ಸಾರಾಂಶ
ತಡಸ ಗ್ರಾಮಕ್ಕೆ ತಡಸ ಹುಬ್ಬಳ್ಳಿ ಬಸ್ ಸರಿಯಾಗಿ ಬಿಡುತ್ತಿಲ್ಲಾ ಅಲ್ಲದೆ ಇದ್ದ ಬಸ್ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಗ್ರಾಮದ ಹೊಂಡದ ಕಟ್ಟಿ ಬಸವಣ್ಣ ದೇವಸ್ಥಾನದಿಂದ ಕರವೇ ಗಜಸೇನೆಯ ನೂರಾರು ಕಾರ್ಯಕರ್ತರೊಂದಿಗೆ ಗ್ರಾಮದ ಹಲವಾರು ಜನರ ಜೊತೆಯಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿ ವಿರುದ್ಧ ವಿವಿಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮಕ್ಕೆ ತಡಸ ಹುಬ್ಬಳ್ಳಿ ಬಸ್ ಸರಿಯಾಗಿ ಬಿಡುತ್ತಿಲ್ಲಾ ಅಲ್ಲದೆ ಇದ್ದ ಬಸ್ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಗ್ರಾಮದ ಹೊಂಡದ ಕಟ್ಟಿ ಬಸವಣ್ಣ ದೇವಸ್ಥಾನದಿಂದ ಕರವೇ ಗಜಸೇನೆಯ ನೂರಾರು ಕಾರ್ಯಕರ್ತರೊಂದಿಗೆ ಗ್ರಾಮದ ಹಲವಾರು ಜನರ ಜೊತೆಯಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿ ವಿರುದ್ಧ ವಿವಿಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ಕರವೇ ಗಜಸೇನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಲೇಕಾರ, ಪ್ರತಿದಿನ ತಡಸದಿಂದ ಹುಬ್ಬಳ್ಳಿಗೆ ಸಂಚರಿಸುವ ಗ್ರಾಮೀಣ ಸಾರಿಗೆ ಬಸ್‌ಗಳನ್ನು ಸರಿಯಾದ ಸಮಯಕ್ಕೆ ಅಂದರೆ ಪ್ರತಿ ೧೫ ನಿಮಿಷಕೊಂದರಂತೆ ಸಂಚರಿಸುವಂತೆ ಹಾಗೂ ಈಗಿರುವ ೨ ಬಸ್‌ಗಳನ್ನು ಕನಿಷ್ಠ ೮ರಿಂದ ೧೦ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಉಪಾಧ್ಯಕ್ಷ ಯುಸುಫ ಸೈಕಲಗಾರ, ಬಸ್ ನಿಲ್ದಾಣದಲ್ಲಿ ಜನ ಕುಳಿತುಕೊಳ್ಳುವ ಆಸನಗಳು ತೀರಾ ಕಡಿಮೆಯಾಗಿವೆ. ಅವುಗಳನ್ನು ಹೆಚ್ಚಿಗೆ ಮಾಡಬೇಕು, ಅಲ್ಲದೇ ಶೌಚಾಲಯ, ಕಟ್ಟಡಕ್ಕೆ ಸುಣ್ಣ ಬಣ್ಣವಿಲ್ಲದೇ ಬಿಕೋ ಎನ್ನುತ್ತಿದೆ ನಿಲ್ದಾಣದ ವ್ಯವಸ್ಥೆಯನ್ನು ಸರಿಪಡಿಸಬೆಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿ ಬಿ.ಡಿ. ನಾಗರಾಜ, ತಮ್ಮೆಲ್ಲಾ ಬೇಡಿಕೆಗಳನ್ನು ೮-೧೦ ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮರಾಠ, ರಟ್ಟಿಹಳ್ಳಿ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ ಹಿಂಡಸಗೇರಿ, ರಟ್ಟಿಹಳ್ಳಿ ತಾಲೂಕು ಯುವ ಘಟಕದ ಅಧ್ಯಕ್ಷ ಖಲಂದರ ಯಲದಳ್ಳಿ, ರಟ್ಟಿಹಳ್ಳಿ ತಾಲೂಕು ಉಪಾಧ್ಯಕ್ಷ ಇಮ್ರಾನ್, ರಟ್ಟಿಹಳ್ಳಿ ತಾಲೂಕು ಸಂಚಾಲಕರಾದ ಸನಾವುಲ್ಲಾ, ತಾಲೂಕು ಸಹ ಕಾರ್ಯದರ್ಶಿ ಪಾಜಿಲ್ ಪುರದಗೆರಿ, ಸದಸ್ಯರು ರಿಜ್ವನ ಪುರದಗೇರಿ, ಶಿಗ್ಗಾಂವ ತಾಲೂಕು ಅಧ್ಯಕ್ಷ ಶಂಕರ ಬಡಿಗೇರ, ತಡಸ ಗ್ರಾಮ ಘಟಕದ ಅಧ್ಯಕ್ಷರಾದ ದಾವಲಸಾಬ ಸಿಕಂದರ, ಶಿಗ್ಗಾಂವ ತಾಲೂಕು ಪ್ರಧಾನ ಕಾರ್ಯದರ್ಶಿ ರೇವಣಸಿದ್ದಯ್ಯಾ ಹಿರೇಮಠ, ಶಿಗ್ಗಾಂವ ತಾಲೂಕು ಸಂಘಟನಾ ಕಾರ್ಯದರ್ಶಿ ಬ್ರಹ್ಮಾನಂದ ಕಮ್ಮಾರ, ಗ್ರಾಮ ಘಟಕ ಗೌರವ ಅಧ್ಯಕ್ಷರಾದ ಜಬ್ಬರಖಾನ ಪಠಾಣ, ಕಾರ್ಯದರ್ಶಿ ರಾಮಣ್ಣಾ ಕಮ್ಮಾರ, ಸದಸ್ಯರ ಮಕಬೂಲಸಾ ಬನವಲೂರ, ಅಪ್ಸರ್ ಡಾವಣಗೆರಿ, ಜಮೀರ ಕೊಲ್ಲಾಪೂರ, ಹಜರೇಸಾಬ ಕೊಲ್ಲಾಪೂರ, ಮಾಹಾವೀರ ಹಳ್ಳಿಯವರ, ಕೃಷ್ಣಾ ಬಡಿಗೇರ, ಶ್ರೀಧರ ಬಡಿಗೇರ, ಮಂಜು ಹುಬ್ಬಳ್ಳಿ, ಇಬ್ರಾಹಿಂ ಹಂಡಿ, ಮೋಲಾಲಿ ಹುಚ್ಚುಸಾಬನವರ,ಮತ್ತು ಗ್ರಾಮದ ಹಲವಾರು ಹಿರಿಯರು ಯುವಕರು ಇದ್ದರು.ಪೊಟೋ ಪೈಲ್ ನೇಮ್ ೫ಎಸ್ಜಿವಿ೪ತಡಸದ ಹೊಂಡದ ಕಟ್ಟಿ ಬಸವಣ್ಣ ದೇವಸ್ಥಾನದಿಂದ ಕರವೇ ಗಜಸೇನೆಯ ನೂರಾರು ಕಾರ್ಯಕರ್ತರೊಂದಿಗೆ ಗ್ರಾಮದ ಹಲವಾರು ಜನರು ಪ್ರತಿಭಟನೆ ನಡೆಸಿದರು.