ಸಾರಾಂಶ
ತರೀಕೆರೆ, ಶಾಲಾ ಹಬ್ಬಗಳಲ್ಲಿ ಸಾರ್ವಜನಿಕರ ಸಹಬಾಗಿತ್ವ ಮಾದರಿಯಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪುತ್ರಿ ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್ ಹೇಳಿದ್ದಾರೆ.
ಕರಕುಚ್ಚಿ ಗ್ರಾಮದಲ್ಲಿ ಬಾವಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಶಾಲಾ ಹಬ್ಬಗಳಲ್ಲಿ ಸಾರ್ವಜನಿಕರ ಸಹಬಾಗಿತ್ವ ಮಾದರಿಯಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪುತ್ರಿ ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್ ಹೇಳಿದ್ದಾರೆ.
ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದ ಕರಕುಚ್ಚಿ ಬಾವಿಕೆರೆ ಕ್ಲಸ್ಟರ್ ಮಟ್ಟದ ಶಾಲೆಗಳ ಸಾಂಸ್ಕೃತಿಕ ಹಬ್ಬ ಪ್ರತಿಭಾ ಕಾರಂಜಿ ಉದ್ಘಾಟನೆಯಲ್ಲಿ ಮಾತನಾಡಿದರು. ಗ್ರಾಮದ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ಭಾಗವಹಿಸಿ ಪ್ರತಿಭಾ ಕಾರಂಜಿಗೆ ಮತ್ತಷ್ಟು ಮೆರಗು ತಂದಿದ್ದು ಶಾಲಾ ಹಬ್ಬಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಮಾದರಿಯಾಗಿದೆ ಎಂದು ಹೇಳಿದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅನಂತಪ್ಪ ಮಾತನಾಡಿ ಮಕ್ಕಳ ದಿನಾಚರಣೆಯೊಂದಿಗೆ ಪ್ರತಿಭಾ ಕಾರಂಜಿಯನ್ನು ಈ ಶಾಲೆಯಲ್ಲಿ ಬಹುಸಂಭ್ರಮದಿಂದ ನೆರವೇರಿದ್ದು ಬಹಳ ವಿಶೇಷವಾಗಿದೆ ಎಂದು ಹೇಳಿದರು.
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರವಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಸಂಘಸಂಸ್ಥೆಗಳು ಪ್ರತಿಭಾ ಕಾರಂಜಿ ಸಹಭಾಗಿತ್ವ ವಹಿಸಿದರೆ ಶಾಲಾ ಶಿಕ್ಷಕರು ಮತ್ತು ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ದೊರೆಯುತ್ತದೆ ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತಾ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಡಿ.ಎಮ್.ಸಿ.. ಅಧ್ಯಕ್ಷೆ ಪುಷ್ಪಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾಕಾರಂಜಿಯಲ್ಲಿ ಆಶುಭಾಷಣ ಸ್ಪರ್ಧೆ, ಮಿಮಿಕ್ರಿ, ಚಿತ್ರಕಲೆ, ಕ್ಲೇ ಮಾಡಲಿಂಗ್, ಭಕ್ತಿಗೀತೆ, ಕಂಠಪಾಠ,ಧಾರ್ಮಿಕ ಪಠಣ, ಅಭಿನಯಗೀತೆ, ಛದ್ಮವೇಷ ಮುಂತಾದ ಸ್ಪರ್ಧೆಗಳು ನಡೆದವು.ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಅರುಣ್ ಕುಮಾರ್ , ಗ್ರಾಪಂ ಸದಸ್ಯರಾದ ರೇಖಾ ನವೀನ್, ಮಹೇಶ್, ಪ್ರಕಾಶ್ ಪ್ರಮುಖರಾದ ವಿಜಯಾಬಾಯಿ , ಠಾಕ್ರನಾಯ್ಕ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಕುಮುದಾ ಕೆ.ಬಿ, ರಘು, ಶಾಲೆ ಮುಖ್ಟ ಶಿಕ್ಷಕ ದೇವೇಂದ್ರ ನಾಯ್ಕ, ಸಹ ಶಿಕ್ಷಕಿ ಎಂ.ಗೀತಾ, ಗುರುಶೀಲಾ ಮತ್ತಿತರರು ಭಾಗವಹಿಸಿದ್ದರು.21ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ಕರಕುಚ್ಚಿ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪುತ್ರಿ ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷೆ ಸುಜಾತಾ ರಮೇಶ್, ಎಸ್. ಡಿ. ಎಮ್. ಸಿ. ಅಧ್ಯಕ್ಷೆ ಪುಷ್ಪಾ ಮತ್ತಿತರರು ಇದ್ದರು.