ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಮಾಧ್ಯಮಗಳು ಪ್ರಾಮಾಣಿಕ, ವಸ್ತುನಿಷ್ಠ ಸುದ್ದಿಗಳನ್ನು ಬಿತ್ತರಿಸಿ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಪ್ರಯತ್ನವನ್ನು ಮಾಡಬೇಕು. ಇದು ಉದ್ಯಮದ ರೂಪ ಪಡೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಚೆಗೆ ನಡೆದ ಹುಲಿ ಸಾವಿನ ಕುರಿತಾದ ಮಾಹಿತಿಯನ್ನು ಕಲೆಹಾಕಿ ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮ ವಹಿಸುವಲ್ಲಿ ಮಾಧ್ಯಮದ ಪಾತ್ರ ಮುಖ್ಯವಾಗಿರುವುದು ಪತ್ರಕರ್ತರ ಬದ್ಧತೆಗೆ ಸಾಕ್ಷಿಯಾಗಿದೆ. ಆದರೆ, ನಿಜವಾದ ತಪ್ಪಿತಸ್ಧರಿಗೆ ಶಿಕ್ಷೆಯಾಗುವ ಬದಲು ಹೊಸದಾಗಿ ಬಂದ ಅಧಿಕಾರಿಗಳಿಗೆ ಮಾತ್ರ ಶಿಕ್ಷೆಯಾದದ್ದು ಸರಿಯಲ್ಲ ಎಂದರು.ತಾಲೂಕಿನ ಕಾರ್ಯನಿರತ ಪತ್ರಕರ್ತರಿಗೆ ಭವನ ನಿರ್ಮಾಣ ಮಾಡಲು ನಿವೇಶನವನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಅವರಿಗೆ ನೀಡುವ ಕೆಲಸವನ್ನು ಮಾಡಲಾಗುವುದು. ಅಲ್ಲದೆ ತಾಲೂಕಿನ ಪತ್ರಕರ್ತರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ನಿವೇಶನ ನೀಡಲೂ ಕೂಡ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಬಿತ್ತರಿಸುವ ಭರಾಟೆಯಲ್ಲಿ ಅದೇ ನ್ಯಾಯ ಕೊಡಿಸಿಕೊಡವಂತೆ ಬಿಂಬಿಸುತ್ತಿರುವುದು ಅಪಾಯವಾಗಿದೆ. ಮುದ್ರಣ ಮಾಧ್ಯಮ ಇಂದಿಗೂ ಕೂಡ ಒಂದು ಶಕ್ತಿಶಾಲಿ ಮಾಧ್ಯಮವಾಗಿ ತನ್ನ ಘನತೆಯನ್ನು ಉಳಿಸಿಕೊಂಡಿದೆ. ಪ್ರಾಮಾಣಿಕತೆ ಪತ್ರಕರ್ತರ ಮೂಲಗುಣವಾಗಬೇಕು. ಸಮಾಜಕ್ಕೆ ಸತ್ಯ ತಿಳಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.ಮಾಜಿ ಶಾಸಕ ಎಸ್. ಬಾಲರಾಜು ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಕೆಲಸ ನಿರ್ವಹಿಸಿ ಎಲ್ಲಾ ತಪ್ಪುಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಿದೆ. ಆದರೆ ಸಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಬಿತ್ತಿರುವ ಧಾವಂತದಲ್ಲಿ ಸತ್ಯ ಮರೆಮಾಚುತ್ತಿರುವುದು ಅಪಾಯವಾಗಿದೆ. ಆದರೆ ಮುದ್ರಣ ಮಾಧ್ಯಮ ಇನ್ನೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು ಇದರಿಂದ ಸಮಾಜದ ಎಲ್ಲಾ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಿದೆ ಎಂದರು.ದತ್ತಿ ಪ್ರಶಸ್ತಿ ಪ್ರದಾನ, ವೈದ್ಯ ಕುಟುಂಬಕ್ಕೆ ಸನ್ಮಾನ:ಪತ್ರಿಕಾ ರಂಗದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ತಾಲೂಕಿನ ಪತ್ರಕರ್ತರಾದ ವೈ.ಕೆ.ಮೋಳೆ ನಾಗರಾಜು, ಮದ್ದೂರು ಪುರುಷೋತ್ತಮ, ಮದ್ದೂರು ಮಂಜುನಾಥ ಪತ್ರಿಕಾ ವಿತರಕ ಗೂಳೀಪುರ ಸುಭಾಷ್‌ರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕಳೆದ ೪೦ ವರ್ಷಗಳಿಂದಲೂ ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಕುಟುಂಬವಾದ ಡಾ. ರಮೇಶ್ ಉಡುಪ, ಡಾ. ಶಶಿಕಲಾ ರಮೇಶ್, ಡಾ. ಕಾರ್ತಿಕ್ ಉಡುಪ, ಡಾ. ಮೇಘ ಕಾರ್ತಿಕ್‌ಗೆ ಸನ್ಮಾನಿಸಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ್ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ರಾಜ್ಯಮಂಡಲಿ ಸದಸ್ಯ ಗೂಳೀಪುರ ನಂದೀಶ್, ತಾಲೂಕು ಅಧ್ಯಕ್ಷ ಅಂಬಳೆ ವೀರಭದ್ರನಾಯಕ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಕಮರವಾಡಿ ರೇವಣ್ಣ ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಆರ್. ನಂಜುಂಡಯ್ಯ, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಕಿನಕಹಳ್ಳಿ ರಾಚಯ್ಯ, ರೈತ ಸಂಘದ ಹೊನ್ನೂರು ಪ್ರಕಾಶ್, ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ, ಜೆ. ಶ್ರೀನಿವಾಸ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿ. ನಾಗರಾಜು, ಪ್ರಧಾನ ಕಾರ್ಯದರ್ಶಿ ಡಿ.ಪಿ. ಮಹೇಶ್ ಜಿಲ್ಲಾ ನಿರ್ದೇಶಕ ಫೈರೋಜ್ ಖಾನ್, ಪದಾಧಿಕಾರಿಗಳಾದ ಯರಿಯೂರು ನಾಗೇಂದ್ರ, ವೈ.ಕೆ.ಮೋಳೆ ನಾಗರಾಜು, ಸೈಯದ್ ಇರ್ಫಾನ್, ಸೈಯದ್ ಮುಷರಫ್, ಕೆಸ್ತೂರು ಪ್ರಸನ್ನ, ಬೂದಂಬಳ್ಳಿ ಗಿರೀಶ್, ಅಂಬಳೆ ರವಿ, ರಂಗಸ್ವಾಮಿ, ಗೂಳೀಪುರ ವಿವೇಕಾನಂದ, ಕೊಮಾರನಪುರ ರಾಜಶೇಖರ್ ಇದ್ದರು.