ಹೆದ್ದಾರಿಗಳಲ್ಲಿನ ಹಂಪ್ಸ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ

| Published : May 20 2024, 01:32 AM IST

ಹೆದ್ದಾರಿಗಳಲ್ಲಿನ ಹಂಪ್ಸ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ಸ್‌ಗಳ ತೆರವಿಗೆ ಆಗ್ರಹಿಸಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟಿಸಿ ತಹಸೀಲ್ದಾರ ಸುರೇಶಕುಮಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ಸ್‌ಗಳ ತೆರವಿಗೆ ಆಗ್ರಹಿಸಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟಿಸಿ ತಹಸೀಲ್ದಾರ ಸುರೇಶಕುಮಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಹೆದ್ದಾರಿಗಳಲ್ಲಿ ಹಂಪ್ಸ್ ಅಳವಡಿಸದಂತೆ ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ಆದೇಶವಿದೆ. ಆದರೆ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯ ಹಲಗೇರಿ ಮತ್ತು ಕೋಡ ಗ್ರಾಮಗಳ ನಡುವೆ ಅವೈಜ್ಞಾನಿವಾಗಿ ಬೃಹದಾಕಾರದ ಹಂಪ್ಸ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಹಲವಾರು ಜನರು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಇವುಗಳಿಂದ ಸಂಭವಿಸಿದ ಅಪಘಾತಗಳಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳಿಗೆ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರ ಬಿಲ್ಡ್‌ಕಾನ್ ಕಂಪನಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಈರಣ್ಣ ಹಲಗೇರಿ, ಚಂದ್ರಣ್ಣ ಬೇಡರ, ಎಸ್.ಡಿ. ಹಿರೇಮಠ, ಹರಿಹರಗೌಡ ಪಾಟೀಲ, ಪರ್ವತಗೌಡ ಕುಸಗೂರ, ಕೆ.ಬಿ. ಬಣಕಾರ, ರಾಜು ಕೋರೆರ, ಮಂಜಣ್ಣ ಮೆಣಸಿನಹಾಳ, ಮಂಜು ಶಿವಲಿಂಗಪ್ಪನವರ, ಇಂದ್ರಮ್ಮ ಕಮ್ಮಾರ, ರೇಣುಕಾ ಲಮಾಣಿ, ಶೈಲಾ ಅಂಗಡಿ, ಕವಿತಾ ಕೂಸನೂರ, ಪುಷ್ಪಾ ಅಂಗಡಿ, ಗುರುನಗೌಡ ಪಾಟೀಲ, ಸಿದ್ದನಗೌಡ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.