ಸಿಂಧನೂರಿನಲ್ಲಿ ಸರಿಯಾಗಿ ಗೇಜ್ ನಿರ್ವಹಿಸಲು ಆಗ್ರಹಿಸಿ ಪ್ರತಿಭಟನೆ

| Published : Jul 19 2025, 01:00 AM IST

ಸಿಂಧನೂರಿನಲ್ಲಿ ಸರಿಯಾಗಿ ಗೇಜ್ ನಿರ್ವಹಿಸಲು ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ನೀರಾವರಿ ಇಲಾಖೆಯ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದಿಂದ ಶುಕ್ರವಾರ ಸರಿಯಾಗಿ ಗೇಜ್ ನಿರ್ವಹಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರುನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ನೀರಾವರಿ ಇಲಾಖೆಯ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದಿಂದ ಶುಕ್ರವಾರ ಸರಿಯಾಗಿ ಗೇಜ್ ನಿರ್ವಹಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಮಾತನಾಡಿ ಭತ್ತ ನಾಟಿ ಕಾರ್ಯ ತಾಲ್ಲೂಕಿನಾದ್ಯಂತ ಆರಂಭವಾಗಿದ್ದು, ಈಗಾಗಲೇ ತುಂಗಭದ್ರಾ ಜಲಾಶಯದಿಂದ ನೀರು ಹರಿಸಲಾಗಿದೆ. ಎಡದಂಡೆ ನಾಲೆ ವ್ಯಾಪ್ತಿಯ ಎಲ್ಲ ಕಾಲುವೆಗಳಲ್ಲಿ ನೀರಾವರಿ ಅಧಿಕಾರಿಗಳು ಸರಿಯಾಗಿ ಗೇಜ್ ನಿರ್ವಹಿಸಬೇಕು ಒತ್ತಾಯಿಸಿದರು.ನೀರಾವರಿ ಸಲಹಾ ಸಮಿತಿಯ ತೀರ್ಮಾನ ಅವೈಜ್ಞಾನಿಕವಾಗಿದೆ. ಕಾಲುವೆಗಳಿಗೆ ನಿರ್ಬಂಧ ಹಾಕಿ ಹಂತ ಹಂತವಾಗಿ ನೀರು ಬಿಡುವದರಿಂದ ಭತ್ತ ನಾಟಿ ಮಾಡುವವರ ವೆಚ್ಚ ಹೆಚ್ಚಾಗುತ್ತದೆ. ಅಲ್ಲದೆ ಭತ್ತ ಕಟಾವ್ ಒಂದೇ ಸಮಯಕ್ಕೆ ಬರುವುದರಿಂದ ಹಾರ್ವೇಸ್ಟರ್ಗಳ ಕೃತಕ ಅಭಾವ ಉಂಟಾಗಿ ಖರ್ಚು ಹೆಚ್ಚಾಗಲಿದೆ. ಅಧಿಕಾರಿಗಳು ಸಮರ್ಪಕ ಗೇಜ್ ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.36ನೇ ಕಾಲುವೆಗೆ ಈ ಮೊದಲು 164 ಥ್ರಡ್‌ಗಳನ್ನು ಕೊಡುತ್ತಿದ್ದು, ಈಗ 140 ಥ್ರಡ್ ಶೆಟರ್ ಎತ್ತಿ ನೀರು ಬಿಡುವದರಿಂದ ಕಾಲುವೆಯ ಅರ್ಧಕ್ಕೂ ನೀರು ತಲುಪುತ್ತಿಲ್ಲ. ಕಾಲುವೆಯಲ್ಲಿ ಜಂಗಲ್ ಬೆಳೆದು ಹೂಳು ತುಂಬಿದೆ. ಇದನ್ನು ಬೂದಿವಾಳ ಗ್ರಾಮದವರೆಗೆ ಸ್ವಚ್ಛಗೊಳಿಸಿದ್ದು, ಬೂದಿವಾಲ ಸೀಮಾದಲ್ಲಿ ಸ್ವಚ್ಛಗೊಳಿಸಿಲ್ಲ. ಇದರಿಂದ ಮುಂದಿನ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಆದ್ದರಿಂದ 164 ಥ್ರಡ್ಗಳ ಮೂಲಕ ನೀರು ಹರಿಸಬೇಕು ಹಾಗೂ ಜಂಗಲ್ ಕಟ್ಟಿಂಗ್ ಮೂಲಕ ಹೂಳನ್ನು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು.ನೀರಾವರಿ ಇಲಾಖೆ ಕಚೇರಿಯ ಅಧೀಕ್ಷಕ ಶಿವಕುಮಾರ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ರಾಮಯ್ಯ ಜವಳಗೇರಾ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಪರಯ್ಯಸ್ವಾಮಿ, ಅಧ್ಯಕ್ಷ ನಾಗಪ್ಪ ಬೂದಿಹಾಳ, ಮುಖಂಡರಾದ ಟಿ.ರಾಮಕೃಷ್ಣ, ಕೆ.ವೆಂಕಣ್ಣ, ರಮೇಶ, ಎನ್.ಸತ್ಯನಾರಾಯಣ, ಯಂಕನಗೌಡ, ಭೀಮಣ್ಣ, ವೈಲಪಲ್ಲಿ ಬರ್ಮಾಕ್ಯಾಂಪ್, ಕಲ್ಲಪ್ಪ ತುರಕಟ್ಟಿ ಕ್ಯಾಂಪ್, ಬಿಕಾಸ್ ಅಧಿಕಾರಿ, ಪ್ರವೀರ್, ರಂಜಿತ್, ಅಜಿತ್ ಕಾಯಿನ್ ಇದ್ದರು.