ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ 2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ 24004 ವಿದ್ಯಾರ್ಥಿಗಳ ಪೈಕಿ 17481 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆ ಶೇ.72.83ರಷ್ಟು ಫಲಿತಾಂಶ ಪಡೆದು 15ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 4 ಸ್ಥಾನ ಕುಸಿತ ಕಂಡಿದೆ.2024ರಲ್ಲಿ ಶೇ.87.54ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ 11ನೇ ಸ್ಥಾನ ಪಡೆದುಕೊಂಡಿತ್ತು. ಪ್ರಸಕ್ತ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳು 24004 ಪೈಕಿ 17481, ಪುನರಾವರ್ತಿತ ವಿದ್ಯಾರ್ಥಿಗಳು 1184 ಪೈಕಿ 137, ಖಾಸಗಿ ವಿದ್ಯಾರ್ಥಿಗಳು 655 ಪೈಕಿ 132 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕಲಾ ವಿಭಾಗದಲ್ಲಿ 9339 ವಿದ್ಯಾರ್ಥಿಗಳ ಪೈಕಿ 5638 (ಶೇ.60.37) ತೇರ್ಗಡೆ ಹೊಂದಿದ್ದಾರೆ, ವಾಣಿಜ್ಯ ವಿಭಾಗದಲ್ಲಿ 5088 ಪೈಕಿ 3792 ವಿದ್ಯಾರ್ಥಿಗಳು (ಶೇ.74.53), ವಿಜ್ಞಾನ ವಿಭಾಗದಲ್ಲಿ 9577 ವಿದ್ಯಾರ್ಥಿಗಳ ಪೈಕಿ 8051 ವಿದ್ಯಾರ್ಥಿಗಳು (ಶೇ.84.07ರಷ್ಟು) ತೇರ್ಗಡೆ ಹೊಂದಿದ್ದಾರೆ.ಕಲಾ ವಿಭಾಗದಲ್ಲಿ ಶೇ.43.51ರಷ್ಟು ಯುವಕರು, ಶೇ.64.78ರಷ್ಟು ಯುವತಿಯರು ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಯುವಕರು ಶೇ.82.11 ರಷ್ಟು ತೇರ್ಗಡೆ ಹೊಂದಿದ್ದರೆ, ಮಹಿಳಾ ವಿದ್ಯಾರ್ಥಿಗಳು ಶೇ.82.91ರಷ್ಟುತೆರ್ಗಡೆ ಹೊಂದಿದ್ದಾರೆ.
ಕನ್ನಡ ಮಾಧ್ಯಮದಲ್ಲಿ 15049 ವಿದ್ಯಾರ್ಥಿಗಳ ಪೈಕಿ 8873 ಜನ ತೇರ್ಗಡೆ (ಶೇ.58.96) ಹೊಂದಿದ್ದರೆ, ಕಲಾ ವಿಭಾಗದಲ್ಲಿ ಶೇ.54.75, ವಾಣಿಜ್ಯ ವಿಭಾಗದಲ್ಲಿ ಶೇ.68.98ರಷ್ಟು ತೇರ್ಗಡೆ ಹೊಂದಿದ್ದಾರೆ. ನಗರಪ್ರದೇಶದ ವಿದ್ಯಾರ್ಥಿಗಳು ಶೇ.73.49ರಷ್ಟು ತೇರ್ಗಡೆ ಹೊಂದಿದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ.71.15ರಷ್ಟು ತೇರ್ಗಡೆ ಹೊಂದಿದ್ದಾರೆ.ಜಾತಿವಾರು ಫಲಿತಾಂಶ: ಪರಿಶಿಷ್ಟ ಜಾತಿ ಶೇ.60.15, ಪರಿಶಿಷ್ಟ ಪಂಗಡ ಶೇ.57.1, ಕೆಟಗರಿ-1 ಶೇ.67.9, 2ಎ ಶೇ.70.82, 2ಬಿ ಶೇ.61.44, 3ಎ ಶೇ.80.63, 3ಬಿ ಶೇ.77.4 ಹಾಗೂ ಸಾಮಾನ್ಯ ಶೇ.66.18 ರಷ್ಟು ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ಪರಿಶಿಷ್ಟ ಜಾತಿಯ ಶೇ.52.22, ಪರಿಶಿಷ್ಟ ಪಂಗಡದ ಶೇ.45.61, ಕೆಟಗೇರಿ-1 ಶೇ.56.26, 2ಎ ಶೇ.55.93, 2ಬಿ ಶೇ.53.78, 3ಎ ಶೇ.63.98, 3ಬಿ ಶೇ.63.62, ಇತರೆ ಶೇ.35.04 ಫಲಿತಾಂಶ ದಾಖಲಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರಿಶಿಷ್ಟ ಜಾತಿಯ ಶೇ.66.05, ಪರಿಶಿಷ್ಟ ಪಂಗಡ ಶೇ.67.29, ಕೆಟಗರಿ-1 ಶೇ.72.91, 2ಎ ಶೇ.73.44, 2ಬಿ ಶೇ.60.4, 3ಎ ಶೇ.75, 3ಬಿ ಶೇ.75.18 ಹಾಗೂ ಸಾಮಾನ್ಯ ಶೇ.66.67ರಷ್ಟು ಫಲಿತಾಂಶವಾಗಿದೆ. ವಿಜ್ಞಾನ ವಿಭಾಗದಲ್ಲಿ ಪರಿಶಿಷ್ಟ ಜಾತಿ ಶೇ.72.91, ಪರಿಶಿಷ್ಟ ಪಂಗಡ ಶೇ.76.68, ಕೆಟಗರಿ-1 ಶೇ.80.98, 2ಎ ಶೇ.85.27, 2ಬಿ ಶೇ.68.52, 3ಎ ಶೇ.90, 3ಬಿ ಶೇ.88.14 ಹಾಗೂ ಸಾಮಾನ್ಯ ಶೇ.85.64 ರಷ್ಟು ಫಲಿತಾಂಶವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.