ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ತಂದೆ ಆರ್. ಧ್ರುವನಾರಾಯಣ ಅವರ ಜನಸೇವಾ ವೈಖರಿಯನ್ನು ಮೈಗೂಡಿಸಿಕೊಳ್ಳುತ್ತಲೇ ರಾಜಕಾರಣದಲ್ಲಿ ಅಂಬೆಗಾಲು ಇಡಲು ಮುಂದಾದ ಶಾಸಕ ದರ್ಶನ್ ಧ್ರುವನಾರಾಯಣ್ ಶಾಸಕರಾಗಿ ವರ್ಷ ತುಂಬುವ ವೇಳೆಗೆ ಜನ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ನಂಜನಗೂಡು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕನಸನ್ನು ಹೊತ್ತು. ಅಭಿವೃದ್ದಿ ಕಾರ್ಯಗಳಲ್ಲಿ ಮಗ್ನರಾಗಿ ತಂದೆಗೆ ತಕ್ಕ ಮಗ ಎನಿಸಿದ್ದಾರೆ.90 ಕೋಟಿ ರು. ವೆಚ್ಚದಲ್ಲಿ ದೇವನೂರು ಏತ ನೀರಾವರಿ ಯೋಜನೆಗೆ ಅನುದಾನ ತಂದಿದ್ದು, ಕೌಲಂದೆ ಭಾಗದ ಕೆರೆಗಳನ್ನು ತುಂಬಿಸಿ ಬರಡು ಭೂಮಿಯನ್ನು ಹಸಿರನ್ನಾಗಿಸಲು ಮುಂದಾಗಿದ್ದಾರೆ. ಅಲ್ಲದೆ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದ ಪುನರುತ್ಥಾನಕ್ಕಾಗಿ 43 ಕೋಟಿ, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಾಮಾನ್ಯ ಜನರ ಬೀದಿಗಳ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆಂದು 20 ಕೋಟಿ ಅನುದಾನ ತಂದಿದ್ದಾರೆ. 2006ರಲ್ಲಿ ಆರಂಭವಾಗಿ 2 ದಶಕ ಕಳೆದರೂ ಸಹ ಪೂರ್ಣಗೊಳ್ಳದ ಒಳಚರಂಡಿ ಯೋಜನೆ ನಂಜನಗೂಡು ಪಟ್ಟಣದ ಚರಂಡಿ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಮತ್ತೇ 20 ಕೋಟಿ ತಂದು ಒಳಚರಂಡಿಗೆ ಮುಕ್ತಿ ಕೊಡಿಸುವ ಸಂಕಲ್ಪ ತೋರಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮಕಾಡಂಚಿನ ಜನತೆಯ ಸಂಕಷ್ಟಗಳನ್ನು ಅರಿಯಲು ರಾತ್ರಿ ವೇಳೆಯಲ್ಲಿ ಕಾಡಂಚಿನ ಗ್ರಾಮಗಳಿಗೆ ತೆರಳಿದ ಶಾಸಕರು ಕಾಡು ಪ್ರಾಣಿಗಳ ಹಾವಳಿಯಿಂದ ಜನತೆಯನ್ನು ರಕ್ಷಿಸಲು ಸಂಕಲ್ಪ ಮಾಡಿ ಕಾಡು ಪ್ರಾಣಿ ಹಾವಳಿ ತಡೆಗೆ ಕಾಡಿನುದ್ದಕ್ಕೂ ರೇಲೈ ಕಂಬಿ ಅಳವಡಿಸುವುದೊಂದೆ ಪರಿಹಾರ ಎಂದು ಅರ್ಥೈಸಿಕೊಂಡು ಅದಕ್ಕಾಗಿ ಸರ್ಕಾರದಿಂದ 11 ಕೋಟಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಮೆಸ್ ನಿರ್ಮಿಸುವ ಕಾಮಗಾರಿ ಆರಂಭಿಸಿದ್ದಾರೆ.
ಅಲ್ಲದೆ ತಾಲೂಕಿನಾದ್ಯಂತ ವಿವಿಧ ಸಮುದಾಯ ಭವನ ನಿರ್ಮಾಣಕ್ಕೆಂದು 2.5 ಕೋಟಿ ಅನುದಾನ ತಂದಿದ್ದಾರೆ. ಜೊತೆಗೆ ಕಾಡಂಚಿನ ಗ್ರಾಮವಾದ ಕಂದೆಗಾಲದಲ್ಲಿ ರೈತರ ಅನುಕೂಲಕ್ಕಾಗಿ ಹೊಸದಾಗಿ 2 ಕೋಟಿ ವೆಚ್ಚದಲ್ಲಿ ಶಾಸಕ ನಿಧಿಯಿಂದ ಪಶು ಅಸ್ಪತ್ರೆ ಆರಂಭಿಸಿದ್ದಾರೆ. ಸಣ್ಣ ನಿರಾವರಿ ಇಲಾಖೆಯಿಂದ ಹುಲ್ಲಹಳ್ಳಿ ಮತ್ತು ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ತಡೆಗೋಡೆ ಮತ್ತು ಸೋಪಾನ ಕಟ್ಟೆ ನಿರ್ಮಾಣಕ್ಕೆ 5 ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದಾರೆ. ಜೊತೆಗೆ ಒಂದೇ ವರ್ಷದಲ್ಲಿ ತಾಲೂಕಿನ ವಳಗೆರೆ, ಎಲಚಗೆರೆ, ಯಡಿಯಾಲ, ಹುಲ್ಲಹಳ್ಳಿ ಗ್ರಾಮಗಳಲ್ಲಿ ವಿದ್ಯತ್ ಸಬ್ ಸ್ಟೇಷನ್ ತಂದ ಕೀರ್ತಿ ಇವರದ್ದಾಗಿದೆ.ಶಿಕ್ಷಣಕ್ಕೆ ಒತ್ತು: ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಆದಿವಾಸಿ ಜನರ ಶಿಕ್ಷಣಕ್ಕೆ ಅನುಕೂಲವಾಗಲೆಂದು ತಾಲೂಕಿನ ವೆಂಕಟಗಿರಿ ಕಾಲೋನಿ, ನಾಗಣಾಪುರ ಕಾಲೋನಿ ತಲಾ 3.5 ಕೋಟಿ ಒಟ್ಟು 7 ಕೋಟಿ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಬುಡಕಟ್ಟು ಆಶ್ರಮ ವಸತಿ ಶಾಲೆ ನಿರ್ಮಾಣಕ್ಕೆ ಹಸಿರು ನಿಸಾನೆ ತೋರಿದ್ದಾರೆ.
ತಂದೆ ಆರ್. ಧ್ರುವನಾರಾಯಣ ತಮ್ಮ ಜನ್ಮ ದಿನವನ್ನು ಹಾಡಿಯ ಜನರೊಂದಿಗೆ ಕಳೆಯುತ್ತಿದ್ದಿದ್ದನ್ನು ಅರಿತ ಅವರು, ತಾವು ಸಹ ಅದೇ ಹಾದಿಯಲ್ಲಿ ಮುನ್ನಡೆಯುತ್ತ ಹಾಡಿಯ ಜನರಿಗೆ ಶಾಲು ಕಂಬಳಿ ನೀಡಿ ಅವರೊಂದಿಗೆ ತಮ್ಮ ಜನ್ಮ ದಿನವನ್ನು ಕಳೆದಿದ್ದು, ನಿಜವಾಗಿ ಉಳಿದ ರಾಜಕಾರಣಿಗಳಿಗೆ ಮಾದರಿಯಾಗುವಂತಹದ್ದಾಗಿದೆ.ರಾಜಕೀಯದ ಅನುಭವವಿಲ್ಲದೆಯೇ ತಂದೆಯ ಹಾದಿಯಲ್ಲಿ ಸಾಗಿ ಒಂದೇ ವರ್ಷದಲ್ಲಿ ಅನುಭವಿ ರಾಜಕಾರಣಿತಯಂತೆ ಕ್ಷೇತ್ರದ ಅಭಿವೃದ್ದಿಯಲ್ಲಿ ತೊಡಗಿರುವುದಲ್ಲದೆ. ಸದನದಲ್ಲೂ ಕೂಡ ಸಕ್ರೀಯವಾಗಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಜನಸೇವೆಯಲ್ಲಿ ತೊಡಗಿ ತಂದೆಗೆ ತಕ್ಕ ಎನಿಸಿಕೊಂಡಿದ್ದಾರೆ.