ಡೋಣಿ ಪ್ರವಾಹದ ನಿರಾಶ್ರೀತರಿಗೆ ಪರಿಹಾರ ಕೊಡಿ

| Published : Apr 06 2025, 01:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಡೋಣೂರ ಗ್ರಾಪಂ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ವಿಮೆ ಪರಿಹಾರ ಸಮರ್ಪಕವಾಗಿ ಸಮೀಕ್ಷೆ ನಡೆಸುವುದು, ಡೋಣಿ ಪ್ರವಾಹದ ಹಾನಿಗೊಳಗಾಗಿರುವ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಡೋಣೂರ ಗ್ರಾಪಂ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ವಿಮೆ ಪರಿಹಾರ ಸಮರ್ಪಕವಾಗಿ ಸಮೀಕ್ಷೆ ನಡೆಸುವುದು, ಡೋಣಿ ಪ್ರವಾಹದ ಹಾನಿಗೊಳಗಾಗಿರುವ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಸಂಘಟನೆಯ ಉತ್ತರ ಪ್ರಾಂತ್ಯದ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ಬಸವನಬಾಗೇವಾಡಿ ತಾಲೂಕಿನ ಡೋಣೂರು ಪಂಚಾಯತಿ ವ್ಯಾಪ್ತಿಯಲ್ಲಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ವಿಮೆ ಪರಿಹಾರ ಸರಿಯಾಗಿ ಸಮೀಕ್ಷೆ ಮಾಡದಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಅದರಲ್ಲಿ ಬೊಮ್ಮನಹಳ್ಳಿ ಗ್ರಾಮಕ್ಕೆ ಪ್ರತಿ ಎಕರೆಗೆ ₹ ೧೩೦೦ ರಿಂದ ೧೭೦೦ ವರೆಗೆ ಪರಿಹಾರ ನೀಡಿದ್ದಾರೆ. ಕೆಲವು ಕಡೆ ಹೆಚ್ಚಿಗೆ ನೀಡಿದ್ದಾರೆ. ಸರಿಯಾಗಿ ಬೆಳೆ ವೀಕ್ಷಣೆ ಮಾಡದೆ ಪರಿಹಾರ ನೀಡಿದ್ದಾರೆ. ಚೇತನ ಗುನ್ನಾಪುರ ಬೊಮ್ಮನಹಳ್ಳಿ ಸ.ನಂ.೧೬೫ ಸರ್ವೆ ಮಾಡಲಾಗಿದೆ. ಆದರೆ ಪರಿಹಾರ ₹ ೧೬೪೮ ವಿಮೆ ಪರಿಹಾರ ನೀಡಿಲ್ಲ. ಈ ತಾರತಮ್ಯ ಹೊಡೆದೊಡಿಸಿ ಸರಿಯಾದ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದರು. ಒಟ್ಟಾರೆ ಜಿಲ್ಲೆಯಾದ್ಯಂತ ವಿಮೆ ಪರಿಹಾರ ಸರಿಯಾಗಿ ಸರ್ವೆ ಮಾಡದೇ ನೀಡಿದ್ದಾರೆ. ಎಂದು ರೈತರು ದೂರುತ್ತಿರುವರು ಕಾರಣ ಇನ್ನೊಮ್ಮೆ ಪರಿಶೀಲಗೆ ವಿಮೆ ಕಂಪನಿಗೆ ಪರಿಹಾರ ಕೊಡಲು ತಿಳಿಸಿ ಎಂದು ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಈ ರೈತರ ಮನವಿಗೆ ಕ್ರಮಕೈಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕೋರಿದರು.ಸಚಿನ ಪಾಟೀಲ, ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಯಮನಪ್ಪ ಹಾದಿಮನಿ, ಆರ್.ಎಚ್. ಅಕ್ಕಾಗೋಳ, ಬಸವರಾಜ ಡೊಮನಾಳ, ಕೆ.ಟಿ.ಅಗಸರ, ಲಗಮಣ ತಳವಾರ, ಆರ್.ಎಂ.ವಾಲಿಕಾರ, ಪಿ.ಬಿ. ಗುನ್ನಾಪೂರ, ಶಂಕ್ರಪ್ಪ ಹಿಪ್ಪರಗಿ, ನಿಂಗು ತುಂಬಗಿ, ಭೀಮರಾವ ತಳವಾರ, ನಾನಾಗೌಡ ಮದರಗಿ, ಅಣ್ಣಪ್ಪ ಮಧಭಾವಿ, ಬಿ.ಬಿ. ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.