ಪೋಕ್ಸೋ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಅವಶ್ಯ: ಪಲ್ಲೇದ

| Published : Feb 23 2024, 01:51 AM IST

ಸಾರಾಂಶ

ಮಕ್ಕಳ ರಕ್ಷಣೆ ದೃಷ್ಟಿಯಿಂದ ಪೋಕ್ಸೋ ಕಾಯ್ದೆಯನ್ನು ಜಾರಿಗೆ ಮಾಡಲಾಗಿದ್ದು ಸಾರ್ವಜನಿಕರು ಮತ್ತು ಮಕ್ಕಳ ಪಾಲಕರು ಈ ಕಾಯ್ದೆಯ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಬಾಲಕಿಯರ ಮೇಲೆ ಅತ್ಯಾಚಾರ, ಅವರೊಂದಿಗೆ ಅಸಭ್ಯ ವರ್ತನೆಗಳು ಸೇರಿದಂತೆ ಅನೇಕ ದೌರ್ಜನ್ಯಗಳು ನಡೆಯುತ್ತಿದ್ದು ಅದನ್ನು ತಡೆಗಟ್ಟಲು ಪೋಕ್ಸೋ ಕಾಯ್ದೆಯನ್ನು ಜಾರಿಗೆ ಮಾಡಲಾಗಿದ್ದು ಸಾರ್ವಜನಿಕರು ಮತ್ತು ಮಕ್ಕಳ ಪಾಲಕರು ಈ ಕಾಯ್ದೆಯ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳಬೇಕು ಇದರಿಂದ ಮುಂದೆ ಆಗುವಂತಹ ದೌರ್ಜನ್ಯವನ್ನು ತಡೆಗಟ್ಟಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೊಷ ಪಲ್ಲೇದ ಹೇಳಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ, ಆರೊಗ್ಯ ಮತ್ತು ಪೊಲಿಸ್ ಇಲಾಖೆ ಸಹಯೊಗದಲ್ಲಿ ಭೆಟಿ ಭಚಾವೊ ಭೇಟಿ ಪಡಾವೊ ಯೊಜನೆಯಡಿ ಪೋಕ್ಸೋ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೊಷ್ ಪಲ್ಲೇದ ಉದ್ಘಾಟಿಸಿ ಮಾತನಾಡಿದ ಅವರು ಮುಗ್ದ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಅವರ ಮೇಲೆ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಇದನ್ನು ತಡೆಗಟ್ಟವ ಮತ್ತು ಅಪರಾಧ ಎಸಗಿದವರನ್ನು ಶಿಕ್ಷೆಗೆ ಗುರಿಪಡಿಸುವ ಉದ್ದೇಶದಿಂದ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ಬಗ್ಗೆ ಸಾರ್ವಜನಿಕರು ಸಂತ್ರಸ್ಥರು ಸರಿಯಾಗಿ ಅರಿತುಕೊಂಡು ನಿರ್ಭಯವಾಗಿ ಪ್ರಕರಣವನ್ನು ದಾಖಲಿಸಬೇಕು ಎಂದರು.

ಸಿವಿಲ್ ನ್ಯಾಯಾಧೀಶ ಸಂತೊಷಕುಮಾರ ದೈವಜ್ಞ ಮಾತನಾಡಿ, ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳ ಬಗ್ಗೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಪಾಲಕರು ಮುನ್ನೆಚ್ಚರಿಕೆ ವಹಿಸಿದರೆ ಇಂತಹ ಪ್ರಕರಣಗಳು ತಡೆಗಟ್ಟಲು ಸಾಧ್ಯ ಎಂದರು ಹೇಳಿದರು.

ನ್ಯಾಯವಾದಿ ಎಸ್.ಪಿ. ಸಾತನೂರಕರ್ ಪೋಕ್ಸೋ ಕಾಯ್ದೆ ಕುರಿತು ಹಾಗೂ ಸವಿತಾ ಪಾಟೀಲ್ ಸಾಮಾನ್ಯ ಕಾನೂನು ಅರಿವು ನೆರವು ಕುರಿತು ಉಪನ್ಯಾಸ ಮಾಡಿದರು.

ಉಪ ತಹಸೀಲ್ದಾರ ರಾಜಕುಮಾರ, ಸರ್ಕಾರಿ ಸಹಾಯಕ ಅಭಿಯೊಜಕಿ ಅಂಜನಾದೇವಿ, ಶಿಶು ಅಭಿವೃದ್ದಿ ಯೊಜನಾಧಿಕಾರಿ ಆರತಿ ತುಪ್ಪದ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗರಾಜ ಕಡಬೂರ, ಎ.ಎಸ್‌ಐ ಬಲವಂತರೆಡ್ಡಿ ವೇದಿಕೆಯಲ್ಲಿದ್ದರು.