ಪಲ್ಸ್ ಪೋಲಿಯೋ ಮಾದರಿ ಜಾನವಾರುಗಳಿಗೆ ಲಸಿಕೆ: ಡಾ.ದೇವೇಂದ್ರಪ್ಪ

| Published : May 25 2024, 12:53 AM IST

ಸಾರಾಂಶ

ತರೀಕೆರೆ, ಜಾನವಾರುಗಳಿಗೆ ಲಸಿಕೆಯನ್ನು ಶೀಥಲೀಕರಣ ಸರಪಳಿಯಲ್ಲಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಮನೆ ಮನೆಗೆ ತೆರಳಿ ಕಾಲು ಬಾಯಿ ಜ್ವರದ ಲಸಿಕೆಯನ್ನು ಹಾಕಲಾಗಿದೆ ಎಂದು ತರೀಕೆರೆ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ದೇವೇಂದ್ರಪ್ಪ ಮಾಹಿತಿ ನೀಡಿದ್ದಾರೆ.

33656 ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಜಾನವಾರುಗಳಿಗೆ ಲಸಿಕೆಯನ್ನು ಶೀಥಲೀಕರಣ ಸರಪಳಿಯಲ್ಲಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಮನೆ ಮನೆಗೆ ತೆರಳಿ ಕಾಲು ಬಾಯಿ ಜ್ವರದ ಲಸಿಕೆಯನ್ನು ಹಾಕಲಾಗಿದೆ ಎಂದು ತರೀಕೆರೆ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ದೇವೇಂದ್ರಪ್ಪ ಮಾಹಿತಿ ನೀಡಿದ್ದಾರೆ.ರಾಷ್ಟ್ರೀಯ ಕಾರ್ಯಕ್ರಮವಾದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ತರೀಕೆರೆ ತಾಲೂಕಿನ ವ್ಯಾಪ್ತಿಯ ಸುಮಾರು 115 ಗ್ರಾಮಗಳಲ್ಲಿ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ಪೂರೈಸಿರುವ ಸಂದರ್ಭದಲ್ಲಿ ಮಾಹಿತಿ ನೀಡಿದರು.20ನೇ ಜಾನುವಾರುಗಣತಿ ಪ್ರಕಾರ 34557 ಜಾನುುವಾರುಗಳಿದ್ದು, ಅದರಲ್ಲಿ 33656 ಜಾನುವಾರುಗಳಿಗೆ ಲಸಿಕೆಯನ್ನು ರೈತರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಹಾಕಲಾಗಿದೆ. ಶೇ.97ರಷ್ಟು ಪ್ರಗತಿ ಸಾಧಿಸಲಾಗಿದೆ, ಉಳಿದ ಜಾನುವಾರುಗಳಿಗೆ ಕೂಂಬಿಂಗ್ ಲಸಿಕೆ ಕೈಗೊಂಡು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.6 ತಂಡಗಳಲ್ಲಿ ತರೀಕೆರೆ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಸಪ್ಪ ಜಲ್ಲೇರ ತಾಲೂಕಿನ ನೋಡೆಲ್ ಅಧಿಕಾರಿಗಳಾಗಿ, ಆರು ತಂಡಗಳನ್ನು ರಚಿಸಿ, ತಂಡದ ಮುಖ್ಯಸ್ಥರಾಗಿ ಪಶು ವೈದ್ಯಾಧಿಕಾರಿಗಳು, ಲಸಿಕೆದಾರರಾಗಿ 33 ಸಿಬ್ಬಂದಿ, 26 ಜನ ಪಶು ಸಖಿಯರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಪ್ರತಿದಿನ ಲಸಿಕೆ ಹಾಕಲಾದ ಜಾನುವಾರುಗಳ ವಿವರವನ್ನು ದೈನಂದಿನ ಪ್ರಗತಿಯನ್ನು ಆನ್ ಲೈನ್ ನಲ್ಲಿ ಹಾಗೂ ಭಾರತ್ ಪಶು ಆಪ್ ನಲ್ಲಿ ಎಲ್ಲಾ ಜಾನುವಾರುಗಳ ಕಿವಿ ಓಲೆ ಸಂಖ್ಯೆ ನಮೂದಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

24ಕೆಟಿಆರ್.ಕೆ.1ಃ

ತರೀಕೆರೆ ತಾಲೂಕಿನಲ್ಲಿ ಜಾನುವಾರುಗಳಿಗೆ ಹಾಕಲಾಗಿರುವ ಕಾಲುಬಾಯಿ ಜ್ವರದ ಲಸಿಕೆಯ ಪರಿಶೀಲನಾ ಕಾರ್ಯ ನಡೆಸಲಾಯಿತು.