ಪ್ರಸಕ್ತ ಸಾಲಿನಲ್ಲಿ 6.13 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದ ಪಿಎಸ್‌ಎಸ್‌ಕೆ

| Published : Jan 09 2025, 12:47 AM IST

ಪ್ರಸಕ್ತ ಸಾಲಿನಲ್ಲಿ 6.13 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದ ಪಿಎಸ್‌ಎಸ್‌ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಹಂಗಾಮಿನಲ್ಲಿ ಕಬ್ಬು ನುರಿಸಲು 2024 ಆಗಸ್ಟ್ 1ರಂದು ಚಾಲನೆ ನೀಡಲಾಗಿತ್ತು. ಬರಗಾಲದ ನಡುವೆಯೂ ಸಹ 160 ದಿನಗಳ ಕಾಲ ಪಾಂಡವಪುರ ಹಾಗೂ ಶ್ರೀರಂಗಪಟ್ಟಣದ ಭಾಗದ ರೈತರ ಕಬ್ಬು ಖರೀದಿಸಿ ನುರಿಸುವ ಕೆಲಸ ಮಾಡಿದೆ. ಪ್ರಸ್ತುತ 6.13 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದಿದ್ದು, 2025ನೇ ಜ.7ರಂದು ಕಬ್ಬು ನುರಿಸುವ ಕಾರ್‍ಯವನ್ನು ಸ್ಥಗಿತಗೊಳಿಸಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದ ಎಂಆರ್‌ಎಸ್ ಸಮೂಹ ಸಂಸ್ಥೆಯೂ ಪ್ರಸ್ತುತ ಹಂಗಾಮಿನಲ್ಲಿ ರೈತರ 6.13 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿದೆ.

ಪ್ರಸ್ತುತ ಹಂಗಾಮಿನಲ್ಲಿ ಕಬ್ಬು ನುರಿಸಲು 2024 ಆಗಸ್ಟ್ 1ರಂದು ಚಾಲನೆ ನೀಡಲಾಗಿತ್ತು. ಬರಗಾಲದ ನಡುವೆಯೂ ಸಹ 160 ದಿನಗಳ ಕಾಲ ಪಾಂಡವಪುರ ಹಾಗೂ ಶ್ರೀರಂಗಪಟ್ಟಣದ ಭಾಗದ ರೈತರ ಕಬ್ಬು ಖರೀದಿಸಿ ನುರಿಸುವ ಕೆಲಸ ಮಾಡಿದೆ. ಪ್ರಸ್ತುತ 6.13 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದಿದ್ದು, 2025ನೇ ಜ.7ರಂದು ಕಬ್ಬು ನುರಿಸುವ ಕಾರ್‍ಯವನ್ನು ಸ್ಥಗಿತಗೊಳಿಸಿದೆ. ಅಲ್ಲೆ ಕಬ್ಬು ಸಾಗಾಣಿಕೆ ಮಾಡಿದ ಎಲ್ಲಾ ರೈತರಿಗೂ ಕಬ್ಬಿನ ಬಾಕಿ ಹಣ ಸಂದಾಯ ಮಾಡಲಾಗಿದೆ.

ಈ ಹಂಗಾಮಿನಲ್ಲಿ ಕಬ್ಬು ನುರಿಸಿ ಕಾರ್ಖಾನೆ ಸ್ಥಗಿತಗೊಳಿಸಿ ಕಾರ್ಖಾನೆ ಅತಿ ಹೆಚ್ಚು ಕಬ್ಬು ಸರಬರಾಜು ಮಾಡಿದ್ದಂತಹ ರೈತರು, ಕಬ್ಬು ಸಾಗಾಣಿಕೆ ಮಾಡಿದ ಎತ್ತಿನಗಾಡಿ, ಲಾರಿ, ಟ್ರ್ಯಾಕ್ಟರ್ ಮಾಲೀಕರು, ಕಬ್ಬು ಕಟಾವು ಮಾಡಿಸಿದ ಮೇಸ್ತ್ರಿಗಳಿಗೆ ತಲಾ ಇಬ್ಬರಂತೆ ಸನ್ಮಾನಿಸಿ ಕಾರ್ಖಾನೆ ಆವರಣದಲ್ಲಿ ಬಹುಮಾನ ವಿತರಣೆ ಮಾಡಿದರು.

ಎಂಆರ್‌ಎನ್ ಸಮೂಹ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ್ ನಿರಾಣಿ ಅವರು ರೈತರು ಹಾಗೂ ಕಬ್ಬು ಸರಬರಾಜು ಮಾಡಿದ ರೈತಾಪಿ ವರ್ಗದವರಿಗೂ, ಸಾಗಾಣಿಕೆದಾರರು, ಕಟಾವುದಾರರಿಗೆ ಅಭಿನಂದನೆ ಸಲ್ಲಿಸಿದರು.

ಈ ವೇ‍ಳೆ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಪಿಎಸ್‌ಎಸ್‌ಕೆ ಮಾಜಿ ಅಧ್ಯಕ್ಷ ಡಾ.ಮಾಯೀಗೌಡ, ಮಾಜಿ ಉಪಾಧ್ಯಕ್ಷ ಹರವು ಪ್ರಕಾಶ್, ಮಾಜಿ ನಿರ್ದೇಶಕ ಸಿ.ಸ್ವಾಮೀಗೌಡ, ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಸಂಜಿತ್ ಕುಮಾರ್ ಮತ್ತು ಕಬ್ಬು ವಿಭಾಗದ ಜನರಲ್ ಮ್ಯಾನೇಜರ್ ರವಿ ಹಾಗೂ ಕಾರ್ಖಾನೆ ಎಲ್ಲಾ ವಿಭಾಗದ ಮುಖ್ಯಸ್ಥರು, ದರಸಗುಪ್ಪೆ, ಕೆನ್ನಾಳು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ರೈತರು, ಎತ್ತಿನಗಾಡಿ, ಲಾರಿ/ಟ್ರ್ಯಾಕ್ಟರ್ ಚಾಲಕರು/ಮಾಲೀಕರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು.