ವೈಭವದಿಂದ ಸಾರ್ವಜನಿಕ ಮಹಾಗಣಪತಿ ವಿಸರ್ಜನೆ

| Published : Sep 17 2024, 01:00 AM IST

ಸಾರಾಂಶ

ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಸಾರ್ವಜನಿಕ ಮಹಾಗಣ ಪತಿಯ ವಿಸರ್ಜನಾ ಮಹೋತ್ಸವ ವೈಭವದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಚಂದ್ರಗುತ್ತಿ ಗ್ರಾಮದ ಸಾರ್ವಜನಿಕ ಗಜಾನನೋತ್ಸವ ಸಮಿತಿ ವತಿಯಿಂದ ಗ್ರಾಮದ ಗಾಂಧಿ ವೃತದಲ್ಲಿ 9 ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಮಹಾಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ರಾತ್ರಿ ವಿವಿಧ ವಾದ್ಯಗೋಷ್ಠಿಗಳೊಂದಿಗೆ ವೈಭವದಿಂದ ನಡೆಯಿತು.

ಸುಂದರವಾಗಿ ಅಲಂಕರಿಸಿದ ಟ್ರ್ಯಾಕ್ಟರ್ ಮೇಲೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಗ್ರಾಮದ ಸಿದ್ದಾಪುರ ರಸ್ತೆ, ರಥ ಬೀದಿ, ಬೋವಿ ಕಾಲೋನಿ, ಮಲ್ಲೇಕೇರಿ, ಹರೀಶಿ ರಸ್ತೆ ಹಾಗೂ ಮುಖ್ಯರಸ್ತೆ ಸೇರಿದಂತೆ ದಾರಿಯುದ್ದಕ್ಕೂ ಮೆರವಣಿಗೆ ನಡೆಸಲಾಯಿತು.

ಗ್ರಾಮದ ಸಾರ್ವಜನಿಕರು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ವಿಶೇಷವಾಗಿ ಗ್ರಾಮದ ಯುವಕರು ವಿವಿಧ ವೇಷ ಧರಿಸಿ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಗಣಪತಿ ಬಪ್ಪಾ ಮೋರಯ, ವಿಘ್ನೇಶ್ವರ ಮಹಾರಾಜ ಕೀ ಜೈ, ಎಂಬ ಜೈಕಾರ ಘೋಷಣೆಗಳು ಮೊಳಗಿದವು.

ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗುತ್ತು. ಗಾಂಧಿ ವೃತದಲ್ಲಿ ಮಹಾಗಣಪತಿಗೆ ಹರಕೆ ರೂಪದಲ್ಲಿ ಬಂದಂತಹ ವಸ್ತುಗಳನ್ನು ಹರಾಜು ಪ್ರಕ್ರಿಯೆ ನಡೆಸಲಾಯಿತು. ಗ್ರಾಮದ ಗಣಪತಿ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಸರ್ಜಿಸಲಾಯಿತು.