ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯರಸ್ತೆಯೂ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗುವುದರಿಂದ ಮಂಡ್ಯ ಸರ್ಕಲ್‌ನಲ್ಲಿ ಮಾರ್ಗಸೂಚಿ ಸೂಚನಾ ಫಲಕವನ್ನು ಹಾಕದೆ ಇರುವ ಹಿನ್ನೆಲೆ ಮೈಸೂರು ಕಡೆಯಿಂದ ಬರುವ ಭಾರೀ ವಾಹನಗಳ ನೇರವಾಗಿ ಕಿರಿದಾಗಿರುವ ಹಳೇ ನಾಗಮಂಗಲ ರಸ್ತೆಯಲ್ಲಿ ಹೋಗಿ ಟ್ರಾಪಿಕ್ ಸಮಸ್ಯೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಂಡವಪುರ: ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತ (ಮಂಡ್ಯ ಸರ್ಕಲ್)ದಲ್ಲಿ ವಾಹನಗಳಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ಸೂಚನಾ ಫಲಕ, ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತ (ಮಂಡ್ಯ ಸರ್ಕಲ್)ದಲ್ಲಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಸೇರಿದ ಸಾರ್ವಜನಿಕರು ಪ್ರತಿಭಟನೆ ನಡೆಸಿ ಸ್ಥಳಕ್ಕೆ ಬಂದ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯರಸ್ತೆಯೂ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗುವುದರಿಂದ ಮಂಡ್ಯ ಸರ್ಕಲ್‌ನಲ್ಲಿ ಮಾರ್ಗಸೂಚಿ ಸೂಚನಾ ಫಲಕವನ್ನು ಹಾಕದೆ ಇರುವ ಹಿನ್ನೆಲೆ ಮೈಸೂರು ಕಡೆಯಿಂದ ಬರುವ ಭಾರೀ ವಾಹನಗಳ ನೇರವಾಗಿ ಕಿರಿದಾಗಿರುವ ಹಳೇ ನಾಗಮಂಗಲ ರಸ್ತೆಯಲ್ಲಿ ಹೋಗಿ ಟ್ರಾಪಿಕ್ ಸಮಸ್ಯೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹೇಳಿದರೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಳೆದ ಬಾರಿ ಪ್ರತಿಭಟನೆ ನಡೆಸಿದಾಗ ಜೂನ್ 25ರೊಳಗೆ ಅಳವಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಜುಲೈ ತಿಂಗಳು ಬಂದರೂ ಸಹ ಮಾರ್ಗಸೂಚಿ ನಾಮಫಲಕ ಅಳವಡಿಕೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸತೀಶ್ ವಾರದೊಳೆ ಅಳವಡಿಕೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು. ಶ್ರೀರಂಗಪಟ್ಟಣ- ಜೇವರ್ಗಿ ಮುಖ್ಯರಸ್ತೆಯಲ್ಲಿ ಹೆಚ್ಚು ವಾಹನಗಳು ಓಡಾಡುತ್ತವೆ, ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕದೆ ಇರುವುದರಿಂದ ಹೆಚ್ಚು ಅಪಘಾತವಾಗುತ್ತಿವೆ. ಹಾಗಾಗಿ ಹಿರೇಮರಳಿ ಗೇಟ್, ಮಂಡ್ಯ ಸರ್ಕಲ್, ಹರಳಹಳ್ಳಿ ಬಳಿ ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲೋಕೇಶ್, ವಿಷ್ಣುವಿಠಲ್, ಚನ್ನಕೇಶವ, ಶ್ರೀನಿವಾಸ್, ಮಧುಸೂದನ್ ಸೇರಿದಂತೆ ಹಲವರು ಇದ್ದರು.