ನಗರದ ರಾಮಸಮುದ್ರ ಬಡಾವಣೆಯ 5 ವಾರ್ಡ್ ಗಳಲ್ಲೂ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಒಳಚರಂಡಿಯ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಬಡಾವಣೆಯ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ನಿವಾಸಿಗಳು ಖಾಲಿ ಬಿಂದಿಗೆ ಹಿಡಿದು ರಸ್ತೆತಡೆ ನಡೆಸಿ, ಜಿಲ್ಲಾಡಳಿತ, ನಗರಸಭೆ, ಶಾಸಕರ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದ ರಾಮಸಮುದ್ರ ಬಡಾವಣೆಯ 5 ವಾರ್ಡ್ ಗಳಲ್ಲೂ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಒಳಚರಂಡಿಯ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಬಡಾವಣೆಯ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ನಿವಾಸಿಗಳು ಖಾಲಿ ಬಿಂದಿಗೆ ಹಿಡಿದು ರಸ್ತೆತಡೆ ನಡೆಸಿ, ಜಿಲ್ಲಾಡಳಿತ, ನಗರಸಭೆ, ಶಾಸಕರ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ರಾಮಸಮುದ್ರ ಬಡಾವಣೆಯ 5 ವಾರ್ಡ್‌ಗಳಲ್ಲೂ ಐದಾರು ತಿಂಗಳಿನಿಂದಲ್ಲೂ ಕುಡಿಯುವ ನೀರು ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿ 4 ವರ್ಷಗಳು ಕಳೆದರೂ ಕೂಡ ಅನೇಕ ರಸ್ತೆಗಳನ್ನು ನಗರಸಭೆಯವರು ಇಲ್ಲಿಯವರೆಗೂ ಮಾಡಿಲ್ಲ. ಗುತ್ತಿಗೆದಾರರು ಕೆಲಸ ಮಾಡಿಲ್ಲ ಮಳೆ ಬಂದರೆ ನಿವಾಸಿಗಳು ತಿರುಗಾಡಲು ಬಹಳ ತೊಂದರೆಯಾಗಿದೆ. ಕುಡಿಯುವ ನೀರಿಗಾಗಿ ನಿವಾಸಿಗಳು ಆಗಾಧವಾದ ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಬೋರ್‌ವೆಲ್‌ ದುರಸ್ಥಿ ಪಡಿಸಿಲ್ಲ. ನಗರಸಭೆ ಬಹಳ ದಿವ್ಯನಿರ್ಲಕ್ಷತೆ ವಹಿಸಿದೆ ಎಂದು ಆರೋಪಿಸಿದರು.

ಬಡಾವಣೆಯ ಮುಖ್ಯರಸ್ತೆಯಾದ ಹಳ್ಳದ ಬೀದಿಯ ರಸ್ತೆಯು ಸಮಸ್ಯೆಯಿಂದ ಕೂಡಿದ್ದು ಜನರು ತಿರುಗಾಡಲು ದಿನನಿತ್ಯ ತೊಂದರೆಯಾಗುತ್ತಿದೆ. ರಾಮಸಮುದ್ರದ ಆಯ್ದ ಬೀದಿಗಳಿಗೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ನಗರೋತ್ತಾನ ಯೋಜನೆಯಡಿಯಲ್ಲಿ ಹಣ ಬಿಡುಗಡೆಯಾಗಿ ಟೆಂಡರ್ ಆಗಿರುತ್ತದೆ. ಆದರೆ ಗುತ್ತಿಗೆದಾರರು ರಸ್ತೆಯನ್ನು ನಿರ್ಮಾಣ ಮಾಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ರಸ್ತೆಯ ಕಾಮಗಾರಿಯನ್ನು ಬೇಗ ಮುಗಿಸಿಕೊಡಿ ಎಂದು ಹಲವು ಬಾರಿ ಮನವಿ ಮಾಡಿದರು. ಯಾವುದೇ ಪ್ರಯೋಜನ ವಾಗಿಲ್ಲ ಎಂದು ದೂರಿದರು.

ನಗರಸಭೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಮುಗಿಸಿರುವುದಿಲ್ಲ. ಹಾಗೂ ರಾಮಸಮುದ್ರದ ಪೌರಕಾರ್ಮಿಕರ ಕಾಲೋನಿ ಹತ್ತಿರ ಒಳಚರಂಡಿಯು ಬ್ಲಾಕ್ ಆಗಿ ಒಳಚರಂಡಿಯ ನೀರು ರಸ್ತೆಯ ಮೇಲೆ ಬಂದು ಅವಸ್ಥೆಯಿಂದ ಕೂಡಿದ್ದು ಮಲೀನವಾದ ನೀರಿನಿಂದ ಅಲ್ಲಿನ ನಿವಾಸಿಗಳು ವಾಸಿಸಲು ತುಂಬಾ ತೊಂದರೆಯಾಗಿರುತ್ತದೆ. ಇದರ ಬಗ್ಗೆ ಕೂಡ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದ್ದರು ಕೂಡ ಸಮಸ್ಯೆಯನ್ನು ಇನ್ನೂ ಬಗೆಹರಿಸಿರುವುದಿಲ್ಲ. ರಾಮಸಮುದ್ರದ ಬಡಾವಣೆಯ ದುರ್ಗಿಗುಡಿ ಬೀದಿ, ಹಳ್ಳದಬೀದಿ, ಕುರುಬರ ಬೀದಿ, ಆದಿಜಾಂಬವರ ಬೀದಿ, ನಾಯಕರ ಬೀದಿ ಕೋಟೆಬೀದಿ, ಅಂಬೇಡ್ಕರ್ ಬಡಾವಣೆ, ಚಿಕ್ಕಹೊಸ ಬಡಾವಣೆ ಬೀದಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಅಲ್ಲಿನ ಬೋರ್‌ಗಳು ನೀರಿಲ್ಲದೆ ಬತ್ತಿ ಹೋಗಿರುತ್ತದೆ. ಬೋರ್‌ವೆಲ್‌ಗಳನ್ನು ರೀಬೋರ್ ಮಾಡಬೇಕೆಂದು ಹಲವಾರು ಬಾರಿಮನವಿ ಮಾಡಿದರು ಸಹ ರೀಬೋರ್ ಮಾಡಿರುವುದಿಲ್ಲ. ಹಾಗೂ ಹಲವು ಬೀದಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡದೇ ಅವ್ಯವಸ್ಥೆಯಿಂದ ಕೂಡಿರುತ್ತದೆ. ಬಡಾವಣೆಯ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಇಲ್ಲದಿದ್ದರೆ ನಗರಸಭೆಗೆ ಬಡಾವಣೆಯ ನಿವಾಸಿಗಳೊಂದಿಗೆ ಮುತ್ತಿಗೆ ಹಾಕಬೇಕಾಗುತ್ತದೆ ನಗರಸಭೆ, ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಆ‌ರ್.ವಿ.ಮಹದೇವಸ್ವಾಮಿ ಮಾತನಾಡಿ, ರಾಮಸಮುದ್ರ ಬಡಾವಣೆಯ 5 ವಾರ್ಡ್‌ಗಳಲ್ಲೂ ಕುಡಿಯುವ ನೀರು, ರಸ್ತೆ ಸಮಸ್ಯೆಯಾಗಿದ್ದು, ನಿವಾಸಿಗ‍ಳು ತಿರುಗಾಡಲು ತುಂಬಾ ಕಷ್ಟವಾಗಿದ್ದು, ಕುಡಿಯುವ ನೀರು ರಸ್ತೆ ಸೌಲಭ್ಯ ಕಲ್ಪಿಸುವಂತೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಶೀಘ್ರದಲ್ಲೇ.ಈ ಸಮಸ್ಯೆ ಬಗೆಹರಿಸಬೇಕು ನಗರೋತ್ಥಾನ ಯೋಜನೆಯಡಿಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಮಸಮುದ್ರ ಶಿವು, ಆರ್.ಪುಟ್ಟಮಲ್ಲಪ್ಪ, ಭೃಂಗೇಶ್, ಆರ್.ಡಿ.ಮಹೇಶ್,ವೇಣುಗೋಪಾಲ್, ಹೇಮಂತ್ ಕುಮಾರ್, ಗಿರೀಶ್, ಕುಮಾರ್,ನವೀನ್, ಸೋಮಣ್ಣ, ಚಿನ್ನಸ್ವಾಮಿ, ಮಹದೇವಯ್ಯ, ಹೋಟೆಲ್ ಪುಟ್ಟಣ್ಣ,

ಕುಮಾರ್, ಯುವಗಿರಿ, ಅಜಯ್, ರವಿ, ದೇವಣ್ಣ,ಇತರರು ಭಾಗವಹಿಸಿದ್ದರು.