ಮಾಗಡಿ: ಪಟ್ಟಣದ ಕಲ್ಯಾಗೇಟ್‌ನಲ್ಲಿ ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಆಚರಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪನಮನ, ಕೇಕ್ ಕತ್ತರಿಸಿ, ಅನ್ನದಾನ ಮಾಡಲಾಯಿತು
ಮಾಗಡಿ: ಪಟ್ಟಣದ ಕಲ್ಯಾಗೇಟ್‌ನಲ್ಲಿ ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಆಚರಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪನಮನ, ಕೇಕ್ ಕತ್ತರಿಸಿ, ಅನ್ನದಾನ ಮಾಡಲಾಯಿತು. ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಪುನೀತ್ ರಾಜ್‌ಕುಮಾರ್ ಕೇವಲ ನಟರಾಗಿ ಮಾತ್ರವಲ್ಲದೆ, ಕೋಟ್ಯಂತರ ಜನರ ಹೃದಯದಲ್ಲಿ ಶ್ರೇಷ್ಠ ಮಾನವತಾವಾದಿಯಾಗಿ ನೆಲೆಸಿದ್ದಾರೆ. ಅವರ ಸರಳತೆ ಮತ್ತು ಸಮಾಜಮುಖಿ ಕಾರ್ಯಗಳು ನಮಗೆಲ್ಲರಿಗೂ ಪ್ರೇರಣೆ. ಅಪ್ಪು ನಮ್ಮನ್ನಗಲಿದ್ದರೂ ಅವರ ತತ್ವಗಳು ಮತ್ತು ಅವರು ತೋರಿದ ದಾರಿ ಎಂದಿಗೂ ಜೀವಂತ. ಅವರ ನೆನಪಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವುದು ನಮಗೆ ಹೆಮ್ಮೆ ತರುತ್ತದೆ ಎಂದರು.
ತಿರುಪತಿ ತಿರುಮಲೆ ಪಾದಯಾತ್ರೆ ಸಮಿತಿ ಅಧ್ಯಕ್ಷ ಎಂ.ಜಿ.ಗೋಪಾಲ್ ಮಾತನಾಡಿ, ಪವರ್ ಸ್ಟಾರ್ ಎಂದೆ ಖ್ಯಾತಿ ಪಡೆದಿದ್ದ ಪುನೀತ್ ಸಣ್ಣ ವಯಸ್ಸಿನಲ್ಲೇ ಸಿನಿಮಾ ರಂಗದ ಜೊತೆಗೆ ಅವರು ಮಾಡಿದ ದಾನ, ಶಿಕ್ಷಣ ಮತ್ತು ಅನಾಥಾಶ್ರಮಗಳಿಗೆ ನೀಡುತ್ತಿದ್ದ ಬೆಂಬಲ ಅವಿಸ್ಮರಣೀಯ. ಕನ್ನಡಿಗರ ಪಾಲಿನ ಶಾಶ್ವತ ರತ್ನ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿ, ಅವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಸಾರುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಅಭಿಮಾನಿಗಳಾದ ಚಂದ್ರಣ್ಣ, ರೇಖಪ್ಪ, ಮೋಹನ್, ಮಂಜುನಾಥ್, ಪುಟ್ಟರಾಜು, ನಾಗಣ್ಣ ಸೇರಿದಂತೆ ನೂರಾರು ಅಪ್ಪು ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
(ಫೋಟೋ ಕ್ಯಾಫ್ಞನ್)ಮಾಗಡಿಯ ಕಲ್ಯಾಗೇಟ್‌ನಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಡಾ.ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಮಾಡಲಾಯಿತು.