ಹಳಿಯಾಳದಲ್ಲಿ ಶಿಕ್ಷಕರಿಂದ ಪ್ರತಿಭಟನಾ ಮೆರವಣಿಗೆ

| Published : Aug 06 2024, 12:34 AM IST

ಸಾರಾಂಶ

ಹಳಿಯಾಳದಲ್ಲಿ ನೌಕರರ ಸಂಘದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ತಾಲೂಕಾಡಳಿತ ಸೌಧದವರೆಗೆ ತೆರಳಿ ರಾಜ್ಯ ಸರ್ಕಾರಕ್ಕೆ ಬರೆದ ವಿವಿದ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರಿಗೆ ಸಲ್ಲಿಸಿದರು.

ಹಳಿಯಾಳ: ಸೇವಾ ಜ್ಯೇಷ್ಠತೆಯ ಆದಾರದ ಮೇಲೆ ಬಡ್ತಿ ನೀಡಬೇಕು ಹಾಗೂ ಸೇವಾ ಸಂಬಂಧಿತ ವಿವಿದ ಬೇಡಿಕೆಗಳಿಗಾಗಿ ಆಗ್ರಹಿಸಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಶಾಲಾ ಅವಧಿ ಮುಗಿದ ನಂತರ ಸಂಜೆ ಬಿಇಒ ಕಾರ್ಯಾಲಯದ ಬಳಿ ಸೇರಿದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಮುಂದಾಳತ್ವದಲ್ಲಿ ಬಿಇಒ ಕಾರ್ಯಾಲಯದಿಂದ ತಮ್ಮ ಬೇಡಿಕೆಗಳಿಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ತಾಲೂಕಾಡಳಿತ ಸೌಧದವರೆಗೆ ತೆರಳಿ ರಾಜ್ಯ ಸರ್ಕಾರಕ್ಕೆ ಬರೆದ ವಿವಿದ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರಿಗೆ ಸಲ್ಲಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯಕ, ಪದವಿ ಶಿಕ್ಷಕರ ಸಂಘದ ಅಧ್ಯಕ್ಷ ಡಾರ್ವಿನ್ ಮಸ್ಕರೇನಸ್, ಶಿಕ್ಷಕರ ಸಂಘದ ಪ್ರಮುಖರಾದ ಉದಯ ನಾಯಕ, ವೆಂಕಟೇಶ ನಾಯಕ, ರಮೇಶ ಪಾಟೀಲ, ವಿಜಯಲಕ್ಷ್ಮೀ ಮುರ್ಗೇಶ, ಭಾರತಿ ನಲವಡೆ, ಸುಲೇಮಾನ ಶೇಖ್, ಶ್ರೀನಿವಾಸ ಹಾಗೂ ಇತರರು ಇದ್ದರು.ಬಿಇಒಗೂ ಮನವಿ: ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯಕ, ಪದವಿ ಶಿಕ್ಷಕರ ಸಂಘದ ಅಧ್ಯಕ್ಷ ಡಾರ್ವಿನ್ ಮಸ್ಕರೇನಸ್, ಶಿಕ್ಷಕರ ಸಂಘದ ಪ್ರಮುಖರಾದ ಉದಯ ನಾಯಕ ಮಾತನಾಡಿದರು. ನಂತರ ಬಿಇಒ ಪ್ರಮೋದ ಮಹಾಲೆ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.