ಇಂಡಿ ಜಿಲ್ಲಾ ಕೇಂದ್ರಕ್ಕಾಗಿ ಆಗ್ರಹಿಸಿ ಮನವಿ

| Published : Dec 31 2023, 01:30 AM IST

ಸಾರಾಂಶ

ಮಹಾರಾಷ್ಟ್ರದ ಪ್ರಭಾವ ಸಹಿಸಿಕೊಂಡು, ಕನ್ನಡ ಪ್ರೀತಿಸಿ, ಮೆರೆಸುತ್ತಿರುವ ಇಂಡಿ ತಾಲೂಕಿನ ಜನರು ಎಲ್ಲ ರಂಗದಲ್ಲಿ ಅಭಿವೃದ್ಧಿ ಸಾಧಿಸಲು ಇಂಡಿ ಜಿಲ್ಲಾ ಕೇಂದ್ರ ಘೊಷಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಇಂಡಿ ಶಿಕ್ಷಣ, ಸಾರಿಗೆ, ಉದ್ಯೋಗ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಹಿಂದುಳಿದಿದೆ. ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ನಿರ್ಮಲಾ ತಳಕೇರಿ ಹೇಳಿದರು.

ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಶನಿವಾರ ಮಹಿಳಾ ಮುಖಂಡರು, ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಕಂದಾಯ ಉಪ ವಿಭಾಗಾಧಿಕಾರಿ ಅಬೀದ್‌ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಡಿ ರಾಜ್ಯದ ಕೊನೆಯ ತಾಲೂಕು ಆಗಿರುವುದರಿಂದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಇಂಡಿ ಶಾಖಾ ಕಾಲುವೆ ಮೂಲಕ ಹರಿಯುವ ನೀರು ಟೆಲ್‌ ಎಂಡ್‌ ಇರುವುದರಿಂದ ತಾಲೂಕಿನ ಕೊನೆಯ ಭಾಗಕ್ಕೆ ತಲುಪುತ್ತಿಲ್ಲ. ಹೀಗಾಗಿ ಈ ಭಾಗದ ರೈತರಿಗೆ ತೊಂದರೆಯಾಗಿದೆ. ಮಹಾರಾಷ್ಟ್ರದ ಪ್ರಭಾವ ಸಹಿಸಿಕೊಂಡು, ಕನ್ನಡ ಪ್ರೀತಿಸಿ, ಮೆರೆಸುತ್ತಿರುವ ಇಂಡಿ ತಾಲೂಕಿನ ಜನರು ಎಲ್ಲ ರಂಗದಲ್ಲಿ ಅಭಿವೃದ್ಧಿ ಸಾಧಿಸಲು ಇಂಡಿ ಜಿಲ್ಲಾ ಕೇಂದ್ರ ಘೊಷಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ವೇಳೆ ನಿರ್ಮಲಾ ತಳಕೇರಿ, ಶೈಲಶ್ರೀ ಜಾಧವ, ಪೀರದೊಸೆ ಸೋನೆ, ಶಶಿಕಲಾ ಬೆಟಗೇರಿ, ರಾಧಾ ಕಾಂಬಳೆ, ರೇಣುಕಾ ಲೋಗಾಂವ, ಗಂಗಾಬಾಯಿ ದೇಸಾಯಿ, ಮಾಲನಬಿ ಚೈದ್ರಿ, ಜಯಶ್ರೀ ಕಾಲೇಬಾಗ, ಅಂಬಿಕಾ ಚನಗೊಂಡ, ವಿಮಲಾಬಾಯಿ ಪವಾರ, ಪದ್ಮಾಬಾಯಿ ರಾಠೋಡ, ಸವಿತಾ ಕಾಂಬಳೆ, ಶೋಭಾ ಚವ್ಹಾಣ, ಲಕ್ಷ್ಮಿ ನಾಯ್ಕೋಡಿ ಮೊದಲಾದವರು ಇದ್ದರು.