ಸಾರಾಂಶ
ರಾಜ್ಯದ ಅನುದಾನಿತ ಪಪೂ ವಿದ್ಯಾಲಯಗಳಲ್ಲಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಕ್ವಾಲಿಟಿ ಮತ್ತು ಕ್ವಾಂಟಿಟಿ ಶಿಕ್ಷಣ ನೀಡಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳ ಕೊರತೆ ಎದುರಾಗುವುದಿಲ್ಲ ಎಂದು ವಿಧಾನ ಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ರಾಣಿಬೆನ್ನೂರು: ರಾಜ್ಯದ ಅನುದಾನಿತ ಪಪೂ ವಿದ್ಯಾಲಯಗಳಲ್ಲಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಕ್ವಾಲಿಟಿ ಮತ್ತು ಕ್ವಾಂಟಿಟಿ ಶಿಕ್ಷಣ ನೀಡಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳ ಕೊರತೆ ಎದುರಾಗುವುದಿಲ್ಲ ಎಂದು ವಿಧಾನ ಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಬಿಎಜೆಎಸ್‌ಎಸ್ ಕಾಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಅನುದಾನಿತ ಪಪೂ ಕಾಲೇಜುಗಳ ನೌಕರರ ಸಂಘದ ವತಿಯಿಂದ ಹಾವೇರಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವಿಷಯದ ಉಪನ್ಯಾಸಕರು ಗುಣಮಟ್ಟ ಶಿಕ್ಷಣ ನೀಡಬೇಕು ಜೊತೆಗೆ ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡಿದರೆ ಮಾತ್ರ ವಿದ್ಯಾರ್ಥಿಗಳು ನಿಮ್ಮ ಕಾಲೇಜುಗಳತ್ತ ಮುಖ ಮಾಡಲು ಸಾಧ್ಯ ಎಂದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ವಿದ್ಯಾರ್ಥಿಗಳು ದಿಕ್ಕನ್ನು ಬದಲಿಸುವ ಘಟ್ಟವೇ ಪಪೂ ಶಿಕ್ಷಣವಾಗಿದ್ದು ಈ ಹಂತದಲ್ಲಿ ವಿದ್ಯಾರ್ಥಿಗಳಾಗಲಿ ಮತ್ತು ಉಪನ್ಯಾಸಕರಾಗಲಿ ಮೈಮರೆಯಬಾರದು. ಕಾರಣ ದೇಶದಭಿವೃದ್ಧಿ ಹೊಂದಬೇಕಾದರೆ ಶಿಕ್ಷಣವೇ ಮೂಲಾಧಾರವಾಗಿದೆ ಜೊತೆಗೆ ದೇಶದ 70 ಕೋಟಿ ಜನ ಸಂಖ್ಯೆ ಹೋಂದಿರುವ ಮಹಿಳೆಯರು ಶಿಕ್ಷಣ ಪಡೆದಾಗ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ ಎಂದರು. ಬಿಎಜೆಎಸ್‌ಎಸ್ ಶಿಕ್ಷಣಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರಪ್ಪ, ಕರ್ನಾಟಕ ರಾಜ್ಯ ಅನುದಾನಿತ ಪಪೂ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಾ.ಹರೀಶ ಎನ್., ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪರಶುರಾಮ ಗಚ್ಚಿನಮನಿ, ಗೌರವಾಧ್ಯಕ್ಷ ಶಮಾಕಾಂತ ಭಟ್ ಮಾತನಾಡಿದರು. ಹಾವೇರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ, ಕೋಶಾಧ್ಯಕ್ಷ ಗುಡ್ಡಪ್ಪ ಎಂ, ಕೆ.ಯು. ಸೋಮಸಾಗರ, ಆಂಜನೇಯ ಹಳ್ಳಿ, ನಾಗು ನಾಯಕ, ಸರೋಜಿನಿ ಹಲಗೇರಿ, ಪ್ರಕಾಶೇಕ ಬೂತೆ, ಎಂ.ಎಸ್.ಪಾಟೀಲ, ನಾಗರಾಜ ನಿಂಗಪ್ಪನವರ, ಎಚ್. ಶಿವಾನಂದ ಸೇರಿ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಇದ್ದರು.