ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ: ಕೆ.ನಾರಾಯಣಗೌಡ

| Published : May 02 2024, 12:20 AM IST

ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ: ಕೆ.ನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಭಿತವಾಗಿದೆ, ದಕ್ಷತೆಯಿಂದ ಕೂಡಿದ ಕಾರ್ಮಿಕ ವರ್ಗದಿಂದ ಮಾತ್ರ ದೇಶದ ಆರ್ಥಿಕ ಪ್ರಗತಿ ಸಾಧ್ಯ, ಕಾರ್ಮಿಕರ ಪ್ರತಿ ನಿಮಿಷದ ಹನಿ ಹನಿ ಬೆವರೂ ಸಹ ದೇಶದ ಆರ್ಥಿಕತೆಯ ಅಭಿವೃದ್ಧಿಯ ಮೆಟ್ಟಿಲು. ಕಾರ್ಮಿಕ ಕೈ ಬಿಟ್ಟರೆ ಆರ್ಥಿಕತೆ ನೆಲಕಚ್ಚುವ ಜೊತೆಗೆ ಕಾರ್ಮಿಕರಿಲ್ಲದ ದೇಶವನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಕಾರ್ಮಿಕರ ಬೆವರ ಹನಿ ಮಾಸುವ ಮುನ್ನ ದುಡಿಮೆಯ ಹಣವನ್ನು ಕಾರ್ಮಿಕರಿಗೆ ಪಾವತಿಸುವ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಮಾಡಿದರು.

ವಿಶ್ವ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪ್ರಗತಿಪರ ರೈತ ಬಂಗವಾದಿ ನಾಗರಾಜ್‌ಗೌಡರ ಕೃಷಿ ಭೂಮಿಯಲ್ಲಿ ದುಡಿಯುವ ರೈತ ಮಹಿಳೆಯರಿಗೆ ಗಿಡ ಹಾಗೂ ರಾಷ್ಟ್ರ ಭಾವುಟ ನೀಡುವ ಮೂಲಕ ಸನ್ಮಾನಿಸಿ ಮಾತನಾಡಿ, ಕೃಷಿ ಕ್ಷೇತ್ರದಿಂದ ಪ್ರಾರಂಭವಾಗುವ ಕಾರ್ಮಿಕರ ದುಡಿಮೆ ಕೈಗಾರಿಕೆ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಊಹಸಿಕೊಳ್ಳಲಾಗದ ಸೇವೆಯಾಗಿದೆ ಎಂದು ಕಾರ್ಮಿಕರ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಭಿತವಾಗಿದೆ, ದಕ್ಷತೆಯಿಂದ ಕೂಡಿದ ಕಾರ್ಮಿಕ ವರ್ಗದಿಂದ ಮಾತ್ರ ದೇಶದ ಆರ್ಥಿಕ ಪ್ರಗತಿ ಸಾಧ್ಯ, ಕಾರ್ಮಿಕರ ಪ್ರತಿ ನಿಮಿಷದ ಹನಿ ಹನಿ ಬೆವರೂ ಸಹ ದೇಶದ ಆರ್ಥಿಕತೆಯ ಅಭಿವೃದ್ಧಿಯ ಮೆಟ್ಟಿಲು. ಕಾರ್ಮಿಕ ಕೈ ಬಿಟ್ಟರೆ ಆರ್ಥಿಕತೆ ನೆಲಕಚ್ಚುವ ಜೊತೆಗೆ ಕಾರ್ಮಿಕರಿಲ್ಲದ ದೇಶವನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

ದಿನದ ೨೪ ಗಂಟೆ ದುಡಿಯುವ ಕಾರ್ಮಿಕನ ಬೆವರ ಹನಿಯೇ ಮಾಲೀಕನ ಶ್ರೀಮಂತಿಕೆಯ ಮೆಟ್ಟಿಲು. ಆದರೆ, ಅದೇ ಮಾಲೀಕ ಕಾರ್ಮಿಕರನ್ನು ಹೆಜ್ಜೆ ಹೆಜ್ಜೆಗೂ ವೇತನದಿಂದ ಹಿಡಿದು ಮೂಲಭೂತ ಸೌಕರ್ಯಗಳನ್ನು ನೀಡದೆ ವಂಚನೆ ಮಾಡುತ್ತಿರುವುದು ದುರಾದೃಷ್ಟಕರವಾಗಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಾಧ್ಯಕ್ಷ ತೆರ್‍ನಹಳ್ಳಿ ಆಂಜಿನಪ್ಪ ಮಾತನಾಡಿ, ದಿನದ ೨೪ ಗಂಟೆ ದುಡಿಯುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನಿಯಮದ ಪ್ರಕಾರ ಮಾಲೀಕನು ಕನಿಷ್ಠ ವೇತನ ನೀಡುವ ಜೊತೆಗೆ ಗುಣಮಟ್ಟದ ಆಹಾರ, ಆರೋಗ್ಯ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಬೇಕು. ಆದರೆ, ಮಾಲೀಕನು ಯಾವುದೇ ಕಾರ್ಮಿಕ ನಿಯಮ ಪಾಲಿಸದೇ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ದುಡಿಯುವ ಕಾರ್ಮಿಕನಿಗೆ ವಿವಿಧ ಅನುದಾನಗಳ ಹೆಸರಿನಲ್ಲಿ ಕೋಟ್ಯಾಂತರ ರುಪಾಯಿ ಹಣ ಬಿಡುಗಡೆಯಾಗುತ್ತಿದ್ದರೂ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ ಕೋಟಿ ಹಣವನ್ನು ಕಾರ್ಮಿಕರ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಜಿಲ್ಲಾ ಸುಪ್ರೀಂ ಚಲ, ಗಿರೀಶ್, ರಾಮಸಾಗರ ವೇಣು, ಆಲವಾಟ ಶಿವು, ತೆರ್‍ನಹಳ್ಳಿ ಲೋಕೇಶ್, ಸಹದೇವಣ್ಣ, ಮುನಿರಾಜು, ಶೇಕ್‌ಶಪಿಹುಲ್ಲಾ, ಪಾರುಕ್‌ಪಾಷ, ಬಂಗಾರಿಮಂಜು, ಭಾಸ್ಕರ್, ರಾಜೇಶ್, ವಿಜಯ್‌ಪಾಲ್, ದೇವರಾಜ್, ಯಲ್ಲಣ್ಣ, ಹರೀಶ್ ಇದ್ದರು.