ಆಡಳಿತ ವ್ಯವಸ್ಥೆಯನ್ನು ಸಾರ್ವಜನಿಕರ ಮನೆಬಾಗಿಲಿಗೆ ಕೊಂಡೊಯ್ಯುವ ಹಾಗೂ ಸ್ಥಳದಲ್ಲೇ ಕುಂದುಕೊರತೆಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಸರ್ಕಾರದ ಪ್ರಜಾಸೇವಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಪ್ರಜಾಸೇವಾ ಆಂದೋಲನಕ್ಕೆ ಶನಿವಾರ ಶಿಗ್ಗಾಂವಿಯಲ್ಲಿ ಚಾಲನೆ ನೀಡಲಾಗುವುದು ಎಂದು ಶಾಸಕ ಯಾಸೀರಖಾನ ಪಠಾಣ ಹೇಳಿದರು.

ಗುತ್ತಲ: ಕಬ್ಬಿನ ದರ ನಿಗದಿ ಮಾಡದೇ ಕಾರ್ಖಾನೆ ಪ್ರಾರಂಭಿಸಲು ಅವಕಾಶ ಕೊಡಬಾರದು ಮತ್ತು ರೈತರು ಯಾವುದೇ ಕಾರ್ಖಾನೆಯವರು ಕಬ್ಬು ಕಟಾವು ಮಾಡಲು ಬ್ಯಾಚ್ ಹಾಕಿದರೆ ಕಬ್ಬನ್ನು ಕಟಾವು ಮಾಡಲು ಅವಕಾಶ ಕೊಡದಂತೆ ಒಟ್ಟಿನಿಂದ ಇದ್ದರೇ ಮಾತ್ರ ರೈತರಿಗೆ ನ್ಯಾಯಯುತ ಬೆಲೆ ಸಿಗಲು ಸಾಧ್ಯ ಎಂದು ಜಿಲ್ಲಾ ಕಬ್ಬು ಬೆಳೆಗಾರರ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕರಡ್ಡಿ ಮರ್ಚರಡ್ಡೇರ ರೈತರಿಗೆ ಕರೆ ನೀಡಿದರು.

ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕಬ್ಬು ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ಒಗ್ಗಟ್ಟಿನಿಂದ ಇರಬೇಕು. ನಮ್ಮ ಒಗ್ಗಟ್ಟೆ ನಮಗೆ ಬಲ ನೀಡುವುದು. ರೈತರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತದೆ ಎಂದ ಅಶೋಕರಡ್ಡಿ, ಕಬ್ಬು ಬೆಳೆಗಾರರು ಪ್ರತಿ ವರ್ಷ ಹಾನಿ ಅನುಭವಿಸುತ್ತಲೇ ಇದ್ದಾರೆ. ಆದರೆ ಕಾರ್ಖಾನೆಯವರು ಲಾಭ ಮಾಡಿಕೊಳ್ಳುತ್ತಲೇ ಇದ್ದಾರೆ. ಕಬ್ಬಿನ ದರ ನಿಗಧಿಯಾಗದ ಹೊರತು ಯಾವ ರೈತರು ಸಹ ಕಬ್ಬನ್ನು ಕಟಾವು ಮಾಡದಂತೆ ಎಚ್ಚರಿಕೆ ವಹಿಸಬೇಕೆಂದರು.

ಸಭೆಯಲ್ಲಿ ಕಬ್ಬಿನ ದರ ನಿಗದಿ, ಕಬ್ಬಿನ ರಿಕವರಿ ಚೆಕ್ ಮಾಡುವ ಲ್ಯಾಬ್ ಸ್ಥಾಪನೆ, ತುರ್ತಾಗಿ ಅಗ್ನಿಶಾಮಕ ಠಾಣೆ ಸ್ಥಾಪನೆ ಹಾಗೂ ಸಕ್ಕರೆ ಕಾರ್ಖಾನೆ ಲೋಪದೋಷಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

ಸಂಗೂರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ಮುತ್ತಣ ಯಲಿಗಾರ, ಗೌಡಪ್ಪಗೌಡ ಪಾಟೀಲ, ಸಿ. ಸಿ. ತೋಟಗೇರ, ಸುರೇಶ ಸಜ್ಜನವರ, ದಿಳ್ಳೆಪ್ಪ ಕುದರ‍್ಯಾಳ, ಬಸಲಿಂಗಪ್ಪ ನರಗುಂದ ಸೇರಿದಂತೆ ಅನೇಕರು ಮಾತನಾಡಿದರು.

ಸಭೆಯಲ್ಲಿ 1) 2026-27 ನೇ ಸಾಲಿನ ಕಬ್ಬಿನ ದರ ನಿಗದಿ ಮಾಡದೇ ಕಾರ್ಖಾನೆಯನ್ನು ಪ್ರಾರಂಭಿಸಲು ಅವಕಾಶ ಕೊಡಬಾರದು. ಮತ್ತು ನವ್ಹಂಬರ್ 1ನೇ ತಾರೀಖಿನ ಒಳಗಾಗಿ ಕಾರ್ಖಾನೆಯನ್ನು ಪ್ರಾರಂಭಿಸದಂತೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುವುದು. 2) ಕಬ್ಬಿನ ರಿಕವರಿ ಚೆಕ್ ಮಾಡುವ ಲ್ಯಾಬ್‌ನ್ನು ಕೆಎಸ್‌ಎಸ್‌ಕೆ ಸಂಗೂರ ಕಾರ್ಖಾನೆಯ ಆವರಣದಲ್ಲಿ ತೆರೆಯಲು ಮತ್ತು ವೇಬ್ರೀಡ್ಜ್ ನ್ನು ಅಳವಡಿಸಲು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುವದು. 3) ಕಬ್ಬನ್ನು ಯಂತ್ರದ ಕಟಾವ ಮುಖಾಂತರ ಮಾಡಿದಾಗ 8% ವೇಸ್ಟೇಜ್ ಕಡಿತಗೊಳಿಸುವುದನ್ನು ಕೆಲವು ಕಾರ್ಖಾನೆಗಳು 6% ಗೆ ಕಟಿಂಗ್ ಮಾಡುತ್ತಿದ್ದು, ಅದು ರೈತರಿಗೆ ತುಂಬಾ ಹೊರೆಯಾಗುತ್ತದೆ ಕಾರಣ ಸದರಿ ವೇಸ್ಟೇಜ್ ಕಡಿತವನ್ನು ಇನ್ನೂ 2% ರಂತೆ ಕಡಿಮೆ ಮಾಡಲು ವಿನಂತಿಸಿ ಮನವಿ ಕೊಡುವುದು. 4) ಕಾರ್ಖಾನೆಗಳು ಕಬ್ಬು ಕಟಾವು ಮಾಡಲು ಬ್ಯಾಚ್‌ಗಳನ್ನು ಹಾಕಿದಾಗ ಅವರಿಂದ ಕಾರ್ಖಾನೆಗಳು ಕೊಡುವ ರಕುಮುನ ಮೇಲೆ ಮತ್ತೆ ರೈತರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಿದ್ದು ಆ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳಲು ಕಾರ್ಖಾನೆಯವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುವದು. 5) ಕಬ್ಬಿಗೂ ಸಹ ಬೆಳೆವಿಮೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಆಗ್ರಹಿಸುವುದು ಎಂದು 5 ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಜಯಣ್ಣ ಮಾಗಡಿ, ಫಕ್ಕಿರಡ್ಡಿ ಯತ್ನಳ್ಳಿ, ಕೆ.ಬಿ. ಛಪ್ಪರದ, ವೀರಯ್ಯ ಹಿರೇಮಠ, ಪ್ರಭು ಹಾವನೂರ, ದ್ಯಾಮನಗೌಡ ಹೊನ್ನನಗೌಡ್ರ, ಮುತ್ತಪ್ಪ ಸಣ್ಣಿಂಗಮ್ಮನವರ, ಮಹೇಶ ಛಪ್ಪರದ, ನಾಗನಗೌಡ ರಾಮನಗೌಡ್ರ, ಹಾಲಪ್ಪ ಮುದ್ದಿ, ಮೋಹನರಡ್ಡಿ ಜಟ್ಟೆಪ್ಪನವರ, ಶಿವರಡ್ಡಿ ಮಾಡಳ್ಳಿ, ಡಿ.ಎಮ್ ಅಣ್ಣಿಗೇರಿ, ವಿಜಯರಡ್ಡಿ ಭರಮರಡ್ಡೇರ, ಶಂಭುಲಿಂಗ ಅಣ್ಣಿಗೇರಿ, ವೆಂಕಟೇಶ ಶೇಷನಗೌಡ್ರ, ಹೊನ್ನಪ್ಪ ವಾಲಿಕಾರ, ಜಯಪ್ಪಗೌಡ ಹುಳ್ಯಾಳ, ಮಹೇಶ ಮಂಜಲಾಪುರ, ಬಿ.ಎನ್. ಕನವಳ್ಳಿ, ಶೇಖಣ್ಣ ಪೂಜಾರ, ಚನ್ನಬಸಪ್ಪ ಕೋಡಿಹಳ್ಳಿ, ಮಾಲತೇಶ ಬನ್ನಿಮಟ್ಟಿ, ಅಲ್ತಾಫ ಶಿರಹಟ್ಟಿ, ಸುಭಾಷ್ ಕೆಂಗನಿಂಗಪ್ಪನವರ, ಅಶೋಕ ಬ್ಯಾಡಗಿ, ಲಕ್ಷ್ಮಣ ಯಲಿಗಾರ, ಮಾಲತೇಶ ತೋಟಗೇರ, ವಿಕಾಸ ಹಿರೇಮಠ, ರಾಜಣ್ಣ ಬೆನ್ನೂರ, ಚನಬಸಪ್ಪ ಶಿತಾಳ, ಬಸವರಾಜ ಬ್ಯಾಲಹುಣಸಿ, ವೀರಭದ್ರಪ್ಪ ಚಕ್ರಸಾಲಿ, ನಿಂಗಪ್ಪ ಕಂಬಳಿ, ಮಂಜುನಾಥ ದೊಡ್ಡಮನಿ, ವಿಜಯಚಂದ್ರಪ್ಪ ಜ್ಯೋತಿ, ವೆಂಕಣ್ಣ ಸಾಹುಕಾರ, ಸುನೀಲ ಸಾಹುಕಾರ ಸೇರಿದಂತೆ ಗುತ್ತಲ ಹೋಬಳಿಯ ವಿವಿಧ ಗ್ರಾಮಗಳ ಸಾವಿರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.