ಸಾರ್ವಜನಿಕರು ಬೇಸಿಗೆಯಲ್ಲಿ ನೀರು ಮಿತವಾಗಿ ಬಳಸಿ-ಶಾಸಕ ಸಿ.ಸಿ. ಪಾಟೀಲ

| Published : Apr 16 2025, 12:46 AM IST

ಸಾರ್ವಜನಿಕರು ಬೇಸಿಗೆಯಲ್ಲಿ ನೀರು ಮಿತವಾಗಿ ಬಳಸಿ-ಶಾಸಕ ಸಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ಪಟ್ಟಣದ ಜನತೆ ಈ ಬೇಸಿಗೆಯ ಸಮಯದಲ್ಲಿ ನಲ್ಲಿಗಳ ನೀರನ್ನು ಸಾರ್ವಜನಿಕರು ಮಿತವಾಗಿ ಬಳಕೆ ಮಾಡಬೇಕೆಂದು ಶಾಸಕ ಸಿ.ಸಿ. ಪಾಟೀಲ ಮನವಿ ಮಾಡಿದರು.

ನರಗುಂದ: ಪಟ್ಟಣದ ಜನತೆ ಈ ಬೇಸಿಗೆಯ ಸಮಯದಲ್ಲಿ ನಲ್ಲಿಗಳ ನೀರನ್ನು ಸಾರ್ವಜನಿಕರು ಮಿತವಾಗಿ ಬಳಕೆ ಮಾಡಬೇಕೆಂದು ಶಾಸಕ ಸಿ.ಸಿ. ಪಾಟೀಲ ಮನವಿ ಮಾಡಿದರು.

ಅವರು ಮಂಗಳವಾರ ಪಟ್ಟಣದ ಪ್ರವಾಸ ಮಂದಿರದಲ್ಲಿ ಪುರಸಭೆ ವಿವಿಧ ಅಭಿವೃದ್ಧಿ ವಿಷಯ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ 23 ವಾರ್ಡ್‌ಗಳಲ್ಲಿ ಸರಿಯಾಗಿ ನಲ್ಲಿಗಳಿಗೆ ನೀರು ಬರುತ್ತಿಲ್ಲವೆಂದು ಜನರ ಆರೋಪವಾಗಿದೆ, ಆದ್ದರಿಂದ ಪುರಸಭೆ ಅಧಿಕಾರಿಗಳು ನಲ್ಲಿಗಳಿಗೆ ಸರಿಯಾಗಿ ಈ ಬೇಸಗಿಯಲ್ಲಿ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಬೇಸಗಿ ಸಮಯದವರಗೆ ಸಾರ್ವಜನಿಕರು ನಲ್ಲಿಗಳ ನೀರನ್ನು ಮಿತವಾಗಿ ಬಳಸಬೇಕೆಂದು ಹೇಳಿದರು.

ನೂತನ ಪುರಸಭೆ ಕಟ್ಟಡ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಬೇಗ ಕಾಮಗಾರಿ ಮಾಡದಿದ್ದರೆ ಅವರಿಂದ ಮುಚ್ಚಳಕ್ಕೆ ಬರೆಸಿಕೊಂಡು ಬೇರೆಯವರಿಗೆ ಗುತ್ತಿಗೆ ನೀಡಿ ಈ ಕಾಮಗಾರಿ ಮುಗಿಸಿ, ಅದೇ ರೀತಿ ಸಂತೆ ಮಾರುಕಟ್ಟೆ ಕಾಮಗಾರಿಯನ್ನು ಜೂನ್‌ ತಿಂಗಳದೊಳಗೆ ಮುಗಿಸಿ ಸಂತೆ ನಡೆಯಲು ಅನುಕೂಲ ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು. ಕೆರೆ ದಂಡಿಯಲ್ಲಿ ಮನೆ ಹಾಕಿಕೊಂಡ ವಾಸ ಮಾಡುವ 42 ಜನರ ಮೇಲೆ ಕೆರೆ ಅಭಿವೃದ್ಧಿ ಮಂಡಳಿ ಪ್ರಕರಣ ಹಾಕಿದೆ, ಈ ಬಗ್ಗೆ ಪುರಸಭೆ ಅಧಿಕಾರಿಗಳು ಈ 42 ಜನರಿಗೆ ಹೊಸ ಜನತಾ ಕಾಲೋನಿಯಲ್ಲಿ ಮನೆಗಳನ್ನು ನೀಡಬೇಕು, ಈ ಪ್ರಕರಣದಿಂದ ಈ ಜನರಿಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಪುರಸಭೆ ಅಧಿಕಾರಿಗಳು ಪಟ್ಟಣದ 23 ವಾರ್ಡ್‌ಗಳಲ್ಲಿ ಬೇಸಗಿಯ ಸಮಯದಲ್ಲಿ ಸಾರ್ವಜನಿಕರು ನೀರು ಮಿತವಾಗಿ ಬಳಕೆ ಮಾಡಬೇಕೆಂದು ಜಾಗೃತಿ ಮೂಡಿಸಬೇಕು, ಅದೇ ರೀತಿ ಪುರಸಭೆ ಸದಸ್ಯರು ತಮ್ಮ ವಾರ್ಡಗಳಲ್ಲಿ ನಲ್ಲಿ ನೀರು ಚರಂಡಿಗೆ ಹರಿಯದ ಹಾಗೆ ಗಮನ ಹರಿಸಬೇಕು, ಅಧಿಕಾರಿಗಳು ನಲ್ಲಿಗಳಿಗೆ ಮೀಟರ್ ಅಳವಡಿಸಬೇಕೆಂದು ಸೂಚಿಸಿದರು.

ಪುರಸಭೆ ಉಪಾಧ್ಯಕ್ಷೆ ಕಾಸವ್ವ ಮಳಗಿ, ಉಮೇಶಗೌಡ ಪಾಟೀಲ, ಬಸು ಪಾಟೀಲ, ಪ್ರಕಾಶ ಪಟ್ಟಣಶಟ್ಟಿ, ಸುನೀಲ ಕುಷ್ಟಗಿ, ಪ್ರಕಾಶ ಹಾದಿಮನಿ, ರಾಚನಗೌಡ ಪಾಟೀಲ, ರೇಣುವ್ವ ಕಲಾರಿ, ಪ್ರಶಾಂತ ಜೋಶಿ, ಹುಸೇನಸಾಬ ಗೊಟರು, ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚಂರಡಿ ಮಂಡಳಿ ಅಧಿಕಾರಿ ಹೊಸಮನಿ, ಮಂಜುನಾಥ, ಪವಾಡಪ್ಪ ವಡ್ಡಗೇರಿ, ಹನಮಂತ ಹವಾಲ್ದಾರ, ಮಾರುತಿ ಅರ್ಬಾನ, ನಾಗರಾಜ ನೆಗಳೂರ, ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ, ಸಿಬ್ಬಂದಿ ಇದ್ದರು.