ಸಾರಾಂಶ
ರಸ್ತೆ ಸರಿಪಡಿಸಲು ಖುದ್ದು ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು ಯಾವುದೆ ಪ್ರಯೋಜನವಾಗಿಲ್ಲ
ಕನ್ನಡಪ್ರಭ ವಾರ್ತೆ ಆಲಮೇಲ
ಪಟ್ಟಣದ ಆರಾಧ್ಯ ದೇವರಾದ ಹಜರತ್ ಪೀರ್ ಗಾಲಿಬಸಾಹೇಬರ ದರ್ಗಾಕ್ಕೆ ಮತ್ತು ಹಿಂದೂ ಸಮುದಾಯದ ಸ್ಮಶಾನ ಭೂಮಿಗೆ ಹೋಗುವ ರಸ್ತೆ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಿ ಸರಿಯಾದ ರಸ್ತೆ ಮಾಡಿಕೊಡುವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ನಾಗರಿಕರು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಸ್ವಯಂ ಪ್ರೇರಿತರಾಗಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟಿಸಿದರು.ಆಲಮೇಲದ ತಹಸೀಲ್ದಾರ್ ಕೆ.ವಿಜಯಕುಮಾರ, ಪಪಂ ಮುಖ್ಯಧಿಕಾರಿ ಸುರೇಶ ನಾಯಕ ಸೇರಿ ಪ್ರತಿಭಟನಾ ಸ್ಥಳಕ್ಕೆ ಬಂದು ರಸ್ತೆ ಸರಿಪಡಿಸುತ್ತವೆ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರೂ, ಜಗ್ಗದ ಪ್ರತಿಭಟನಾಕಾರರು ರಸ್ತೆ ಮಾಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದರು.ದಲಿತ ಮುಖಂಡ ಶಿವಾನಂದ ಜಗತಿ ಮಾತನಾಡಿ, ಪಟ್ಟಣದ ಸದರಿ ಜಾಗೆಗಳು ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಅನೇಕ ಬಾರಿ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕಾರಣ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ ಮುಖಂಡ ಹರೀಶ ಯಂಟಮಾನ ಮಾತನಾಡಿ, ಈ ರಸ್ತೆ ಸರಿಪಡಿಸಲು ಖುದ್ದು ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು ಯಾವುದೆ ಪ್ರಯೋಜನವಾಗಿಲ್ಲ. ಆದ್ದರಿಂದ ಪಟ್ಟಣದ ಎಲ್ಲ ನಾಗರಿಕರು ಸೇರಿ ಈ ಪ್ರತಿಭಟನೆ ನಡೆಸಿದ್ದು ಈ ರಸ್ತೆ ಸರಿಪಡಿಸುವರೆಗೂ ನಾವು ಪ್ರತಿಭಟನೆಯಿಂದ ಅದು ಎಷ್ಟೇ ದಿನವಾದರು ಸರಿ ಹಿಂದೆ ಸರಿಯುವುದಿಲ್ಲ ಎಂದರು.ಪ್ರತಿಭಟನೆಯಲ್ಲಿ ಪಪಂ ಸದಸ್ಯ ಅಶೋಕ ಕೊಳಾರಿ, ಪ್ರಭು ವಾಲಿಕಾರ, ಬಸವರಾಜ ತೆಲ್ಲೂರ,ರಿಯಾಜ್ ಬಿಳವಾರ, ಸಂಜೀವಕುಮಾರ ಯಂಟಮಾನ, ಮೈಬೂಬ ಮಸಳಿ, ಸೈಯದ್ ದೇವರಮನಿ, ಚಂದ್ರಶೇಖರ ಹಳೆಮನಿ, ಬಸವರಾಜ ಹೂಗಾರ,ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಅಚಲೇರಿ ಶ್ರೀಶೈಲ ಅಗಸರ, ಶ್ರೀಶೈಲ ಭೋವಿ, ಅಪ್ಪು ಶೆಟ್ಟಿ, ಸೋಮು ಮೇಲಿನಮನಿ, ಶಶಿಧರ ನಾಯ್ಕೋಡಿ, ರಾಜು ಹೂವಿನಹಳ್ಳಿ, ಸಿದ್ದಲಿಂಗ ಸುಬೇದಾರ, ವಿಶ್ವನಾಥ ಗುಂದಗಿ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಾಗರಿಕರಿದ್ದರು.
ಆಲಮೇಲ ಪಟ್ಟಣದ ಆರಾಧ್ಯ ದೈವ ಹಜರತ ಪೀರ್ ಗಾಲೀಬ ಸಾಹೇಬರ ದರ್ಗಾಕ್ಕೆ ಹಿಂದೂ ಸಮಾಜ ರುದ್ರಭೂಮಿ ಮತ್ತು ಬಸವ ನಗರಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ ಎಂದು ನಾನು ಕಳೆದ ಕೆಲ ತಿಂಗಳ ಹಿಂದೆ ಆಲಮೇಲ ಪಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿಯವರ ಕಾಲಿಗೆ ಬಿದ್ದು ಮನವಿ ಮಾಡಿದ್ದೇನೆ. ಗ್ರಾಮ ನಕ್ಷೆಯಂತೆ ದರ್ಗಾಕ್ಕೆ ಹೋಗಲು ರಸ್ತೆ ಮಾಡಿಕೊಡಬೇಕು. ಸಂಜೀವಕುಮಾರ ಯಂಟಮಾನ, ಪಪಂ ಸದಸ್ಯರು ಆಲಮೇಲ