ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಮುತ್ತಿಗೆ, ಪ್ರತಿಭಟನೆ

| Published : Jul 09 2024, 12:56 AM IST

ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಮುತ್ತಿಗೆ, ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

2023-24ನೇ ಸಾಲಿನ ಉದ್ಯೋಗ ಖಾತರಿ ಯೋಜನೆಯಡಿ ಒಂದೂ ದಿನವು ಕೆಲಸ ನೀಡದೆ ಇರುವ 42 ಗ್ರಾಪಂಯಡಿ ಕೂಳಗೆರೆ ಮೊದಲನೇಯದ್ದಾಗಿದೆ. ಕೃಷಿಕೂಲಿಕಾರರು ಕೆಲಸವಿಲ್ಲದೆ ಬೇರೆ ಊರುಗಳಿಗೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ದಯಮಾಡಿ ಗ್ರಾಪಂ ವ್ಯಾಪ್ತಿಯ ಕೂಲಿಕಾರರಿಗೆ ಕೆಲಸ ನೀಡಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ಉದ್ಯೋಗ ಖಾತ್ರಿ ಯೋಜನಯಡಿ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಪ್ರಾಂತ ಕೃಷಿಕೂಲಿಕಾರರ ಸಂಘದ ಕಾರ್ಯಕರ್ತರು ಕೂಳಗೆರೆ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಪಂ ಕಚೇರಿ ಎದುರು ಕೂಲಿಕಾರರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಪ್ರಾಂತ ಕೃಷಿಕೂಲಿಕಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಪಿ.ಅರುಣ್‌ಕುಮಾರ್ ಮಾತನಾಡಿ, ಕೃಷಿ ಕೆಲಸಗಳಿಲ್ಲದೆ ಬದುಕು ದುಸ್ತರವಾಗಿದೆ. ಕಳೆದ ಹಲವು ತಿಂಗಳುಗಳಿಂದಲೂ ಬರಗಾಲ ಆವರಿಸಿದ್ದು ಕೂಲಿಕಾರರು ಬಿಡಿಗಾಸಿಗೂ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2023-24ನೇ ಸಾಲಿನ ಉದ್ಯೋಗ ಖಾತರಿ ಯೋಜನೆಯಡಿ ಒಂದೂ ದಿನವು ಕೆಲಸ ನೀಡದೆ ಇರುವ 42 ಗ್ರಾಪಂಯಡಿ ಕೂಳಗೆರೆ ಮೊದಲನೇಯದ್ದಾಗಿದೆ. ಕೃಷಿಕೂಲಿಕಾರರು ಕೆಲಸವಿಲ್ಲದೆ ಬೇರೆ ಊರುಗಳಿಗೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ದಯಮಾಡಿ ಗ್ರಾಪಂ ವ್ಯಾಪ್ತಿಯ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಕೂಲಿ ಕೆಲಸ ನೀಡುವ ಕುರಿತು ಭರವಸೆ ನೀಡುವ ವರೆಗೂ ಪಂಚಾಯಿತಿ ಬಿಟ್ಟು ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು. ಸ್ಥಳಕ್ಕೆ ತಾಪಂ ಅಧಿಕಾರಿ ಮಂಜುನಾಥ್ ಆಗಮಿಸಿ ಕೂಲಿ ಕೆಲಸ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ಕೃಷಿಕೂಲಿಕಾರರ ಸಂಘದ ತಾಲೂಕು ಉಪಾಧ್ಯಕ್ಷ ಗೋಪಾಲಸ್ವಾಮಿ, ಪಿಡಿಓ ರಾಜಣ್ಣ, ಚಿಕ್ಕರಸಿನಕೆರೆ ವಲಯ ಸಮಿತಿ ಅಧ್ಯಕ್ಷೆ ನಾಗಮ್ಮ, ಕಾಯಬಂಧುಗಳಾದ ಜಗದೀಶ್, ಸಿದ್ದರಾಜು, ವರಲಕ್ಷ್ಮಿ, ಆನಂದ್, ಮಹೇಶ್, ಸುಮಿತ್ರ, ರತ್ನಮ್ಮ, ಸೌಮ್ಯ ಸೇರಿದಂತೆ ಹಲವರಿದ್ದರು.

ಚಾಂಷುಗರ್, ಎನ್‌ಎಸ್‌ಎಲ್ ಕಾರ್ಖಾನೆ ಶೀಘ್ರ ಆರಂಭಕ್ಕೆ ಒತ್ತಾಯ

ಮಂಡ್ಯ:ಮದ್ದೂರು ತಾಲೂಕಿನ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮತ್ತು ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗಳನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಮದ್ದೂರು ತಾಲೂಕು ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಎರಡು ಕಂಪನಿಗಳ ವ್ಯಾಪ್ತಿಯಲ್ಲಿ ೧೫ ತಿಂಗಳ ಕಬ್ಬು ಬಾಕಿ ಉಳಿದಿದ್ದು, ಕಾರ್ಖಾನೆ ಆರಂಭ ವಿಳಂಬವಾದಲ್ಲಿ ಕಬ್ಬಿನ ಇಳುವರಿ ಕುಸಿತವಾಗುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ಅರೆ ನೀರಾವರಿಯಿಂದ ಕಬ್ಬಿನ ಬೆಳೆ ಮೇಲೆ ಪರಿಣಾಮ ಉಂಟಾಗುತ್ತಿದ್ದು, ಕಳೆದ ಹಂಗಾಮಿನ ಕಬ್ಬು ಕೂಡ ಅರೆಯಲು ಸಿದ್ಧವಾಗಿದೆ. ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಿದ್ದು, ಇದರ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ ಕಾರಣ ಈ ಕೂಡಲೇ ಕಬ್ಬು ಅರೆಯುವಿಕೆಯನ್ನು ಆರಂಭಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡರಾದ ಇಂಡುವಾಳು ಚಂದ್ರಶೇಖರ್, ರಾಮಕೃಷ್ಣಯ್ಯ, ಶ್ರೀನಿವಾಸಯ್ಯ, ದೇವರಾಜು, ಶೊ.ಸಿ. ಪ್ರಕಾಶ್, ಎಚ್.ಬಿ. ಸಿದ್ದರಾಮು, ಮಹೇಂದ್ರ, ಚಿಕ್ಕೇಗೌಡ, ಹನುಮಂತು, ನಾಗರತ್ನ, ಚನ್ನಯ್ಯ ಸೇರಿದಂತೆ ಹಲವರಿದ್ದರು.