ಲಕ್ಷ್ಮೇಶ್ವರ: ಕಳೆದ ಒಂದೂವರೆ ತಿಂಗಳಿಂದ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮಗ್ರ ರೈತಪರ ಹೋರಾಟ ವೇದಿಕೆ ವತಿಯಿಂದ ಪಟ್ಟಣದ ಪುರಸಭೆ ಎದುರು ಬುಧವಾರ ನಡೆಸಿದರು.
ಈ ವೇಳೆ ರೈತಪರ ಹೋರಾಟ ವೇದಿಕೆಯ ಮುಖಂಡ ಮಂಜುನಾಥ ಮಾಗಡಿ ಮಾತನಾಡಿ, ಕಳೆದ ಒಂದೂವರೆ ತಿಂಗಳಿಂದ ಪಟ್ಟಣದ ಜನತೆ ಕುಡಿಯುವ ನೀರು ಇಲ್ಲದೆ ಪರದಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಕ್ಯಾರೆ ಎನ್ನುತ್ತಿಲ್ಲ. ಪೈಪ್ ಲೈನ್ ದುರಸ್ತಿಯ ನೆಪ ಹೇಳುತ್ತಾರೆ ಎಂದರು.ಕುಡಿಯುವ ನೀರಿನ ಯೋಜನೆ ಹದಗೆಟ್ಟಿದ್ದರೂ ಜನಪ್ರತಿನಿಧಿಗಳು ದುರಸ್ತಿಗೆ ಮನಸ್ಸು ಮಾಡುತ್ತಿಲ್ಲ. ಪಟ್ಟಣದ ಹಳ್ಳದ ಕೇರಿಯ ಓಣಿಯಲ್ಲಿ ಹರಿಯುವ ಹಳ್ಳದ ನೀರು ಮನೆಯೊಳಗೆ ನುಗ್ಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸಾಮೂಹಿಕ ಶೌಚಾಲಯ ಗಬ್ಬುನಾತ ಬೀರುತ್ತಿದ್ದರೂ ಸ್ವಚ್ಛತೆಗೆ ಪುರಸಭೆ ಕಾರ್ಮಿಕರು ಮುಂದಾಗುತ್ತಿಲ್ಲ. ಪಟ್ಟಣದ ಇಟ್ಟಿಗೇರಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದರು.
ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಮಾತನಾಡಿ, ಉಪವಿಭಾಗಾಧಿಕಾರಿಗಳು ಬಂದು ಮನವಿ ಸ್ವಿಕರಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವರೆಗೂ ಇಲ್ಲಿಂದ ಕದಲುವುದಿಲ್ಲವೆಂದರು.ಧರಣಿ ನಿರತ ಸ್ಥಳಕ್ಕೆ ಜಿಲ್ಲಾ ಯೋಜನಾ ನಿರ್ಧೇಶಕ ಬಸನಗೌಡ ಕೋಟೂರ ಆಗಮಿಸಿ, ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರದಲ್ಲಿಯೇ ಕೊಳವೆ ಬಾವಿ ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಿಕೊಡುತ್ತೇವೆ. ಲಂಡಿ ಹಳ್ಳದ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಹಿಡಿಯಲು ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಇನ್ನುಳಿದ ಸಮಸ್ಯೆಗಳನ್ನು ಕ್ರಿಯಾಯೋಜನೆ ತಯಾರಿಸಿ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು. ನಂತರ ಪ್ರತಿಭಟನೆ ಮೊಟಕುಗೊಳಿಸಲಾಯಿತು.
ಈ ವೇಳೆ ಟಾಕಪ್ಪ ಸಾತಪುತೆ, ಮಲ್ಲಪ್ಪ ಅಂಕಲಿ, ಹೊನ್ನಪ್ಪ ವಡ್ಡರ, ಶಂಕರ ಬ್ಯಾಡಗಿ, ಶಿವಣ್ಣ ಕಟಗಿ, ಪ್ರಕಾಶ ಗುತ್ತಲ, ಫಕ್ಕೀರೇಶ ಭಜಂತ್ರಿ, ಮುತ್ತು ಬುರಡಿ, ಮಹಾಂತೇಶ ಉಮಚಗಿ, ಚಂದ್ರು ಮಾಗಡಿ, ಮಲ್ಲಿಕಾರ್ಜುನ ನೀರಾಲೋಟ, ಶಂಕ್ರಪ್ಪ ಬುರಡಿ, ಮಾರುದ್ರಪ್ಪ ಲಕ್ಕುಂಡಿ, ಫಕ್ಕಿರಪ್ಪ ರಾಯರ, ಸೋಮಣ್ಣ ಅಂಬಲಿ, ಹೇಮಣ್ಣ ಬುರಡಿ, ಶಿವಪ್ಪ ಹುಲಕೋಟಿ, ಗಂಗಾಧರ ಬೆಲ್ಲದ, ಮಂಜುನಾಥ ಸಂಶಿ, ನಾಗಪ್ಪ ಮುಳಗುಂದ, ಮಂಜುನಾಥ ಗೊರವರ, ಭರಮಗೌಡ ಹೆಬ್ಬಾಳ, ಗಣೇಶ ನೂಲ್ವಿ, ರಾಜಪ್ಪ ಕಣವಿ, ಅರುಣಾ ಕಣವಿ, ಶಾಂತವ್ವ ಪಗಡಿ, ಗಿರಿಜಮ್ಮ ಕರೆಯತ್ತಿನ, ಶಿವಣ್ಣ ಪಾಣಿಗಟ್ಟಿ, ಗೌರಮ್ಮ ಅಂಗಡಿ, ನೀಲಮ್ಮ ಹಣಗಿ, ಲಲಿತವ್ವ ಭಜಂತ್ರಿ, ವಿಜಕ್ಕ ಭಜಂತ್ರಿ, ಶಂಕ್ರವ್ವ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.