ಕನ್ನಡಪ್ರಭವಾರ್ತೆ ಮಧುಗಿರಿ

ನಮ್ಮ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ,ಜನ ಸೇವೆಯೇ ಜನಾರ್ಧನ ಸೇವೆ ಎಂಬುದು ನಮ್ಮ ಕುಟುಂಬದ ಗುರಿ ಅದರಂತೆ ತಂದೆ ಶಾಸಕ ಕೆ.ಎನ್.ರಾಜಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ಪ್ರತಿ ವರ್ಷ ಮಧುಗಿರಿಯಲ್ಲಿ ಉದ್ಯೋಗ ಮೇಳ ನಡೆಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಆರ್‌.ರಾಜೇಂದ್ರ ಭರವಸೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಉದ್ಯೋಗ ಮೇಳ ನನ್ನ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, 1700 ನಿರುದ್ಯೋಗಿಗಳು ನೊಂದಣಿಯಾಗಿದ್ದು, ಈ ಪೈಕಿ 560 ನಿರುದ್ಯೋಗಿಗಳಿಗೆ 98 ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿದ್ದು, ಸ್ಥಳದಲ್ಲೇ ಆದೇಶ ಪತ್ರ ವಿತರಿಸಿದ್ದೇವೆ ಎಂದರು.

ಮುಂದಿನ ಸಲ ಕನಿಷ್ಠ 300 ಕಂಪನಿ ಕರೆಸಿ ಕನಿಷ್ಠ 1500 ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ ಅವರು, ಈ ಸಮಾಜಮುಖಿ ಕಾರ್ಯಕ್ಕೆ ನನ್ನ ತಂದೆ ಪ್ರೇರಣೆ, ಇದಕ್ಕೆ ನನ್ನ ಸ್ನೇಹಿತರ ಜೊತೆಗೂಡಿ ಡಿಗ್ರಿ ಕಾಲೇಜುಗಳ ಪ್ರಾಂಶುಪಾಲರು , ಉಪನ್ಯಾಕರು ಸೇರಿ ಸುಮಾರು 2 ತಿಂಗಳ ಕಾಲ ಶ್ರಮಿಸಿ ಈ ಕಾರ್ಯಕ್ರಮ ನಡೆಸಿದ್ದೇವೆ. ನಮ್ಮ ಮನೆಗೆ ಬರುವ ಸಾರ್ವಜನಿಕರು ತಮ್ಮ ಮಕ್ಕಳಿಗೆ ಕೆಲಸ ಮೊಡಿಸುವಂತೆ ಕೇಳುತ್ತಿದ್ದರು. ಇದನ್ನು ಮನಗಂಡು ನಮ್ಮ ಕ್ಷೇತ್ರದ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗ ಕೊಡಿಸುವ ಈ ಕಾರ್ಯಕ್ರಮ ನಡೆಸಿದ್ದು ಸಹಕರಿಸಿದ ಎಲ್ಲರಿಗೂ ಧನ್ಯಾವಾದ ಹೇಳಿದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಬಯಲು ಸೀಮೆಯಲ್ಲಿ ಉದ್ಯೋಗ ಮೇಳ ನಡೆಸುವುದು ಸುಲಭವಲ್ಲ, ಅದನ್ನು ರಾಜೇಂದ್ರ ಅವರ ತಂಡ ಸಾಧಿಸಿ 98 ಕಂಪನಿಗಳನ್ನು ಇಲ್ಲಿಗೆ ಕರೆಸಿ 560 ಮಕ್ಕಳಿಗೆ ಉದ್ಯೋಗ ದೊರಕಿಸಿರುವುದು ಪ್ರಜೆಗಳಿಂದ ಪ್ರಜೆಗಳಿಗಾಗಿ ಅಧಿಕಾರಿ ನಡೆಸುವುದೆಂದರೆ ಇದೆ ಎಂದರು. ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮುನನೀಂದ್ರ ಕುಮಾರ್ ಮಾತನಾಡಿ,ಒಂದೇ ವೇದಿಕೆಯಲ್ಲಿ ಎಲ್ಲ ವರ್ಗದ 560 ಮಕ್ಕಳಿಗೆ ಉದ್ಯೋಗ ನೀಡಿದ್ದು,ಇದಕ್ಕೆ ರಾಜೇಂದ್ರ ಮುಖ್ಯ ಕಾರಣ ಎಂದರು.


ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು,ಲಾಲಪೇಟೆ ಮಂಜುನಾಥ್,ಡಾ.ಎಂ.ಜಿ.ಶ್ರೀನಿವಾಸಮೂರ್ತಿ ,ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಕಾಲೇಜು ಪ್ರಾಂಶುಪಾಲ ಪ್ರೊ.ಕುಮಾರ್, ಸಿಂಡಿಕೆಟ್ ಸದಸ್ಯ ಶಿವಣ್ಣ,ಕಾರ್ಯಕ್ರಮದ ಅಯೋಜಕ ಹರ್ಷ ಕುರುಬರಹಳ್ಳಿ,ಮಂಜುನಾಥ್,ವಿರೇಶ್,ಉಪನ್ಯಾಸಕ ಮಹಾಲಿಂಗೇಶ್ ಇತರರಿದ್ದರು.ಕೋಟ್‌

ಶಾಸಕ ಕೆ.ಎನ್.ರಾಜಣ್ಣ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವರು.ಮುಂದಿನ ವರ್ಷ ಈ ಭಾಗದ ಬಡ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡಲು ತರಬೇತಿ ಕೇಂದ್ರ ಸ್ಥಾಪಿಸಲು ಮುಂದಾಗಿದ್ದಾರೆ. ಅವರ ಈ ಕನಸಿಗೆ ನಾವು ಬ್ದಧ,ನಾವು ಆದಷ್ಟು ಬೇಗ ತರಬೇತಿ ಕೇಂದ್ರ ಪ್ರಾರಂಭಿಸುತ್ತೇವೆ. ಈ ತರಗತಿಗೆ ಬೇರೆ ಕಡೆ 1 ಲಕ್ಷ ರು ಹಣ ಖರ್ಚಾಗಲಿದ್ದು, ಊಟ,ತರಬೇತಿ ಎಲ್ಲವನ್ನು ಉಚಿತವಾಗಿ ನೀಡಿ ಈ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಲಿದೆ. -ಎಂಎಲ್ಸಿ ಆರ್. ರಾಜೇಂದ್ರ.