ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

| Published : Dec 22 2023, 01:30 AM IST

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೧ ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆಯಾದ ಸೇವಾ ಕಾಯಮಾತಿ ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ಗದಗ ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯ ಮಾಡುವ ಮೂಲಕ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗದಗ ಗಾಂಧಿ ವೃತ್ತದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆಗದಗ: ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೧ ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆಯಾದ ಸೇವಾ ಕಾಯಮಾತಿ ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯ ಮಾಡುವ ಮೂಲಕ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಡಾ. ಹನಮಂತಗೌಡ ಕಲ್ಮನಿ ಮಾತನಾಡಿ, ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು. ಎಲ್ಲಾ ಸರ್ಕಾರಗಳು ಸಮಯಾವಕಾಶವನ್ನು ಕೇಳುತ್ತ ಕಾಲಹರಣ ಮಾಡುತ್ತೀವೆ. ಇದರಿಂದ ಅತಿಥಿ ಉಪನ್ಯಾಸಕರ ಬದುಕು ಬೀದಿಗೆ ಬಂದು ಹೋರಾಟ ಮಾಡುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಒಂದು ತಿಂಗಳಿನಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅತಿಥಿ ಉಪನ್ಯಾಸಕರು ಹೋರಾಟ ಮಾಡುತ್ತಿದ್ದಾರೆ. ೪೩೦ ಪದವಿ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಲ್ಲದೆ ಕಲಿಕೆಯಲ್ಲಿ ಹಿನ್ನಡೆಯಾಗಿದೆ ಅಷ್ಟೇ ಅಲ್ಲದೇ ಪರೀಕ್ಷೆಗಳು ಸಮೀಪಿಸುತ್ತಿವೆ. ಸರ್ಕಾರಕ್ಕೆ ವಿದ್ಯಾರ್ಥಿಗಳ ನೋವು ತಟ್ಟುತ್ತಿಲ್ಲ. ಇನ್ನಾದರೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶೀಘ್ರದಲ್ಲಿಯೇ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸಿ ಅತಿಥಿ ಉಪನ್ಯಾಸಕರ ಉದ್ಯೋಗದ ಕಾಯಮಾತಿಯನ್ನು ಬೇಗನೆ ಪರಿಹರಿಸಿ ವಿದ್ಯಾರ್ಥಿಗಳ ಹಿತ ಕಾಯಬೇಕೆಂದು ಒತ್ತಾಯಿಸಿದರು.

ಈ ವೇಳೆ ರಾಜ್ಯ ಕಾರ್ಯದರ್ಶಿ ಪೀಟರ್ ವಿನೋದಚಂದ, ಆರ್.ಎಸ್. ತಿಗಡಿ, ಎಂ.ಎಸ್. ಕುಸುಗಲ್ಲ, ಎಸ್.ಎಸ್. ಸರ್ವಿ, ಡಾ. ಎ.ಎ. ಸೊಪ್ಪಿಮಠ, ಶರಣು ಮರೆಗುದ್ದಿ, ಎಂ.ಎಚ್. ಕರಲವಾಡ್, ಡಾ. ವಿರುಪಾಕ್ಷಿ ಮುಳಗುಂದ, ಭಗತಸಿಂಗ್ ನವಲೂರಕರ, ನಾಗರಾಜ ಹೊನ್ನೂರ, ಡಾ. ಸುಜಾತಾ ಬರದೂರ, ಪದ್ಮಾ ತಳಕಲ್ಲ, ರಶ್ಮಿ ಹೂಗಾರ, ಶಿಲ್ಪಾ ಹಿರೇಮಠ, ಜ್ಯೋತಿ ಗುದ್ದಿನ, ಮೈತ್ರಾ ನಾಗನೂರ, ವನಮಾಲ ಖಾನಗೌಡರ, ನಾರಾಯಣ ಕರಲವಾಡ, ಕೃಷ್ಣಾ ಬೆಂತೂರ, ಎಸ್.ಎನ್. ಪಾಟೀಲ, ಎನ್.ಕೆ. ಕಡೇಮನಿ, ರಾಜೇಶ್ವರಿ ಶಾಸ್ತ್ರಿ, ಮಿಟ್ಟಾ ನಾಯಕ, ಬನ್ನಿಕೊಪ್ಪ, ಜಾಲಿಹಾಳ, ಲೀಲಾವತಿ ಹಿರೇಮಠ, ವಿಜಯಲಕ್ಷ್ಮೀ ಜೋಶಿ, ಉಷಾ, ನೂರಜಹಾನ್ ಕದಾಂಪೂರ, ಶ್ರೀನಿವಾಸ ಬೇವಿನಕಟ್ಟಿ, ಶಾಂತಗೌಡ ಹುಲ್ಲೂರ ಸೇರಿದಂತೆ ಜಿಲ್ಲೆಯ ಅತಿಥಿ ಉಪನ್ಯಾಸಕರು ಇದ್ದರು.