ಫೆ. 20ರಂದು ಬೆಳಗ್ಗೆ 6 ಗಂಟೆಗೆ ಸೋಮೇಶ್ವರ ದೇಗುಲದ ಆವರಣದಲ್ಲಿ ಪುಲಿಗೆರೆ ಉತ್ಸವಕ್ಕೆ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ. ರಾವ್ ಹಾಗೂ ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಅವರು ಚಾಲನೆ ನೀಡುವರು.
ಲಕ್ಷ್ಮೇಶ್ವರ: ಇನ್ಫೋಸಿಸ್ ಪ್ರತಿಷ್ಠಾನದ ಆಶ್ರಯದಲ್ಲಿ ಫೆ. 20, 21 ಹಾಗೂ 22ರಂದು ಮೂರು ದಿನಗಳ ಕಾಲ ನಡೆಯುವ ಪುಲಿಗೆರೆ ಉತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ. ರಾವ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ. 20ರಂದು ಬೆಳಗ್ಗೆ 6 ಗಂಟೆಗೆ ಸೋಮೇಶ್ವರ ದೇಗುಲದ ಆವರಣದಲ್ಲಿ ಪುಲಿಗೆರೆ ಉತ್ಸವಕ್ಕೆ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ. ರಾವ್ ಹಾಗೂ ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಅವರು ಚಾಲನೆ ನೀಡುವರು. 3 ದಿನಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.ಈ ವರ್ಷ ನಡೆಯುವ ಪುಲಿಗೆರೆ ಉತ್ಸವದಲ್ಲಿ ನಾಡಿನ ಹೆಸರಾಂತ ಸಂಗೀತಗಾರರು, ಕಲಾವಿದರು, ಭರತನಾಟ್ಯ ಪ್ರವೀಣರು, ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಂಗೀತಗಾರರು ಈ ವರ್ಷ ತಮ್ಮ ಸಂಗೀತ ಸೇವೆ ನೀಡಲಿದ್ದಾರೆ. ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹರಡುವ ಕಾರ್ಯ ಮಾಡಬೇಕು ಎನ್ನುವುದು ಇನ್ಫೋಸಿಸ್ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ.
ಭಾರತೀಯ ವಿದ್ಯಾಭವನದ ಕಾರ್ಯವು ಸನಾತನ ಸಂಸ್ಕೃತಿ ಕಾಪಾಡುವುದು ಮೂಲ ಉದ್ದೇಶವಾಗಿದೆ. ಪುಲಿಗೆರೆ ಉತ್ಸವದಲ್ಲಿ ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಾಲಯ ಹಾಗೂ ಲಕ್ಷ್ಮೇಶ್ವರ ತಾಲೂಕಿನ ವಿವಿಧ ಪುರಾತನ ಕಾಲದ ಐತಿಹಾಸಿಕ ಸ್ಥಳಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡಲಾಗುತ್ತಿದೆ. ಸ್ಥಳೀಯ ಕಲಾವಿದರನ್ನು ಬೆಳಕಿಗೆ ತರುವ ಕಾರ್ಯ ಮಾಡುತ್ತಿದೆ. ಶ್ರದ್ಧಾಭಕ್ತಿಯಿಂದ ಪುಲಿಗೆರೆ ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡೋಣ ಎಂದರು.ಈ ವೇಳೆ ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಸುರೇಶ್ ರಾಚನಾಯ್ಕರ್, ಶಿವಯೋಗಿ ಅಂಕಲಕೋಟಿ, ಪ್ರವೀಣ ಬಾಳಿಕಾಯಿ, ಶೈಲಾ ಆದಿ, ಸುಮಾ ಚೋಟಗಲ್ಲ, ಎಸ್.ಪಿ. ಪಾಟೀಲ, ಚನ್ನಪ್ಪ ಜಗಲಿ, ಎಂ.ಕೆ. ಕಳ್ಳಿಮಠ, ಬಸಣ್ಣ ಬೆಂಡಿಗೇರಿ, ಮಾಲಾದೇವಿ ದಂದರಗಿ, ಸುಲೋಚನಾ ಜವಾಯಿ, ಇಂದುಮತಿ ಜಕ್ಕನಗೌಡರ, ಕುಬೇರಪ್ಪ ಮಹಾಂತ ಶೆಟ್ಟರ, ನೀಲಪ್ಪ ಕರ್ಜಕ್ಕಣ್ಣವರ, ಸಮೀರ್ ಪೂಜಾರ, ದಿಗಂಬರ ಪೂಜಾರ, ಪಾರ್ವತಿ ಕಳ್ಳಿಮಠ, ವಿರುಪಾಕ್ಷಪ್ಪ ಆದಿ, ಪ್ರಕಾಶ ಕೊಂಚಿಗೇರಿಮಠ, ಡಾ. ಎನ್.ಸಿ. ಪಾಟೀಲ, ಬಸವರಾಜ ಬಾಳೇಶ್ವರಮಠ, ಸುಜಾತಾ ಬಾಳಿಕಾಯಿ, ಬಸವರಾಜ ಮೆಣಸಿನಕಾಯಿ ಇದ್ದರು. ಪ್ರಾಸ್ತಾವಿಕವಾಗಿ ಸೋಮಣ್ಣ ಕೆರಿಮನಿ ಮಾತನಾಡಿದರು. ಗಂಗಾಧರ ಗುಡಗೇರಿ ನಿರೂಪಿಸಿದರು.