ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಕನ್ನಾಪುರದಲ್ಲಿ ಪ್ರತಿಭಟನೆ

| Published : Feb 08 2025, 12:31 AM IST

ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಕನ್ನಾಪುರದಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆ, ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ (27) ಕನ್ನಾಪುರ ಸರ್ಕಲ್‌ನಿಂದ ಬೇವಿನಗುಡ್ಡೆವರೆಗೆ 5 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಸ್ಥಳೀಯರಿಬ್ಬರು ತಕರಾರು ಮಾಡಿದ್ದರಿಂದ ಸುತ್ತಮುತ್ತಲಿನ ಗ್ರಾಮದ ಜನರು ಶುಕ್ರವಾರ ಸ್ಥಳಕ್ಕೆ ಆಗಮಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ (27) ಕನ್ನಾಪುರ ಸರ್ಕಲ್‌ನಿಂದ ಬೇವಿನಗುಡ್ಡೆವರೆಗೆ 5 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಸ್ಥಳೀಯರಿಬ್ಬರು ತಕರಾರು ಮಾಡಿದ್ದರಿಂದ ಸುತ್ತಮುತ್ತಲಿನ ಗ್ರಾಮದ ಜನರು ಶುಕ್ರವಾರ ಸ್ಥಳಕ್ಕೆ ಆಗಮಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕನ್ನಾಪುರ ಸರ್ಕಲ್ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ರಸ್ತೆ ತಮಗೆ ಸೇರಿದ ಖರಾಬ್ ಜಮೀನಿನ ಮೇಲೆ ಹಾದು ಹೋಗಿದೆ. ಹಾಗಾಗಿ ಇಲ್ಲಿ ರಸ್ತೆ ಮಾಡಬಾರದೆಂದು ಸ್ಥಳೀಯರಿಬ್ಬರು ರಸ್ತೆ ಕಾಮಗಾರಿ ನಡೆಸುವ ಮುನ್ನ ಅಧಿಕಾರಿಗಳಿಂದ ಸರ್ವೆ ನಡೆಸಬೇಕು. ಅಲ್ಲಿವರೆಗೆ ಕಾಮಗಾರಿ ನಿಲ್ಲಿಸಬೇಕೆಂದು ಅಡ್ಡಿ ಪಡಿಸಿದ್ದರಿಂದ ಆ ಸ್ಥಳದಲ್ಲಿ ಕಾಮಗಾರಿ ನಿಲ್ಲಿಸಿ ಬೇರೆ ಕಾಮಗಾರಿ ಮುಂದುವರೆಸಲಾಗಿತ್ತು.

ಈ ಹಿನ್ನಲೆಯಲ್ಲಿ ಕನ್ನಾಪುರ ಸುತ್ತಮುತ್ತಲಿನ ಗ್ರಾಮದ ನೂರಾರು ಮಂದಿ ಸ್ಥಳಕ್ಕೆ ಆಗಮಿಸಿ, ಮೂಡಿಗೆರೆಯಿಂದ ಗೆಂಡೇಹಳ್ಳಿ ಮೂಲಕ ಹಾದು ಹೋಗಿರುವ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ರಸ್ತೆ ಬ್ರಿಟೀಷರ ಕಾಲದಲ್ಲಿಯೇ ನಿರ್ಮಾಣವಾಗಿತ್ತು. ಈಗ ಕಾಮಗಾರಿ ನಡೆಯುವ ಸಂದರ್ಭದಲ್ಲಿ ತಕರಾರು ಮಾಡುವುದು ಸರಿಯಲ್ಲ. ಯಾರೋ ಇಬ್ಬರಿಗಾಗಿ ರಸ್ತೆ ಬಂದ್ ಮಾಡು ವುದಕ್ಕೆ ನಾವು ಬಿಡುವುದಿಲ್ಲ. ರಸ್ತೆ ಕಾಮಗಾರಿ ಮುಂದುವರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಂದಿಪುರ ಗ್ರಾಪಂ ಸದಸ್ಯ ರಘು, ಗಬ್ಬಳ್ಳಿ ಚಂದ್ರೇಗೌಡ, ಜಯರಾಂಗೌಡ, ಪರಮೇಶ್, ಕನ್ನಾಪುರದ ಶಿವೇಗೌಡ, ಸಚಿನ್, ರಂಗಯ್ಯ, ಸುಂದ್ರೇಶ್, ರವಿಗೌಡ ಸಂಗಮಪುರ, ಶಶಿಧರ್ ಮಾಲೂರು, ರಾಜೇಗೌಡ ಎಸ್.ಹೊಸಳ್ಳಿ ಹಾಗೂ ಸಾರ್ವಜನಿಕರು ಇದ್ದರು. 7 ಕೆಸಿಕೆಎಂ 2ಮೂಡಿಗೆರೆ ತಾಲೂಕಿನ ಕನ್ನಾಪುರ ಸರ್ಕಲ್‌ನಲ್ಲಿ ರಸ್ತೆ ಕಾಮಗಾರಿ ನಡೆಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.