ರೇಣುಕಾಸ್ವಾಮಿ ಕೊಲೆ ಆರೋಪಿಗಳ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ

| Published : Jun 24 2024, 01:40 AM IST

ರೇಣುಕಾಸ್ವಾಮಿ ಕೊಲೆ ಆರೋಪಿಗಳ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆಗೈದ ಪ್ರಕರಣದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು.

ಹೊಸಪೇಟೆ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆಗೈದ ಪ್ರಕರಣದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿ ತಾಲೂಕು ಬೇಡ ಜಂಗಮ, ವೀರಶೈವ ಲಿಂಗಾಯತ ಸಮಾಜ ಒತ್ತಾಯಿಸಿದೆ. ಸಮಾಜದ ಮುಖಂಡರು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡ ಬಿ.ಎಂ. ಸೋಮಶೇಖರ್ ಮಾತನಾಡಿ, ಈ ಗ್ಯಾಂಗ್ ನಡೆಸಿದ ಕೃತ್ಯ ಅತ್ಯಂತ ಹೀನಾಯವಾಗಿದೆ. ರೇಣುಕಾಸ್ವಾಮಿಗೆ ನೀಡಬಾರದ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಇವರ ಹೀನ ಕೃತ್ಯವು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕಾನೂನು ಕೈಗೆತ್ತಿಕೊಳ್ಳುವ ಅವಕಾಶವನ್ನು ಇವರಿಗೆ ಯಾರು ನೀಡಿದ್ದಾರೆ. ಕೊಲೆಯಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಬೇಡ ಜಂಗಮ ಸಮಾಜದ ಅಧ್ಯಕ್ಷ ಎಸ್.ಎಂ‌. ಕಾಶೀನಾಥಯ್ಯ ಮಾತನಾಡಿ, ಈ ಕೊಲೆಯಿಂದ ಸಮಾಜದಲ್ಲಿ ಭಯದ ವಾತಾವರಣ ಉಂಟಾಗಿದೆ. ರೇಣುಕಾಸ್ವಾಮಿಯನ್ನು ಹತ್ಯೆಗೈಯಲು ಮಾಡಿದ ದೈಹಿಕ ಹಿಂಸೆಯು ಅಕ್ಷಮ್ಯ. ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಜರುಗಿಸಲೇಬೇಕು ಎಂದು ಆಗ್ರಹಿಸಿದರು.

ಸಮಾಜದ ಮುಖಂಡರಾದ ಎ.ಎಂ. ಬಸವರಾಜ್, ಒ.ಎಂ. ಮಲ್ಲಿಕಾರ್ಜುನಯ್ಯ, ಸಿದ್ದಲಿಂಗ ಸ್ವಾಮಿ, ಕೊಟ್ರಯ್ಯ, ವಿಜಯ್ ಕುಮಾರ್ , ಮಲ್ಲಿಕಾರ್ಜುನಯ್ಯ, ಮಂಜುನಾಥ ಸ್ವಾಮಿ, ಎಲ್.ಬಸವರಾಜ್, ಕೆ.ಚಂದ್ರಶೇಖರ್, ಮಧುರ ಚನ್ನಶಾಸ್ತ್ರಿ, ಕೆ.ಬಿ. ಹಿರೇಮಠ್, ಎಲ್. ಕೊಟ್ರೇಶ್, ಜಯಶೀಲ ಕುಮಾರಸ್ವಾಮಿ, ವಿಜಯಲಕ್ಷ್ಮಿ ಹಿರೇಮಠ್, ರೇಖಾ ಪ್ರಕಾಶ್, ಅರ್ಚನಾ ಹಿರೇಮಠ್, ಗಂಗಾಧರಯ್ಯ ಸ್ವಾಮಿ, ಕೆ.ಎಂ. ಶಿವಾನಂದಯ್ಯ, ರೇವಣಸಿದ್ದಪ್ಪ, ಎಂ.ಎಂ. ತಿಪ್ಪೇಸ್ವಾಮಿ, ಪಂಪಾಪತಿ, ಭರಮಪ್ಪ, ಶಿವಶಂಕರ್, ಶಿವಪ್ರಸಾದ್, ಶಂಕರ್ ಮೇಟಿ, ರೇವಣಸಿದ್ದಪ್ಪ, ಬಸವರಾಜ ಮತ್ತಿತರರಿದ್ದರು.