ಕನ್ನಡಪ್ರಭ ವಾರ್ತೆ ಯಲ್ಲಾಪುರ

ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆಯ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ಮಾತನಾಡಿ, ಸಮುದಾಯದ ಅತಿಕ್ರಮಣದಾರರ ಜಿಪಿಎಸ್ ಆದ ಎಲ್ಲ ಹೊಲಗಳಿಗೆ ವಿದ್ಯುತ್ ಸಂಪರ್ಕ ನೀಡಿ ಅನುಕೂಲ ಮಾಡಿಕೊಡಬೇಕು. ಜಾತಿ ಬೇಧ ಇಲ್ಲದೇ ಎಲ್ಲ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಬೇಕು. ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಿದ್ದು, ಬಡಕೂಲಿಕಾರರು, ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಬಗ್ಗೆ ಕ್ರಮ ಆಗಬೇಕು. ರೈತರು ರಾಷ್ಟ್ರೀಕೃತ ಬ್ಯಾಂಕು ಸಹಕಾರಿ ಸಂಘಗಳಲ್ಲಿ ಹೊಂದಿರುವ ಎಲ್ಲ ಸಾಲ ಮನ್ನಾ ಮಾಡಬೇಕು. ರೈತರ ಬೆಳೆಗಳಿಗೆ ಬೆಲೆ ನಿಗದಿಗೊಳಿಸಬೇಕು. ಶಿರಸಿಯನ್ನು ಕದಂಬ ಜಿಲ್ಲೆಯಾಗಿ ಮಾಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು. ಸಂಘದ ರಾಜ್ಯಾಧ್ಯಕ್ಷೆ ಅಖಿಲಾ ರಾಜೇಶ ತಿವಾರಿ, ಧಾರವಾಡ ಜಿಲ್ಲಾಧ್ಯಕ್ಷ ಶಂಕರ ತಿಪ್ಪಣ್ಣನವರ, ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ವಾಲ್ಮೀಕಿ, ತಾಲೂಕು ಅಧ್ಯಕ್ಷ ನೂರ ಅಹಮ್ಮದ್ ಮುಜಾವರ, ಉಪಾಧ್ಯಕ್ಷ ಸುಭಾಸ್ ಶೇಷಗಿರಿ, ಪ್ರಮುಖರಾದ ಗೋವಿಂದ ಬೆಂಡ್ಲಗಟ್ಟಿ, ಚಂದ್ರಶೇಖರ ಮುಡಸಾಲಿ, ಮಾರ್ಟಿನ್ ಬಳ್ಳಾರಿ, ಜೈತುನಬಿ ಜಿಗಳೂರು, ಪ್ರಶಾಂತ ಕರಿಗಾರ, ಕಾವೇರಿ ಹಿರೇಮಠ, ಸುಜಾತಾ ಬರಮಣ್ಣನವರ್, ಗಾಯತ್ರಿ ಬಸವರಾಜ್, ಸಿದ್ದು ಕಾನು ಲಾಂಬೋರ, ಬಜ್ಜು ಪಾಂಡ್ರಮಿಶೆ, ಭಾಗು ಕೊಕರೆ, ರಾಮು ಕೊಕರೆ, ವಿಠ್ಠಲ ಪಾಂಡ್ರಮಿಸೆ, ಜಾನು ಪಠಕಾರೆ, ಸಿದ್ದು ವಿಠ್ಠು ಲಾಂಬೋರೆ, ಕಾನು ಸಿದ್ದು ಶಳಕೆ, ರೋಂಗು ವಿಠ್ಠು ಎಡಗೆ ಭಾಗವಹಿಸಿದ್ದರು.