ಇಲ್ಲಿನ ಎಸ್‌ಆರ್‌ಕೆ ನಗರದ ಬಳಿಯಿರುವ ಬಾಲಕಿಯರ ವಸತಿ ನಿಲಯದ ಬಳಿ ಬಸ್ ನಿಲ್ಲಿಸಲು ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ರಸ್ತೆ ತಡೆದು ಪ್ರತಿಭಟಿಸಿ ವಾಯವ್ಯ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಇಲ್ಲಿನ ಎಸ್‌ಆರ್‌ಕೆ ನಗರದ ಬಳಿಯಿರುವ ಬಾಲಕಿಯರ ವಸತಿ ನಿಲಯದ ಬಳಿ ಬಸ್ ನಿಲ್ಲಿಸಲು ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ರಸ್ತೆ ತಡೆದು ಪ್ರತಿಭಟಿಸಿ ವಾಯವ್ಯ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅರುಣ್ ಕುಮಾರ ನಗವತ್ ಮಾತನಾಡಿ, ಎಸ್‌ಆರ್‌ಕೆ ನಗರದ ಬಳಿಯ ಸರ್ಕಾರಿ ಬಾಲಕಿಯರ ವಸತಿ ನಿಲಯದ ಬಳಿ ಬಸ್‌ಗಳನ್ನು ನಿಲ್ಲಿಸುವಂತೆ ವಿದ್ಯಾರ್ಥಿನಿಯರು ಹಲವಾರು ಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ವಿದ್ಯಾರ್ಥಿನಿಯರು ಬಸ್ ನಿಲ್ಲಿಸಲಿಲ್ಲ ಅಂತ ಹೇಳಿ ಫೋಟೋ, ವಿಡಿಯೋ ತೆಗೆದುಕೊಂಡು ಘಟಕ ವ್ಯವಸ್ಥಾಪಕರಿಗೆ ತಿಳಿಸಿದರೆ ವಾಹನ ಚಾಲಕರು ಹಾಗೂ ಕಂಡಕ್ಟರ್‌ಗಳು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸುತ್ತಿದ್ದರು. ಸಮಸ್ಯೆ ಇಷ್ಟು ಉಲ್ಬಣವಾಗಿದ್ದರೂ ಸಾರಿಗೆ ಅಧಿಕಾರಿಗಳಾಗಲಿ ಅಥವಾ ಶಾಸಕರಾಗಲಿ ಅದನ್ನು ಬಗೆಹರಿಸುವ ಕೆಲಸ ಮಾಡಿಲ್ಲ. ಅದಕ್ಕಾಗಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು.ಎಸ್‌ಎಫ್‌ಐ ತಾಲೂಕು ಅಧ್ಯಕ್ಷೆ ಸಿಂಧೂ ತಳವಾರ ಮಾತನಾಡಿದರು. ಎಸ್‌ಎಫ್‌ಐ ವಸತಿ ನಿಲಯ ಘಟಕದ ಅಧ್ಯಕ್ಷೆ ರೂಪ ಮಕ್ಕರವಳ್ಳಿ, ಸುನಿತಾ ಹನುಮಾಪುರ, ಅಶ್ವಿನಿ ದೇವಸುರ, ರಂಜಿತಾ ಲಮಾಣಿ, ಮಂಗಳ ಜಿ.ಎಚ್., ಕಾವೇರಿ ಲಮಾಣಿ, ಅಲಿಷಾ ಬಾನು, ಭಾರತಿ ಬೂದಿಹಾಳ, ಸೌಮ್ಯ ತಳವಾರ, ರಕ್ಷಿತಾ ವಾಸನ, ರಕ್ಷಿತಾ ಕೆ., ಸೀತಾ ಚವ್ಹಾಣ, ಶಶಿಕಲಾ ಕೆ., ಮಂಜುಳಾ ಕೆ., ಶ್ರುತಿ ಎಸ್., ಚೈತ್ರ ಲಮಾಣಿ, ಚಂದ್ರಿಕಾ, ಚಂದ್ರಿಕಲ ವಾಲಿಕಾರ, ಅನ್ನಪೂರ್ಣ ಲಮಾಣಿ, ಶಕುಂತಲಾ ಅನ್ವೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.