ಗ್ರಾಚ್ಯುಟಿ ಮೊತ್ತ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

| Published : Oct 30 2025, 01:15 AM IST

ಗ್ರಾಚ್ಯುಟಿ ಮೊತ್ತ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುರ್ಪ್ರಿಂ ಕೋರ್ಟ್ ಆದೇಶದಂತೆ ಕರ್ನಾಟಕದಲ್ಲಿಯೂ ಜಾರಿ ಮಾಡಬೇಕೆಂದು ಒತ್ತಾಯಿಸಿ 2023ರಲ್ಲಿ ದೀರ್ಘ ಚಳವಳಿ ನಡೆಸಿದ ನಂತರ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಗ್ರಾಚ್ಯುಟಿಯನ್ನು ಜಾರಿ ಮಾಡಿದೆ. ಅದೇಶದಂತೆ 2011ರಿಂದ 2023 ಮಾರ್ಚ್ ತನಕ 10,311 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರಿಗೆ ಅನ್ವಯಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸುರ್ಪ್ರಿಂ ಕೋರ್ಟ್ ಆದೇಶದಂತೆ 1972ರ ಗ್ರಾಚ್ಯುಟಿ ಮೊತ್ತವನ್ನು ನೀಡುವಂತೆ ಒತ್ತಾಯಿಸಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿ ಎದುರು ಪ್ರತಿಭಟನೆ ನಡೆಸಿದರು.1975ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಡಿಮೆ ಸಂಖ್ಯೆಯನ್ನು ಹೊಂದಿತ್ತು. ಆದರೆ, ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಫಲಾನುಭವವಿಗಳಿದ್ದು, ಮಾನವ ಸಂಪನ್ಮೂಲಗಳ ಬೆಳವಣಿಗೆಯನ್ನು ಖಾತ್ರಿಪಡಿಸುವ ಯೋಜನೆಯಾಗಿ ಬೆಳೆದಿದೆ. 2011ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.

ಸುರ್ಪ್ರಿಂ ಕೋರ್ಟ್ ಆದೇಶದಂತೆ ಕರ್ನಾಟಕದಲ್ಲಿಯೂ ಜಾರಿ ಮಾಡಬೇಕೆಂದು ಒತ್ತಾಯಿಸಿ 2023ರಲ್ಲಿ ದೀರ್ಘ ಚಳವಳಿ ನಡೆಸಿದ ನಂತರ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಗ್ರಾಚ್ಯುಟಿಯನ್ನು ಜಾರಿ ಮಾಡಿದೆ. ಅದೇಶದಂತೆ 2011ರಿಂದ 2023 ಮಾರ್ಚ್ ತನಕ 10,311 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರಿಗೆ ಅನ್ವಯಿಸಬೇಕೆಂದು ಒತ್ತಾಯಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಮಾರು 183 ಕೋಟಿ ಅನುದಾನ ಬಿಡುಗಡೆ ಮಾಡಿ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಆದರೆ, ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ. ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ಲತಾ, ಕಾರ್ಯದರ್ಶಿ ನಾಗಮ್ಮ, ಖಜಾಂಚಿ ಭಾಗ್ಯವತಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಾದ ರುದ್ರಮ್ಮ, ಹೊನ್ನಮ್ಮ, ಜಯಮ್ಮ, ಪುಟ್ಟಗೌರಮ್ಮ, ನಾಗೇಶ್ವರಿ, ಬಸಮ್ಮ, ಲಕ್ಷ್ಮಮ್ಮ, ವೆಂಕಟಮ್ಮ ಸೇರಿದಂತೆ ಹಲವರು ಇದ್ದರು.

ರಾಜ್ಯ ಮಟ್ಟದ ಜಾನಪದ ಮತ್ತು ಕನ್ನಡ ಗೀತೆಗಳ ಗುಂಪು ನೃತ್ಯ ಸ್ಪರ್ಧೆ ಭಾಗವಹಿಸಿ

ನಾಗಮಂಗಲ:

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನ.8ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಸರ್ಕಾರಿ ನೌಕರರಿಗೆ ರಾಜ್ಯ ಮಟ್ಟದ ಜಾನಪದ ಮತ್ತು ಕನ್ನಡ ಗೀತೆಗಳ ಗುಂಪು ನೃತ್ಯ ಸ್ಪರ್ಧೆಗಳು ನಡೆಯಲಿವೆ. ತಾಲೂಕಿನ ಸರ್ಕಾರಿ ಕಾಯಂ ನೌಕರರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ತಿಳಿಸಿದ್ದಾರೆ.

ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ತಾಲೂಕಿನ ಸರ್ಕಾರಿ ಕಾಯಂ ನೌಕರರು ಸಂಘವು ನೀಡಿರುವ http://forms.gle/8pR3m5nXowwQzccs9 ವೆಬ್‌ಸೈಟ್‌ನಲ್ಲಿ ನ.2ರೊಳಗೆ ನೋಂದಣಿ ಮಾಡಿಕೊಳ್ಳುವುದು. ನಂತರದ ನೋಂದಣಿಗೆ ಅವಕಾಶವಿಲ್ಲ. ಸ್ಪರ್ಧೆಗಳಲ್ಲಿ ವಿಜೇತ ತಂಡಗಳಿಗೆ ಪ್ರಥಮ 1 ಲಕ್ಷ ರು. , ದ್ವಿತೀಯ 75 ಸಾವಿರ ರು., ತೃತೀಯ 50 ಸಾವಿರ ರು. ಹಾಗೂ ಸಮಾಧಾನಕರ 20 ಸಾವಿರ ರು. ನಗದು ಬಹುಮಾನ ಸಿಗಲಿದೆ. ಅರ್ಜಿ ಸಲ್ಲಿಕೆ ಸಹಾಯಕ್ಕಾಗಿ ಜೆ.ವೈ.ಮಂಜುನಾಥ್ ಅಧ್ಯಕ್ಷರು, ತಾಲೂಕು ಸರ್ಕಾರಿ ನೌಕರರ ಸಂಘ ಮೊ.9449663100ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.