ಸಾರಾಂಶ
ಮಕ್ಕಳಿಗೆ ಸಕಾಲಕ್ಕೆ ಸರಿಯಾಗಿ ಸೇವೆ ಸೌಲಭ್ಯ ಸಿಗುವಂತೆ ನೋಡಿಕೊಂಡು ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮದ ಬಗ್ಗೆ ಅರಿವು.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರತಿಯೊಬ್ಬರಿಗೆ ಸರ್ಕಾರದ ಸೇವೆಗಳು ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಸಕಾಲಕ್ಕೆ ಸರಿಯಾಗಿ ಸೇವೆ ಸೌಲಭ್ಯ ಸಿಗುವಂತೆ ನೋಡಿಕೊಂಡು ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಸಲಹೆ ನೀಡಿದರು.ಜಿಲ್ಲಾಡಳಿತ ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಆರ್‌ಸಿಎಚ್ ಕಾರ್ಯಾಲಯದ ಹಾಗೂ ಜಿಮ್ಸ್ ಸರ್ಕಾರಿ ಆಸ್ಪತ್ರೆ ಕಲಬುರಗಿ ಇವರಗಳ ಸಂಯೋಗದಲ್ಲಿ ಜಿಲ್ಲಾ ಜಿಮ್ಸ್ ಆಸ್ಪತ್ರೆಯ, ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರ (ಎನ್ಆರ್‌ಸಿ) ಸಭಾಂಗಣದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮಕ್ಕೆ ಸಸಿಗೆ ನೀರು ಏರಿಯುವ ಮೂಲಕ ಚಾಲನೆ ನೀಡಿದರು.
ಮಕ್ಕಳ ತಾಯಿಯೊಂದಿಗೆ ಮಾತನಾಡಿ, ಮಕ್ಕಳಿಗೆ ಸರಿಯಾದ ಸಮಯಕ್ಕೆ ಆರೋಗ್ಯದ ತಪಾಸಣೆ ಮಾಡಿಸಿಕೊಂಡು ಅವರ ಆರೋಗ್ಯದ ಗಮನಹರಿಸಿ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಮಾತನಾಡಿದರು.
ಆರ್‌ಸಿಎಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ, ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿ, ಬಿಎಸ್‌ಕೆ ಯೋಜನೆ ಅಡಿಯಲ್ಲಿ 0-18 ವರ್ಷದ ಎಲ್ಲಾ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಪ್ರತಿ ಒಬ್ಬಳು ತಾಯಿಂದಿಯರು ತಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಹೆಚ್ಚು ಇರಬೇಕು.ಪ್ರಪ್ರಥಮವಾಗಿ ಜಿಲ್ಲಾ ಮಟ್ಟದಲ್ಲಿ ತೊಂದರೆವುಳ್ಳ ಮಕ್ಕಳನ್ನು ಆರ್‌ಬಿಎಸ್‌ಕೆ ಶಿಬಿರದ ಮುಖಾಂತರ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರದ ಯೋಜನೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಆರ್‌ಬಿಎಸ್‌ಕೆ ತಂಡ ವೈದ್ಯಾಧಿಕಾರಿಗಳ ಮುಖಾಂತರ ಪತ್ತೆ ಹಚ್ಚಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಸಾರ್ವಜನಿಕರು ಆರೋಗ್ಯಕರ ಜೀವನ ನಡೆಸಲು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರು ಜಿಮ್ಸ್ ಆಸ್ಪತ್ರೆ ಯ ಡಾ. ಅಂಬಾರಾಯ ರುದ್ರವಾಡಿ , ಜಿಮ್ಸ್ ಮೆಡಿಕಲ್ ಮುಖ್ಯಸ್ಥರು ಡಾ. ಶಿವಕುಮಾರ ಜಿಲ್ಲಾ ಮಕ್ಕಳ ವಿಭಾಗದ ಮುಖ್ಯಸ್ಥರು ಡಾ. ರೇವಣಸಿದ್ದಪ್ಪ ಬೊಸ್ಗಿ. ತಾಲ್ಲೂಕು ಆರೋಗ್ಯಾಧಿಕಾರಿಗಳು ಡಾ. ಮಾರುತಿ ಕಾಂಬಳೆ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವಿಠ್ಠಲ ಪತ್ತಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮೇಶೇಕರ್ ಹಂಚಿನಳ, ಬಿಆರ್ ಸಿ ಪ್ರಕಾಶ ರಾಠೋಡ. ಬಿಐಇ ಆರ್‌ಟಿ ಗಳು , ಸಿಡಿಪಿಓ ಭೀಮರಾಯ ಕಣ್ಣೂರ್ ಹಾಗೂ ಸಿಬ್ಬಂದಿ ಇದ್ದರು.