ಸಾರಾಂಶ
ಹಸು ಕಟ್ಟಿದ ವಿಚಾರವಾಗಿ ರೈತ ಮಹಿಳೆ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐ ಅಯ್ಯನ್‌ಗೌಡನನ್ನು ಅಮಾನತ್ತುಗೊಳಿಸಿದ್ದು ಮುಖ್ಯವಲ್ಲ. ಈತನನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಮುಖಂಡರು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಭಾರತೀನಗರ
ಹಸು ಕಟ್ಟಿದ ವಿಚಾರವಾಗಿ ರೈತ ಮಹಿಳೆ ಮೇಲೆ ಹಲ್ಲೆ ನಡೆಸಿದ ಪಿಎಸ್‌ಐ ಅಯ್ಯನ್‌ಗೌಡನನ್ನು ಅಮಾನತ್ತುಗೊಳಿಸಿದ್ದು ಮುಖ್ಯವಲ್ಲ. ಈತನನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಮುಖಂಡರು ಆಗ್ರಹಿಸಿದರು.ಅಂಬೇಡ್ಕರ್ ಭವನದ ಮುಂಭಾಗ ಕ್ಷುಲ್ಲಕ ವಿಚಾರಕ್ಕೆ ಮಹಿಳೆಯೊಬ್ಬರನ್ನು ಪಿಎಸ್‌ಐ ಅಯ್ಯನ್‌ಗೌಡ ಠಾಣೆಗೆ ಕರೆದೋಯ್ದು ಮಾರಣಾಂತಿಕ ಹಲ್ಲೆ ನಡೆಸಿರುವ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು.
ಇಂತಹ ಪೊಲೀಸರಿಂದ ಇಲಾಖೆಗೆ ಮತ್ತು ಕರ್ತವ್ಯ ನಿಷ್ಠ ಪೊಲೀಸರಿಗೆ ಕುತ್ತು ಬರುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿ ಆತನ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ನಂತರ ನಡೆದ ಕಾಯಕ ಬಂಧುಗಳಿಗೆ ಅರಿವು ಕಾರ್ಯಕ್ರಮದಲ್ಲಿ ಸಂಘಟನೆ ರಾಜ್ಯ ಕಾರ್ಯದರ್ಶಿ ದೇವಿ ಮಾತನಾಡಿ, ಕೆಲಸ ನೀಡದೆ ಕೃಷಿ ಮಹಿಳೆಯರನ್ನು ಆರ್ಥಿಕವಾಗಿ ಕುಗ್ಗಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ನಿಯಾಮಾನುಸಾರ ಉದ್ಯೋಗ ಖಾತರಿ ಯೋಜನೆಯಡಿ ಎಲ್ಲಾ ಗ್ರಾಪಂಗಳಲ್ಲೂ ಕಡ್ಡಾಯವಾಗಿ ಕೆಲಸ ನೀಡಬೇಕು. ಇಲ್ಲದಿದ್ದರೆ ಕೆಲಸ ನೀಡದ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಸಂಘಟನೆ ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಕಾರ್ಯದರ್ಶಿ ಸುಶೀಲ, ಉಪಾಧ್ಯಕ್ಷೆ ಶೋಭಾ, ಖಜಾಂಚಿ ರಾಣಿ ಹಾಜರಿದ್ದರು.15ಕೆಎಂಎನ್ ಡಿ22ಭಾರತೀನಗರದ ಅಂಬೇಡ್ಕರ್ ಭವನದಲ್ಲಿ ಎದುರು ಪಿಎಸ್‌ಐ ಅಯ್ಯನ್‌ಗೌಡ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.