ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಂಧನ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ರಾಜೀನಾಮೆ ಆಗ್ರಹಿಸಿ ಬಸವಕಲ್ಯಾಣ ಪಟ್ಟಣದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದ ಹತ್ತಿರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರದಂದು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಂಧನ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ರಾಜೀನಾಮೆ ಆಗ್ರಹಿಸಿ ಬಸವಕಲ್ಯಾಣ ಪಟ್ಟಣದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದ ಹತ್ತಿರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರದಂದು ಪ್ರತಿಭಟನೆ ನಡೆಸಲಾಯಿತು.

ವಿರೋಧ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಮೇಲೆ ದೆಹಲಿಯಲ್ಲಿ ನಡೆದಿರುವ ಹಲ್ಲೆ ಖಂಡಿಸಿ ಕಾಂಗ್ರೆಸ್ ಪಕ್ಷ ಘೋಷಿಸಿರುವ ‘ಪ್ರಜಾಪ್ರಭುತ್ವದ ಕರಾಳ ದಿನ’ವನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನೀಲಕಂಠ ರಾಠೋಡ, ರವಿ ಗಾಯಕವಾಡ, ಮನೋಹರ್ ಮೈಸೆ, ಗಫಾರ್ ಪೆಶಇಮಾಮ್, ದಿಲೀಪ್ ಶಿಂಧೆ, ಎಂಡಿ ಸಘೀರುದ್ದೀನ್, ಡಿಕೆ ದಾವೂದ್, ಖಲೀಲ್ ಅಹ್ಮದ್, ಶೇಕ್ ರಯಿಸುದ್ದೀನ್ , ಶರಣು ಆಲಗುಡ, ಸುರೇಶ್ ಮೋರೆ, ಯುವರಾಜ್ ಬೆಂಡೆ, ಶಂಕರ ಜಮಾದಾರ್, ಪೃತ್ವಿಗಿರಿ, ಸಿದ್ರಾಮ ಗುದಗೆ ಜಗದೀಶ್, ಚೇತನ್ ಕಡೆ, ರೋಷನ್ ಅರಳಿ, ರಾಮಲಿಂಗ ರೆಡ್ಡಿ, ಪಿಂಟು ಗುಂಡೇಬಾಯಿ, ಪ್ರಭು ಕಾಂತಿಕರ್, ಬುದ್ಧಾನಂದ ಗಾಯಕವಾಡ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಎಲ್ಲಾ ಘಟಕದ ಅಧ್ಯಕ್ಷರು, ಮುಖಂಡರು, ಯುವಕರು ಪಾಲ್ಗೊಂಡಿದ್ದರು.

--

ಚಿತ್ರ 9ಬಿಡಿಆರ್57:

ದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರ ಬಂಧನ ಖಂಡಿಸಿ ಶುಕ್ರವಾರ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.