ಸಾರಾಂಶ
ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿರುವ ಸರ್ಕಾರ ಬಡವರ ಯೋಜನೆಗಳಿಗೆ ಕನ್ನ ಹಾಕುತ್ತಿದೆ. ವಸತಿ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಸಚಿವ, ಶಾಸಕರು ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಕೂಡಲೇ ಸಿಎಂ ಮತ್ತು ಡಿಸಿಎಂ ವಸತಿ ಸಚಿವರ ರಾಜೀನಾಮೆ ಪಡೆಯಬೇಕು.
ಹುಬ್ಬಳ್ಳಿ: ವಸತಿ ಇಲಾಖೆಯಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಕೂಡಲೇ ಸಿಎಂ, ಡಿಸಿಎಂ ಹಾಗೂ ವಸತಿ ಸಚಿವರು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಹು-ಧಾ ಪೂರ್ವ ಅಧ್ಯಕ್ಷ ಮಂಜುನಾಥ ಎಂ. ಕಾಟಕರ ಮಾತನಾಡಿ, ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿರುವ ಸರ್ಕಾರ ಬಡವರ ಯೋಜನೆಗಳಿಗೆ ಕನ್ನ ಹಾಕುತ್ತಿದೆ. ವಸತಿ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಸಚಿವ, ಶಾಸಕರು ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಕೂಡಲೇ ಸಿಎಂ ಮತ್ತು ಡಿಸಿಎಂ ವಸತಿ ಸಚಿವರ ರಾಜೀನಾಮೆ ಪಡೆಯಬೇಕು. ಅಲ್ಲದೆ, ಸಿಎಂ, ಡಿಸಿಎಂ ಸಹ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನಾರಾಯಣ ಜರತಾರಘರ, ಪ್ರಭು ನವಲಗುಂದಮಠ, ಪ್ರಕಾಶ ಬುರಬುರೆ, ಜಿ.ಎಸ್. ಬನ್ನಿಕೊಪ್ಪ, ಗೋಪಾಲ, ಅರುಣಕುಮಾರ ಹುದಲಿ, ಶಿವಾನಂದ ಅಂಬಗೇರ, ಮಾರುತಿ ಚಾಕಲಬ್ಬಿ, ಮಹೇಶ ಶಾಂತಪ್ಪನವರ, ನಾಗರತ್ನಾ ಬಳ್ಳಾರಿ, ಸರೋಜಾ ಭಟ್, ವಿನಾಯಕ ಲದ್ವಾ, ರಂಗಸ್ವಾಮಿ ಸೇರಿದಂತೆ ಹಲವರಿದ್ದರು.