ಸಾರಾಂಶ
ಇಂಡಿ ತಾಲೂಕಿನ ಗುತ್ತಿ ಬಸವಣ್ಣ ಹಾಗೂ ನಿಡಗುಂದಿ ಶಾಖಾ ಕಾಲುವೆ ಕೊನೆಯ ಭಾಗದ ಕೆರೆ ಕಟ್ಟೆಗಳಿಗೆ ಹಾಗೂ ಕಾಲುವೆಗಳಿಗೆ ನೀರು ಬಿಡದ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ ಸಂಘ ತಡವಲಗ ಗ್ರಾಮ ಘಟಕ ವತಿಯಿಂದ ಮೇ 24ರಂದು ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಭಾರತೀಯ ಕಿಸಾನ್ ಸಂಘ ತಡವಲಗಾ ಗ್ರಾಮ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಇಂಡಿ ತಾಲೂಕಿನ ಗುತ್ತಿ ಬಸವಣ್ಣ ಹಾಗೂ ನಿಡಗುಂದಿ ಶಾಖಾ ಕಾಲುವೆ ಕೊನೆಯ ಭಾಗದ ಕೆರೆ ಕಟ್ಟೆಗಳಿಗೆ ಹಾಗೂ ಕಾಲುವೆಗಳಿಗೆ ನೀರು ಬಿಡದ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ ಸಂಘ ತಡವಲಗ ಗ್ರಾಮ ಘಟಕ ವತಿಯಿಂದ ಮೇ 24ರಂದು ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಭಾರತೀಯ ಕಿಸಾನ್ ಸಂಘ ತಡವಲಗಾ ಗ್ರಾಮ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಭಾರತೀಯ ಕಿಸಾನ್ ಸಂಘ ತಡವಲಗಾ ಗ್ರಾಮ ಘಟಕದ ಅಧ್ಯಕ್ಷ ಚನ್ನಪ್ಪ ಜಟ್ಟೆಪ್ಪ ಮಿರಗಿ ಮಾತನಾಡಿ, ನಾವುಗಳು ಅನೇಕ ಬಾರಿ ಲಿಖಿತವಾಗಿ ಹಾಗೂ ಮೌಖಿಕವಾಗಿ ಭೇಟಿಯಾಗಿ ಅಹವಾಲನ್ನು ಹೇಳಿಕೊಂಡಿದ್ದೇವೆ. ತಾವುಗಳು ಕೂಡಾ ಇದ್ದಕ್ಕೆ ಸ್ಪಂದಿಸಿದ್ದು ತಾಲೂಕಿನ ಕೊನೆಯ ಭಾಗದ ಕೆರೆಗಳಿಗೆ ನೀರು ಬರದೆ ಇರುವುದು (ತಡವಲಗಾ, ಅಥರ್ಗಾ ಕೊಟ್ನಾಳ, ನಿಂಬಾಳ, ಇತ್ಯಾದಿ) ಕೆರೆಗಳಿಗೆ ಹಾಗೂ ಗುತ್ತಿಬಸವಣ್ಣ ಕಾಲುವೆಯ ಕೊನೆಯ ಭಾಗದ ರೈತರಿಗೆ (ತಡವಲಗಾ, ರೂಗಿ, ಮತ್ತು ಹಂಜಿಗಿ, ಚಿಕ್ಕಬೆನೂರ ಅಂಜುಟಗಿ, ಬೊಳೆಗಾಂವ, ಗಣವಲಗಾ, ತೆನ್ನೆಳ್ಳಿ ಇತ್ಯಾದಿ) ಹಾಗೂ ದನಕರಗಳಿಗೆ ನೀರು ಇಲ್ಲದಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಮೇ 24ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಗುರುನಾಥ ಬಗಲಿ, ಚಿದಾನಂದ ಬಸಣ್ಣ ಮದರಿ, ಮಲ್ಲಿಕಾರ್ಜುನ ನೇಕಾರ, ಈರಪ್ಪ ಗೊಟ್ಯಾಳ, ರೇವಣಸಿದ್ದ, ಮಲ್ಲೇಶ ಸುದಾಮ, ಬಸಪ್ಪ ಪಂತೊಜಿ, ಬಸವರಾಜ ಹಳ್ಳಿ, ಮಲ್ಲಿಕಾರ್ಜುನ ಕಂಬಾರ, ಸಿದ್ರಾಮ ತೇಲಿ, ನಿಂಗಪ್ಪ ಸುದಾಮ, ಮಳಸಿದ್ದ ನೇಕಾರ, ಮಾಳಪ್ಪ ಪೂಜಾರಿ, ರವಿ ಬಿರಾದಾರ, ಭೀಮರಾಯ ಬಿರಾದಾರ, ಚನ್ನಪ್ಪ ಮಿರಗಿ ಮತ್ತಿತರರು ಉಪಸ್ಥಿತರಿದ್ದರು.