ಶೃಂಗೇರಿ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ತಡೆಗಟ್ಟಲು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬೇಕು. ಅಪರಾಧ ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಶೃಂಗೇರಿ ಠಾಣೆ ಪೊಲೀಸ್ ಉಪನಿರೀಕ್ಷಕ ನಾಗರಾಜ್ ಹೇಳಿದರು.
ಶೃಂಗೇರಿ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ತಡೆಗಟ್ಟಲು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬೇಕು. ಅಪರಾಧ ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಶೃಂಗೇರಿ ಠಾಣೆ ಪೊಲೀಸ್ ಉಪನಿರೀಕ್ಷಕ ನಾಗರಾಜ್ ಹೇಳಿದರು.
ಪಟ್ಟಣದ ಸಂತೇಮಾರುಕಟ್ಟೆ ಬಳಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜನಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರು ಸಮಾಜದಲ್ಲಿ ಶಾಂತಿ ಕದಡುವ, ವಿದ್ವಂಸಕ ಕೃತ್ಯ ಗಳನ್ನು ಎಸಗುವವರ, ಅಪರಾಧ ಕೃತ್ಯ ಎಸಗುವವರ ಬಗ್ಗೆ ಮಾಹಿತಿಯಿದ್ದರೆ ಪೊಲೀಸರಿಗೆ ತಿಳಿಸಬೇಕು.ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸರ ಕರ್ತವ್ಯ ಎಂದು ಭಾವಿಸಬಾರದು. ಸಾರ್ವಜನಿಕರೂ ಪೊಲೀಸರ ಕರ್ತವ್ಯದಲ್ಲಿ ಸಹಕರಿಸಬೇಕು. ಅಪರಾಧ ಪ್ರಕರಣ ನಿಯಂತ್ರಿಸಿದರೆ ಸಮಾಜದಲ್ಲಿ ತನ್ನಿಂತಾನೆ ಶಾಂತಿ ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ. ಸಮಾಜ ವಿರೋಧಿ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು. ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದರು
ಅಪರಿಚಿತ ವ್ಯಕ್ತಿಗಳ ಓಡಾಟ, ಚಲನವಲಗಳ ಬಗ್ಗೆ ಮಾಹಿತಿ ನೀಡಬೇಕು. ಪಿಕ್ ಪಾಕೇಟ್ ಮಾಡುವವರು, ಸರಗಳ್ಳರ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಸಮಾಜದಲ್ಲಿ ಶಾಂತಿ ಕದಡುವವರ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಆಯಾ ಗ್ರಾಮಗಳಲ್ಲಿ ಬೀಟ್ ಪೋಲೀಸರ ಕರ್ತವ್ಯಕ್ಕೆ ಜನರು ಸಹಕರಿಸಬೇಕು. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯ ಎಂದರು. ಪೋಲೀಸ್ ಇಲಾಖೆ ಅಶೋಕ್, ಅಧಿಕಾರಿ, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.17 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ಸಂತೇಮಾರುಕಟ್ಟೆ ಬಳಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜನಜಾಗೃತಿ ಅಭಿಯಾನ ನಡೆಯಿತು.