ಮಧ್ಯಾಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ವಿರೋಧಿಸಿ ವಿವಿಧ ಸಂಘಟನೆ ನೇತೃತ್ವದಲ್ಲಿ ಇಲ್ಲಿಯ ಸೋಮಾನಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಯುದ್ಧದಲ್ಲಿ ಮಡಿದವರಿಗೆ ಸಂತಾಪ, ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಒತ್ತಾಯಕನ್ನಡಪ್ರಭ ವಾರ್ತೆ ದಾಂಡೇಲಿ
ಮಧ್ಯಾಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ವಿರೋಧಿಸಿ ವಿವಿಧ ಸಂಘಟನೆ ನೇತೃತ್ವದಲ್ಲಿ ಇಲ್ಲಿಯ ಸೋಮಾನಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಯುದ್ಧದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿ, ಪ್ರತಿಭಟನಾನಿರತರು ಸೋಮಾನಿ ವೃತ್ತದಲ್ಲಿ ದೀಪಗಳೊಂದಿಗೆ ಸಭೆ ನಡೆಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಯಮುನಾ ಗಾಂವಕರ ಮತ್ತು ಪೌರಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ, ನಗರಸಭೆಯ ಮಾಜಿ ಸದಸ್ಯ ಡಿ. ಸ್ಯಾಮಸನ್ ಮಾತನಾಡಿ, ಅಮೆರಿಕದ ಸಾಮ್ರಾಜ್ಯಶಾಹಿ, ಇಸ್ರೇಲ್ ಜತೆಗೆ ಸೇರಿ ಇರಾನ್ ಮೇಲೆ ಸಾರಿರುವ ಯುದ್ಧ, ಸಾರ್ವಭೌಮ ರಾಷ್ಟ್ರಗಳ ಮೇಲಿನ ದಾಳಿ, ವೆನಿಜುವೆಲಾ ಅಧ್ಯಕ್ಷರ ಅಪಹರಣ, ಪ್ಯಾಲೆಸ್ತೀನ್ ಗಾಜಾ ಮೇಲಿನ ಆಕ್ರಮಣ ಎಲ್ಲವೂ ಸಂಪತ್ತನ್ನು ದೋಚುವ ಮತ್ತು ಕೈಗೊಂಬೆ ಸರ್ಕಾರ ಸ್ಥಾಪಿಸುವ ಹುನ್ನಾರವಾಗಿದೆ ಎಂದು ಹೇಳಿದರು.ಕೇಂದ್ರ ಸರ್ಕಾರ ಕೂಡ ತನ್ನ ವಿದೇಶಾಂಗ ನೀತಿ ಬಲಿಕೊಡುವುದು ಖಂಡನೀಯ. ಬೆಲೆ ಏರಿಕೆಗೆ ಕಾರಣವಾಗಿರುವ ಅಮಾನವೀಯ ನೀತಿ ಹೇರುವ ಸಾವಿರಾರು ಜನರ ಬಲಿ ತೆಗೆಯುವ ಈ ಸರ್ವಾಧಿಕಾರಿ ಯುದ್ಧಕೋರ ನೀತಿ ನಿಲ್ಲಿಸಿ, ಶಾಂತಿ ಸ್ಥಾಪನೆ ಆಗಲಿ ಎಂದರು.ಯುದ್ಧ ಬೇಡ, ಉದ್ಯೋಗ ಬೇಕು, ಮುಗ್ಧ ಜನರ ಸಾವು ನಿಲ್ಲಿಸಿ, ಬೆಲೆ ಏರಿಕೆ ತಡೆಗಟ್ಟಿ, ಸಾಮ್ರಾಜ್ಯಶಾಹಿಗೆ ಮಣೆಹಾಕುವ ಭಾರತದ ನೀತಿ ಹಿಮ್ಮೆಟ್ಟಿಸಿ ಎನ್ನುವ ಘೋಷಣೆ ಕೇಳಿಬಂತು.
ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ಇಮ್ರಾನ್, ಪ್ರಮುಖರಾದ ಕಾಂತರಾಜ, ತಾಲ್ಮನ್ ಇಲ್ಲೂರಿ, ವಿಜಯ ಹರಿಜನ್, ಮುರ್ತುಜಾ ಹುಸೇನ್ ಆನೆಹೊಸೂರು, ರಮೇಶ ದೊಡ್ಡಮನಿ, ಇರ್ಶಾದ ಬೇಲೂರ, ಜಾಫರ ಮಸನಕಟ್ಟಿ, ಇರ್ಶಾದ ಮುಂತಾದವರಿದ್ದರು.