, ಹನುಮೇಶ್, ಅಶೋಕ, ಬಸವಣ್ಯಪ್ಪ, ನಾಗರಾಜ ಮುಂತಾದವರು ಇದ್ದರು.
ಆನವಟ್ಟಿ: ಇಲ್ಲಿಯ ಅಂಚೆ ಕಚೇರಿ ಬಳಿ ಬುಧವಾರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೊರಬ ತಾಲೂಕು ಅಖಿಲ ಕರ್ನಾಟಕ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಯಿತು.
2016ರಿಂದಲ್ಲೇ ಜಾರಿಗೆ ಬರುವಂತೆ ಕಮಲೇಶ್‌ಚಂದ್ರ ವೇತನ ಆಯೋಗ ಜಾರಿಗೊಳಿಸಬೇಕು, ಗ್ರಾಮೀಣ ಅಂಚೆ ನೌಕರರಿಗೆ 8 ತಾಸು ಕೆಲಸ ನೀಡಬೇಕು, ₹5 ಲಕ್ಷ ಮೊತ್ತದ ವಿಮೆ ನೀಡಬೇಕು, ಸೇವಾ ಹಿರಿಮೆ ಪರಿಗಣಿಸಿ, ಹಿರಿಯ ನೌಕಕರಿಗೆ ಹೆಚ್ಚಿನ ಸಂಬಳ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೂಡಲೇ ಕೇಂದ್ರ ಸರ್ಕಾರ ಈಡೇರಿಸಲು ಮುಂದಾಗಬೇಕು. ಇಲ್ಲವಾದರೇ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಂಘದ ತಾಲೂಕು ಸದಸ್ಯರಾದ ಎಂ.ಶ್ರೀಧರ, ಡಿ.ಚಂದ್ರಪ್ಪ ಮೂಗುರು, ಪಾರ್ವತಿ, ಎಚ್.ಬಿ.ಮೂರ್ತಿ, ಡಿ. ರಾಮಚಂದ್ರ, ಹನುಮೇಶ್, ಅಶೋಕ, ಬಸವಣ್ಯಪ್ಪ, ನಾಗರಾಜ ಮುಂತಾದವರು ಇದ್ದರು.
- - - -13ಕೆಪಿಎಎನ್‌ಟಿ1ಇಪಿ: