ಪ್ರತಾಪ್‌ಸಿಂಹ ಮಹಾಸಭಾದ ಕ್ಷಮೆ ಕೇಳದಿದ್ದರೆ ಪ್ರತಿಭಟನೆ: ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನಂದೀಶ್

| Published : Aug 01 2024, 12:35 AM IST

ಪ್ರತಾಪ್‌ಸಿಂಹ ಮಹಾಸಭಾದ ಕ್ಷಮೆ ಕೇಳದಿದ್ದರೆ ಪ್ರತಿಭಟನೆ: ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನಂದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಂಸದ ಪ್ರತಾಪಸಿಂಹ ಬಹಿರಂಗವಾಗಿ ಮಹಾಸಭಾ ಮತ್ತು ಸಮುದಾಯದ ಕ್ಷಮೆ ಕೇಳದಿದ್ದರೆ ಮಹಾಸಭಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಎಚ್ಚರಿಕೆ ನೀಡಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವೀರಶೈವ ಲಿಂಗಾಯಿತ ಮಹಾಸಭಾ ಮತ್ತು ಸಮುದಾಯದ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿರುವ ಮಾಜಿ ಸಂಸದ ಪ್ರತಾಪಸಿಂಹ ಬಹಿರಂಗವಾಗಿ ಮಹಾಸಭಾ ಮತ್ತು ಸಮುದಾಯದ ಕ್ಷಮೆ ಕೇಳದಿದ್ದರೆ ಮಹಾಸಭಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಎಚ್ಚರಿಕೆ ನೀಡಿದರು.

ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸುಮಾರು 110 ವರ್ಷಗಳ ಇತಿಹಾಸವಿರುವ ಸಂಘಟನೆಯಾಗಿದೆ. ಹಾನಗಲ್‌ ಕುಮಾರಸ್ವಾಮಿಯವರು ಕಟ್ಟಿದ ಈ ಸಂಘಟನೆಯನ್ನು ಹರಗುರು ಚರಮೂರ್ತಿಗಳ ಆಶೀರ್ವಾದದಿಂದ ಮುನ್ನಡೆಯುತ್ತಿದೆ. ಇಂತಹ ಮಹಾಸಭಾದ ಬಗ್ಗೆ ಹಗುರವಾಗಿ ಮಾತನಾಡಲು ಪ್ರತಾಪಸಿಂಹ ಯಾರು ? ಎಂದು ಪ್ರಶ್ನಿಸಿದರು.

ರಾಜಕೀಯಕ್ಕೂ ಮಹಾಸಭೆಗೂ ಯಾವುದೇ ಸಂಬಂಧವಿಲ್ಲ. ಅಂತಹದರಲ್ಲಿ ಪ್ರತಾಪಸಿಂಹ ನಮ್ಮ ಸಮುದಾಯದ ನಾಯಕರಾದ ಶಾಮನೂರು ಶಿವಶಂಕರಪ್ಪ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ ಎಂದರು.

ಅಧಿಕಾರದಲ್ಲಿದ್ದಾಗ ಒಂದು ರೀತಿ, ಅಧಿಕಾರ ಇಲ್ಲಿದಿದ್ದಾಗ ಒಂದು ರೀತಿ ಮಾತನಾಡುವುದು ಪ್ರತಾಪಸಿಂಹರ ಚಾಳಿ. ವಿಜಯೇಂದ್ರ ತಮ್ಮ ಸ್ವಂತ ಸಂಘಟನಾ ಚತುರತೆಯಿಂದ ಬೆಳೆದಿರುವ ವ್ಯಕ್ತಿ. ಇಂತಹವರ ಬಗ್ಗೆ ಮಾತನಾಡುವ ನೈತಿಕತೆ ಪ್ರತಾಪ ಸಿಂಹ ಅವರಿಗಿಲ್ಲ. ಈ ಬಾರಿ ಲೋಕಸಭಾ ಟಿಕೆಟ್ ಏಕೆ ತಪ್ಪಿತು ಎಂಬುದನ್ನು ಪ್ರತಾಪಸಿಂಹ ಅರಿಯಬೇಕು, ಇದೇ ರೀತಿ ಹೇಳಿಕೆಗಳನ್ನು ಮುಂದುವರಿಸಿದರೆ ಮನೆಯ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಸಲವಾಡಿ ಉಮೇಶ್, ಯಳಂದೂರು ಮಹದೇವಪ್ಪ, ವಡೆಯರಪಾಳ್ಯ ಸೋಮಶೇಖರ್‌ ಇದ್ದರು.