ಪುನೀತ್ ಸೇವಾ ಮನೋಭಾವ ಯುವ ಪೀಳಿಗೆಗೆ ಮಾದರಿ

| Published : Mar 18 2025, 12:35 AM IST

ಸಾರಾಂಶ

ಹೊಸಕೋಟೆ: ಪುನಿತ್ ರಾಜಕುಮಾರ್ ತಮ್ಮ ಸೇವಾ ಕಾರ್ಯಗಳ ಮೂಲಕ ಇಂದಿಗೂ ನಮ್ಮಗಳ ಮನಸ್ಸುಗಳಲ್ಲಿ ಬೆರೆತು ಅಜರಾಮರಾಗಿದ್ದಾರೆ ಎಂದು ಕರುನಾಡ ಪ್ರಜಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್.ಎಂ.ಸುಬ್ಬರಾಜ್ ತಿಳಿಸಿದರು.

ಹೊಸಕೋಟೆ: ಪುನಿತ್ ರಾಜಕುಮಾರ್ ತಮ್ಮ ಸೇವಾ ಕಾರ್ಯಗಳ ಮೂಲಕ ಇಂದಿಗೂ ನಮ್ಮಗಳ ಮನಸ್ಸುಗಳಲ್ಲಿ ಬೆರೆತು ಅಜರಾಮರಾಗಿದ್ದಾರೆ ಎಂದು ಕರುನಾಡ ಪ್ರಜಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್.ಎಂ.ಸುಬ್ಬರಾಜ್ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಚಿತ್ರನಟ ದಿವಂಗತ ಡಾ ಪುನಿತ್ ರಾಜಕುಮಾರ್ ೫೦ನೇ ಹುಟ್ಟುಹಬ್ಬದ ಪ್ರಯುಕ್ತ ತಾಲೂಕು ಕಚೇರಿಗೆ ಆಗಮಿಸುವ ನಾಗರಿಕರಿಗೆ, ರೈತರಿಗೆ ಹಾಗೂ ಸಿಬ್ಬಂದಿಗೆ ಅನ್ನ ಸಂತರ್ಪಣೆ ನೆರವೇರಿಸಿ ಮಾತನಾಡಿ,

ಪುನೀತ್ ರಾಜ್ ಕುಮಾರ್ ಬಾಲ್ಯದಿಂದಲೆ ಚಿತ್ರಗಳಲ್ಲಿ ನಟಿಸಿ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಜಾಗ ಪಡೆದಿದ್ದರು. ಅವರ ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಅವರು ಮನೆ ಮಗನಾಗಿದ್ದರು. ಆದರೆ ಅವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೆ ಕೋಟ್ಯಂತರ ಕನ್ನಢಾಭಿಮಾನಿಗಳು ಕಣ್ಣೀರು ಸುರಿಸಿದ್ದರು. ಅದಕ್ಕೂ ಮಿಗಿಲಾಗಿ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿದಂತೆ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಸದ್ದಿಲ್ಲದೆ ಮಾಡುವ ಮೂಲಕ ಮನುಕುಲಕ್ಕೆ ದೊಡ್ಡ ಪಾಠ ಕಲಿಸಿಕೊಟ್ಟರು.

ಪ್ರತಿ ಮನುಷ್ಯನಿಗೂ ಹುಟ್ಟು ನಿಶ್ಚಿತ, ಸಾವು ಖಚಿತ ಎನ್ನುವುದನ್ನು ಅರಿತುಕೊಂಡು ಜೀವಿತಾವಧಿಯಲ್ಲಿ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಟ್ಟು ಹೋಗಬೇಕು. ಆದ್ದರಿಂದಲೆ ಅವರ ಹುಟ್ಟುಹಬ್ಬಕ್ಕೆ ಅನ್ನದಾನ ಮಾಡುವ ಕಾರ್ಯ ಮಾಡಿ ಅವರಿಗೆ ಗೌರವಿಸಿ ಸ್ಮರಿಸಿದ್ಧೇವೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸೋಮಶೇಖರ್, ಎನ್.ಕೆ ಲಕ್ಷ್ಮಣ್, ನವೀನ್ ರೆಡ್ಡಿ, ಇಟ್ಟಸಂದ್ರ ಮೂರ್ತಿ, ಶಿವು, ರಂಜಿತ್, ಹರೀಶ್, ರವಿ ಸೇರಿ ಹಲವರು ಹಾಜರಿದ್ದರು.

ಫೋಟೋ: 17 ಹೆಚ್‌ಎಸ್‌ಕೆ 2

ಹೊಸಕೋಟೆಯ ತಾಲೂಕು ಕಚೇರಿ ಆವರಣದಲ್ಲಿ ದಿ. ಡಾ ಪುನಿತ್ ರಾಜಕುಮಾರ್ 50ನೇ ಜನ್ಮದಿನಾಚರಣೆ ಪ್ರಯುಕ್ತ ಯೋಜನಾ ಪ್ರಾಧಿಕಾರ ನಿರ್ದೇಶಕ ಡಾ. ಸುಬ್ಬರಾಜ್ ಅನ್ನದಾಸೋಹ ನೆರವೇರಿಸಿದರು.