ಪತ್ರಕರ್ತರ ಹಾಗೂ ಸಾರ್ವಜನಿಕರ, ಅಧಿಕಾರಿಗಳ ಅನುಕೂಲಕ್ಕಾಗಿ ದೇವರಹಿಪ್ಪರಗಿ ತಾಲೂಕಿಗೂ ಸಹ ಪತ್ರಿಕಾ ಭವನದ ಅವಶ್ಯಕತೆ ಇದೆ. ಕೂಡಲೇ ಸೂಕ್ತವಾದ ಸ್ಥಳದಲ್ಲಿ ನಿವೇಶನ ಒದಗಿಸಿ ಕೊಡಬೇಕೆಂದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣದಲ್ಲಿ ನೂತನವಾಗಿ ಪತ್ರಿಕಾ ಭವನ ನಿರ್ಮಿಸಲು ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸೂಕ್ತವಾದ ಒಂದು ಸ್ಥಳದಲ್ಲಿ ನಿವೇಶನ ಒದಗಿಸುವಂತೆ ಕೋರಿ ತಹಸೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ತಾಲೂಕಿನ ಪತ್ರಕರ್ತರ ಸಂಘದ ಎಲ್ಲ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ತಾಲೂಕು ಕಾನಿಪ ಅಧ್ಯಕ್ಷ ಸಂಗಮೇಶ ಉತ್ನಾಳ ಮಾತನಾಡಿ, ರಾಜ್ಯದ ಹಲವಾರು ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ಪತ್ರಿಕಾ ಭವನಗಳು ನಿರ್ಮಾಣಗೊಂಡಿದ್ದು. ಪತ್ರಕರ್ತರ ಹಾಗೂ ಸಾರ್ವಜನಿಕರ, ಅಧಿಕಾರಿಗಳ ಅನುಕೂಲಕ್ಕಾಗಿ ದೇವರಹಿಪ್ಪರಗಿ ತಾಲೂಕಿಗೂ ಸಹ ಪತ್ರಿಕಾ ಭವನದ ಅವಶ್ಯಕತೆ ಇದೆ. ಕೂಡಲೇ ಸೂಕ್ತವಾದ ಸ್ಥಳದಲ್ಲಿ ನಿವೇಶನ ಒದಗಿಸಿ ಕೊಡಬೇಕೆಂದರು.

ಮನವಿಗೆ ಸ್ಪಂದಿಸಿದ ಪಪಂ ಮುಖ್ಯಅಧಿಕಾರಿ ಅಫ್ರೋಜ ಅಹ್ಮದ ಪಟೇಲ, ತಮ್ಮ ಬೇಡಿಕೆ ಪರಿಗಣಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದು ಬೇಡಿಕೆ ಈಡೇರಿಸುವುದಾಗಿ ಹೇಳಿದರು. ತಹಸೀಲ್ದಾರ್‌ ನಿಂಗಣ್ಣ ಬಿರಾದಾರ ಸಹ ತಮ್ಮ ಬೇಡಿಕೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಿಳಿಸಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ ಕುಂಬಾರ, ಉಪಾಧ್ಯಕ್ಷರಾದ ಶ್ರೀಧರ್ ನಾಡಗೌಡ, ಮಂಜುನಾಥ ಬ್ಯಾಕೋಡ, ಖಜಾಂಚಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಕಾರ್ಯದರ್ಶಿ ಹುಸೇನ್ ಕೊಕಟನೂರ, ಕಾ.ಕಾರಣಿ ಸದಸ್ಯರಾದ ಈರನಗೌಡ ಪಾಟೀಲ, ಮಹಮದ್ ರಫೀಕ ಮೋಮಿನ್, ಹಸನ್ ನದಾಫ, ರಫೀಕ್ ಪತ್ತೆಅಹ್ಮದ್, ಅಶೋಕ ಗೊಲ್ಲರ, ಅಮೀದ ಮುಲ್ಲಾ, ಮಲ್ಲಿಕಾರ್ಜುನ ಕಬ್ಬಿನ ಸೇರಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.